ದೊಡ್ಡಬಳ್ಳಾಪುರ, (ಜುಲೈ.08): ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿನ ಮನೆ ಡೆಮಾಲಿಷನ್ ವೇಳೆ ಅನುಮಾನಸ್ಪದವಾಗಿ ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆ ಆಗಿವೆ.
ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಇಇ ಶಿವಕುಮಾರ್ ಎಂಬುವವರ ಮನೆಯಲ್ಲಿ ಈ ಯಂತ್ರಗಳು ಪತ್ತೆ ಆಗಿವೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದ್ದಾರೆ.
2018ರ ಚುನಾವಣೆಯಲ್ಲಿ ಬಳಸಿ ರಿಜೆಕ್ಟ್ ಆಗಿದ್ದವೆನ್ನಲಾದ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ಡೆಮಾಲಿಷನ್ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್ ಯೂನಿಟ್ ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಈ ಕುರಿತಂತೆ ಶಿವಕುಮಾರ್ ಅವರಿಗೆ ನೋಟೀಸ್ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ವರದಿಯನ್ನು ನೀಡಿದ್ದಾರೆ. ಸದ್ಯ ರಿಜೆಕ್ಟ್ ಆಗಿರುವ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳನ್ನು ಯಾಕಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು.?, ಇದು 2018ರ ಯಂತ್ರಗಳೇ ಎಂಬ ಪ್ರಶ್ನೆ ಕಾಡುತ್ತಿದ್ದು, ತನಿಖೆಯ ನಂತರ ಸ್ಪಷ್ಟ ಚಿತ್ರ ಸಿಗಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….