ಬಿಜೆಪಿ ಶಾಸಕರ ಅಮಾನತು ಖಂಡಿಸಿ ಸ್ಪೀಕರ್ ಕಚೇರಿ ಬಳಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು, (ಜುಲೈ.19): ವಿಧಾನಸಭೆ ಅಧಿವೇಶನದಲ್ಲಿ ಅಸಭ್ಯ ಹಾಗೂ ಅಗೌರವದಿಂದ ವರ್ತನೆ ಆರೋಪದ ಮೇಲೆ  10 ಮಂದಿ ಬಿಜೆಪಿ ಸದಸ್ಯರನ್ನು ಸದನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸಭೆಯ ಸ್ಪೀಕರ್ ಕಚೇರಿ ಎದುರು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.

ಯುಪಿಎ ಸಭೆಗೆ ಅಧಿಕಾರಿಗಳನ್ನು ನೇಮಿಸಿದ ಸರ್ಕಾರದ ನಿಲುವನ್ನು ಖಂಡಿಸಿ ಇಂದು ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ತೀವ್ರ ಪತ್ರಿಭಟನೆ ನಡೆಸಿದವು‌.

ಪ್ರತಿಭಟನೆ ಕಾರಣ ವಿಳಂಬವಾಗಿ ಆರಂಭವಾದ ಅಧಿವೇಶನದಲ್ಲಿ ಹಲವು ಮಹತ್ತರವಾದ ವಿಧೇಯಕಗಳು ಮಂಡನೆಯಾದವು.

ಈ ವೇಳೆ ಪ್ರತಿಭಟನೆ ತೀವ್ರಗೊಂಡಿದ್ದು, ಉಪಸಭಾಪತಿ ಪೀಠದಲ್ಲಿದ್ದ ವೇಳೆ ಪ್ರತಿಪಕ್ಷಗಳ ಸದಸ್ಯರು ಪೇಪರ್ ಗಳನ್ನು ಹರಿದು ಎಸೆಯುವ ಮೂಲಕ ಗದ್ದಲ ತೀವ್ರಗೊಳಿಸಿದರು. ಇದರಿಂದ ಸದನವನ್ನು ಮೂರು ಗಂಟೆಗೆ ಮುಂದೂಡಲಾಯಿತು.

ನಂತರ ಆರಂಭದ ಅಧಿವೇಶನದಲ್ಲಿ ಅಸಭ್ಯ ವರ್ತನೆ ಹಾಗೂ ಅಗೌರವವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಶಾಸಕರಾದ ಸಿ.ಎನ್.ಅಶ್ವಥ್ ನಾರಾಯಣ್, ವಿ.ಸುನೀಲ್ ಕುಮಾರ್, ಆರ್.ಅಶೋಕ್, ವೇದ ವ್ಯಾಸ್ ಕಾಮತ್, ಯಶ್ ಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ್ ಕೋಟ್ಯಾನ್, ಅರವಿಂದ್ ಬೆಲ್ಲದ್, ಆರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನ ಮುಗಿಯುವ ವರೆಗೆ ಬರದಂತೆ ಅಮಾನತ್ತು ಮಾಡಿ ಪ್ರಸ್ತಾವನೆ ಅಂಗೀಕಾರ ಮಾಡಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!