ಮಾಂಸಹಾರಿಗಳಿಗೆ ಗೊಂದಲ: ಏನೀ ಅಧಿಕ ಮಾಸ.?| ಮಾಂಸಹಾರ ಸೇವಿಸಬಹುದೇ..?, ಸೇವಿಸಬಾರದೇ..? ಈ ವರದಿ ಓದಿ

18ನೇಯ ತಾರೀಕು ಮಂಗಳವಾರದಿಂದ ಅಧಿಕ ಶ್ರಾವಣ ಮಾಸ ಪ್ರಾರಂಭವಾಗಿದೆ. ಶ್ರಾವಣ ಅಧಿಕ ಮಾಸವು ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಈ ಮಾಸವನ್ನು ಮಲಮಾಸ, ಕ್ಷಯಮಾಸ, ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಮಾತ್ರ ಅಧಿಕ ಮಾಸ ಬರುತ್ತದೆ.

ಈ ಮಾಸದಲ್ಲಿ ನಿಜ ಶ್ರಾವಣದಲ್ಲಿದ್ದಂತೆ ಯಾವುದೇ ಹಬ್ಬಗಳು ಇರುವುದಿಲ್ಲ. 

ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರಲು ಕಾರಣ: ಎರಡು ವರ್ಷಗಳ ನಡುವೆ ಸುಮಾರು 11 ದಿನಗಳ ಅಂತರವಿದೆ. ಭಾರತೀಯ ಹಿಂದೂ ಗಣನಾ ಪದ್ಧತಿಯ ಪ್ರಕಾರ, ಪ್ರತ್ಯೇಕವಾಗಿ ಸೂರ್ಯ ವರ್ಷ 365 ದಿನ ಮತ್ತು 6 ಗಂಟೆಯಾಗಿರುತ್ತದೆ. ಅದೇ ಚಂದ್ರ ವರ್ಷ 354 ದಿನ ಎಂದು ಪರಿಗಣಿಸಲಾಗಿದೆ. ಇವೆರಡು ವರ್ಷಗಳ ಮಧ್ಯೆ 11 ದಿನಗಳ ಅಂತರ ಭಶ್ರ ಇರುತ್ತದೆ. ಆದ್ದರಿಂದ ಪ್ರತಿ 3 ವರ್ಷದಲ್ಲಿ ಒಂದು ಮಾಸಕ್ಕೆ ಸಮನಾಗುತ್ತದೆ. ಈ  ಕಾರಣದಿಂದ ಇದನ್ನು ಅಧಿಕ ಮಾಸವೆಂದು ಕರೆಯಲಾಗುತ್ತದೆ.

ಈ ಮಾಸದಲ್ಲಿ ಹಿಂದೂ ಧರ್ಮದ ಪವಿತ್ರ ಆಚರಣೆಗಳಾದ ನಾಮಕರಣ, ಯಜ್ಞೋಪವೀತ, ಮದುವೆ, ಗ್ರಹ ಪ್ರವೇಶ ಮತ್ತು ಹೊಸ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದನ್ನು  ಮಾಡುವುದಿಲ್ಲ ..

ಪುರುಷೋತ್ತಮ ಮಾಸ ಕ್ಷಯಮಾಸ, ಮಲಮಾಸ.. ಏಕೆಂದರೆ ಮಾಸವು ಸಂಕ್ರಾಂತಿ ರಹಿತವಾದ ಮಾಸ. ಅಂದರೆ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ  ಪ್ರತಿತಿಂಗಳು ಸಂಚಾರ ಮಾಡಿದಾಗ ಆಯಾ ರಾಶಿಯ ಸಂಕ್ರಾಂತಿ ಇರುತ್ತದೆ. ಉದಾಹರಣೆಗೆ, ಸೂರ್ಯ ಮೇಷರಾಶಿಗೆ ಹೋದಾಗ ಮೇಷ ಸಂಕ್ರಾಂತಿ ಅಧಿಕಮಾಸದಲ್ಲಿ ಸೂರ್ಯ ಯಾವುದೇ ರಾಶಿಗೆ ಪ್ರವೇಶಿಸದೆ ಒಂದೇ ರಾಶಿಯಲ್ಲಿ 2 ತಿಂಗಳುಗಳ ಕಾಲ ಇರುತ್ತಾನೆ. ಆದ್ದರಿಂದ ಸಂಕ್ರಮಣ ಇರುವುದಿಲ್ಲ..ಇದೇ ಅಧಿಕಮಾಸ.

ಭಗವಾನ್‌ ವಿಷ್ಣುವನ್ನು ಅಧಿಕ ಮಾಸದಲ್ಲಿ ಪುರುಷೋತ್ತಮ ನಾಮಕ ನಿಯಾಮಕನೆಂದು ಹೇಳುತ್ತೇವೆ. ಅಧಿಕ ಮಾಸದ  ಅಧಿಪತಿಯೆಂದು  ಕರೆಯಲಾಗುತ್ತದೆ. ವಿಷ್ಣು ಪುರಾಣದಲ್ಲಿ ಇದರ ಕತೆಯನ್ನು ವಿವರಿಸಲಾಗಿದೆ. 

ಹಿಂದೆ ಭಗವಂತ ಒಂದೊಂದು ಮಾಸವನ್ನು ಒಬೊಬ್ಬ ದೇವರುಗಳಿಗೆ ಹಂಚಿಕೆ ಮಾಡಿ ಅಧಿಕ ಮಾಸವನ್ನ ಸೂರ್ಯ ಭಗವಾನರಿಗೆ  ಹಂಚಿತ್ತಾರೆ. ಆದರೆ ಸೂರ್ಯನು ಈ ಮಾಸವು ಮಲಮಾಸ ವಾಗಿರುವುದರಿಂದ ಯಾವುದೇ ಶುಭಕಾರ್ಯಗಳನ್ನು ನೆರೆವೇರಿಸದೆ ಇರುವುದರಿಂದ ಈ ಮಾಸವನ್ನು ಶುದ್ಧಿಕರಿಸುವಂತೆ ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ. ಆಗ ಭಗವಂತನು ಪುರುಷೋತ್ತಮ ರೂಪದಲ್ಲಿ ಈ ಮಾಸಕ್ಕೆ ಅಭಿಮುಖವಾಗಿ ನಿಂತು ಈ ಮಾಸದಲ್ಲಿ ಯಾರು ಪುಣ್ಯ ಆಚರಣೆಗಳನ್ನು ಮಾಡುತ್ತಾರೋ ಅದನ್ನು  ನಾನು ಪುರುಷೋತ್ತಮ ರೂಪದಲ್ಲಿ ಸ್ವೀಕರಿಸಿ ಅವರ ಶರೀರದಲ್ಲಿನ ಪಾಪ(ಮಲ)ವನ್ನು ಕಳೆಯುತ್ತೇನೆಂದು ಹೇಳುತ್ತಾರೆ ಎಂಬ ಉಲ್ಲೇಖವಿದೆ.

ಈ ಮಾಸದಲ್ಲಿ ಸ್ನಾನ, ಧ್ಯಾನ, ದಾನ,ದೀಪಗಳಿಂದ ಪುರುಷೋತ್ತಮನ  ಆರಾಧನೆ ಮಾಡಿದರೆ ನಮ್ಮ ಜನ್ಮಜನ್ಮಾಂತರಗಳ ಪಾಪ ವಿಮೋಚನೆಯಾಗುವುದು.

ಈ ಮಾಸದಲ್ಲಿ ನಾವು ಮಾಡುವ ಯಾವುದೇ ದಾನ ಆಚರಿಸುವ ಧರ್ಮಾಚರಣೆಗಳು ಸಹ 33 ಕೋಟಿ ದೇವತೆಗಳಿಗೆ ಸೇರುತ್ತದೆ. ಕೋಟಿ ಎಂದರೆ ಸಂಸ್ಕೃತದಲ್ಲಿ ವರ್ಗ ಎಂಬರ್ಥ.

ಅಷ್ಟ(8) ವಸುಗಳು, ಏಕಾದಶ(11) ರುದ್ರರು,  ದ್ವಾದಶಾದಿತ್ಯರು(12), ಪ್ರಜಾಪತಿಬ್ರಹ್ಮ, ವಶತ್ಕಾರ, ಇವರೇ ಆ 33 ವರ್ಗದ ದೇವರುಗಳು, ನಮ್ಮನ್ನೆಲ್ಲ ಆಶೀರ್ವಾದಿಸುವವರು.

ಈ 33 ದೇವರುಗಳಲ್ಲಿ ಅಂತರ್ಗತವಾಗಿ  ಪುರುಷೋತ್ತಮ ನೆಲೆಸಿರುವ ದರಿಂದ ನಮ್ಮ ಪೂಜೆಗಳು ಅವರೆಲ್ಲರಿಗೂ ಸೇರುತ್ತವೆ. ಹೀಗಾಗಿ ಎಲ್ಲಾ ದೇವತೆಗಳ ಆಶೀರ್ವಾದ ಅಧಿಕವಾಗಿ ಲಭಿಸುತ್ತದೆ.

ಅಧಿಕ ಮಾಸದ ಮಹತ್ವ: ಹಿಂದೂ ಧರ್ಮದ ಪ್ರಕಾರ, ಪ್ರತಿಯೊಂದು ಜೀವವೂ ಪಂಚಭೂತಗಳಿಂದ ನಿರ್ಮಿತವಾಗಿರುತ್ತದೆ. ಈ ಪಂಚಮಹಾಭೂತಗಳಲ್ಲಿ ಜಲ, ಅಗ್ನಿ , ವಾಯಗುರುಭ್ಯ ಭೂಮಿ ಅಂದರೆ ಪೃಥ್ವಿ ಸಮ್ಮಿಲನವಾಗಿದೆ. ಪ್ರಕೃತಿಯ ಅನುರೂಪವಾಗಿ ಈ ಐದು ತತ್ವಗಳು ನಮ್ಮೊಂದಿಗಿರುತ್ತದೆ. 

ಅಧಿಕ ಮಾಸದಲ್ಲಿ ಸಮಸ್ತ ಧಾರ್ಮಿಕ ಕಾರ್ಯಗಳು, ಧ್ಯಾನ ,ಯೋಗ, ಪೂಜೆ, ವ್ರತಗಳು ಹಾಗೂ ಸಿದ್ಧಿ ಮೂಲಕ ಸಮ್ಮಿಲನಗೊಳಿಸಲು ಪ್ರಯತ್ನಿಸುತ್ತದೆ. ಈ ಸಂಪೂರ್ಣ ಮಾಸದಲ್ಲಿ ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಿಂದ ವ್ಯಕ್ತಿಯು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವನು. 

ಅಧಿಕ ಮಾಸದಲ್ಲಿ ಮಾಡಿದ ಧಾರ್ಮಿಕ ಕಾರ್ಯವು ಇತರ ಯಾವುದೇ ತಿಂಗಳಲ್ಲಿ ಮಾಡಿದ ಪೂಜೆಗಿಂತ 10 ಪಟ್ಟು ಹೆಚ್ಚು ಫಲಿತಾಂಶವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.

ಅಧಿಕ ಮಾಸದಲ್ಲಿ ಏನು ಮಾಡಬೇಕು..? ಏನು ಮಾಡಬಾರದು..?: ಅಧಿಕ ಮಾಸದಲ್ಲಿ ಹೆಚ್ಚಾಗಿ ಹಿಂದೂಗಳು ಉಪವಾಸ, ಪೂಜೆ, ವ್ರತ, ಧ್ಯಾನ, ಭಜನೆ, ಕೀರ್ತನೆಗಳನ್ನು ಅವರ ಜೀವನ ಶೈಲಿಯನ್ನಾಗಿ ಮಾಡಿಕೊಳ್ಳುತ್ತಾರೆ.

ಪೌರಾಣಿಕ ಸಿದ್ಧಾಂತದ ಪ್ರಕಾರ, ಈ ಮಾಸದ ಸಮಯದಲ್ಲಿ ಯಜ್ಞ, ಹವನ ಅಷ್ಟೇ ಅಲ್ಲದೆ ಶ್ರೀಮದ್ ದೇವಿ ಭಾಗವತ, ಶ್ರೀ ಭಗವದ್ ಪುರಾಣ, ಶ್ರೀ ವಿಷ್ಣು ಪುರಾಣವನ್ನು, ಶ್ರೀ ವಿಷ್ಣು ಸಹಸ್ರನಾಮಾವಳಿ, ಭವಿಷ್ಯೋತ್ತರ ಪುರಾಣ ಇನ್ನೂ ಇತ್ಯಾದಿಗಳನ್ನು ಕೇಳುವುದು, ಜಪಿಸುವುದು ವಿಶೇಷ ರೂಪದಲ್ಲಿ ಫಲದಾಯಕವಾಗಿರುತ್ತದೆ. 

ಅಧಿಕ ಮಾಸದಲ್ಲಿ ವಿಷ್ಣು ಮಂತ್ರವನ್ನು ಜಪಿಸುವ ಸಾಧಕರಿಗೆ ಭಗವಂತನಾದ ವಿಷ್ಣು ಸ್ವಯಂ ಆಶೀರ್ವಾದವನ್ನು ನೀಡುತ್ತಾನೆ. ಅವರ ಪಾಪಗಳು ಕರ್ಮಗಳು ನಾಶವಾಗುತ್ತದೆ ಮತ್ತು ಅವರ ಆಸೆಗಳು ಈಡೇರುತ್ತವೆ. ವಿಶೇಷ ವರದಿ ಗಣೇಶ್. ಎಸ್., ದೊಡ್ಡಬಳ್ಳಾಪುರ.

ಈ ವರದಿ ಓದಿದ ನಂತರ ಜುಲೈ.18ರ ನಂತರ ಮಾಂಸಾಹಾರ ಸೇವಿಸುವುದು, ಸೇವಿಸದೇ ಇರುವುದು ಮಾಂಸಾಹಾರಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!