ಹರಿತಲೇಖನಿ ದಿನದ ಚಿತ್ರ: ಬೆಟ್ಟದ ರಂಗನಾಥಸ್ವಾಮಿ ದೇವಾಲಯ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆಯಲ್ಲಿ ಬೆಟ್ಟದ ರಂಗನಾಥಸ್ವಾಮಿ ದೇವಾಲಯವು 500-600 ಅಡಿ ಎತ್ತರದ ಬೆಟ್ಟದಿಂದ ಶಿಲ್ಪ ಕಲೆಯ ಸೌಂದರ್ಯವನ್ನು ಪುರಾತನ ಸಂಸ್ಕೃತಿಯನ್ನು ಸುರಿದು ಮಾನವನಿಗೆ ಮೋಕ್ಷ ನೀಡುವ ಮಾಹಾಕ್ಷೇತ್ರವಿದು.

ಈ ಬೆಟ್ಟವು ರೈಲು ಮಾರ್ಗದ ಇನ್ನೊಂದು ಬದಿಯಿದ್ದು. ಹಳ್ಳಿಯಿಂದ ಸ್ವಲ್ಪ ದೂರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ರಂಗನಾಥ ಸ್ವಾಮಿಯ ದೇವಾಲಯವು ಮರಕ್ಕೆ ಹೊಂದಿಕೊಂಡಿರುವ ಗುಹೆಯಲ್ಲಿಯೇ ಕಟ್ಟಲ್ಪಟ್ಟಿದೆ. ಈ ದೇವಾಲಯವು ನಕ್ಷತ್ರಾಕೃತಿಯಲ್ಲಿದೆ. 

ದೇವಾಲಯದ ಸುತ್ತಲಿನ ಪರಿಸರಗಳಿಂದ ನಮಗೆ ಪಕ್ಕದ ಹಳ್ಳಿಯ ಬಗ್ಗೆ ಸಾಕಷ್ಟು ತಿಳುವಳಿಕೆಯುಂಟಾಗುತ್ತದೆ. ಈ ಹಳ್ಳಿಯು ಬೆಟ್ಟದ ಸಾತೇನಹಳ್ಳಿ ಎಂದು ಹೆಸರಾಗಿದೆ. ಸುತ್ತಲೂ ಹಸುರಿನ ಹೊಲಗದ್ದೆಗಳು ಕಂಡು ಬರುವವು.

ರಂಗನಾಥ ಸ್ವಾಮಿಯ ದೇವಾಲಯಕ್ಕೆ ಎರಡು ಮುಖ್ಯ ಪ್ರವೇಶ ದ್ವಾರಗಳಿದ್ದು, ಒಂದು ನೇರವಾಗಿ ಗರ್ಭಗುಡಿಗೆ ಕರೆದೊಯ್ಯುತ್ತದೆ. ಇನ್ನೊಂದು ಮಾರ್ಗವು ಹನುಮಂತನ ಮೂರ್ತಿ ಇರುವಲ್ಲಿಯೂ ನಂತರ ಮೊಗಸಾಲೆಗೂ ಕರೆದೊಯ್ಯುತ್ತದೆ.

ವೈಖಾನಸ ಆಗಮವೆಂಬ ಒಂದು ವಿಶಿಷ್ಟ ಕ್ರಮದಲ್ಲಿ ದೇವಾಲಯವನ್ನು ಶುದ್ದಗೊಳಿಸಲಾಗುತ್ತದೆ. ಮತ್ತು ಪೂಜಾದಿಗಳನ್ನು ನೆರವೇರಿಸುತ್ತಾರೆ. ಮೇಘ ಮಾಸದಲ್ಲಿ ಪುಷ್ಯ ನಕ್ಷತ್ರದ ದಿನ ಅಂದರೆ ಪೌರ್ಣಮಿಯ ಹಿಂದಿನ ದಿನ ತ್ರಯೋದಶಿ ಚತುರ್ದಶಿಯಂದು ನಡೆಯುವ ಸ್ವಾಮಿಯ ರಥೋತ್ಸವ ಕಾಲದಿಂದ 15 ದಿನಗಳವರೆಗೆ ದೊಡ್ಡದೊಂದು ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮಿಯ ಭಕ್ತಾಧಿಗಳು ಸೇರುವರು.

ಬೆಟ್ಟದ ರಂಗನಾಥ ಸ್ವಾಮಿಯ ಈ ದೇವಾಲಯವು ಹೊಯ್ಸಳರ ಶೈಲಿಯದಾಗಿದೆ. ರಂಗನಾಥಸ್ವಾಮಿಯ ಈ ದೇವಾಲಯವು ಹರಿಹರರ ಅಭಿನ್ನತೆಯ ಸ್ಥಾನವೆಂದು ಕರ್ನಾಟಕದಲ್ಲ್ರಿ ಕ್ರಿ. ಶ. 13, 14 ನೇ ಶತಮಾನಗಳಿಂದ ಪೂಜಿಸಲ್ಪಡುತ್ತಿದೆ. ವಿಜಯನಗರ ಹಾಗೂ ಹೊಯ್ಸಳ ದೊರೆಗಳ ಅನೇಕರು ತಮ್ಮ ರಾಜ್ಯಗಳಲ್ಲಿನ ಜಾತಿಗಳ ಮಧ್ಯದಲ್ಲಿನ ಬೇದಾಂತರಗಳನ್ನು ತೊರೆದು ಹಾಕುವ ಪ್ರಯತ್ನ ಮಾಡಿದರು. ಇದರಿಂದಾಗಿ ಪೂಜೆಗಳಲ್ಲಿ ಭಾಂಧವ್ಯದ ಬೆಸುಗೆಯನ್ನುಂಟು ಮಾಡಿದರು.

ಇದರಂತೆಯೇ ವಿಜಯನಗರ ಸಾಮ್ರಾಜ್ಯ ಸ್ಥಾಪಕರಲೊಬ್ಬರಾದ ಬುಕ್ಕ ದೊರೆಯು ತನ್ನ ರಾಜ್ಯದಲ್ಲಿನ ಜೈನ ಮತ್ತು ವೈಷ್ಣವರ ನಡುವಿನ ಜಗಳಗಳನ್ನು ವಾದ ವಿವಾದಗಳನ್ನು ತೊಡೆದು ಹಾಕಿ ಅವರು ಒಂದಾಗಿ ಬಾಳುವಂತೆ ಮಾಡಿದನು. ಆತ ಸರ್ವಮತ ಪ್ರಿಯ ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಶ್ರೀ ರಾಮಾನುಜಾಚಾರ್ಯರು ಈ ಬೆಟ್ಟದ ಮೇಲೆ ಕೆಲಕಾಲ ತಂಗಿ ತಮ್ಮ ಭಕ್ತಿ ಪೂರ್ವಕವಾದ ಭಜನೆಗಳಿಂದ ಶ್ರೀ ರಂಗನಾಥನ ದರ್ಶನವನ್ನು ಮಾಡಿಕೊಂಡರೆಂದು ಇಲ್ಲಿಯ ಜನರು ಹೇಳುವುದುಂಟು.

ಇದು ಆ ವಿಭಾಗದ ಪಾಳೆಯಗಾರರಿಗೆ ಸಂಬಂಧಿಸಿದ್ದು, ಆತ ಸ್ವಾಮಿಯ ಅಭಿಷೇಕಕ್ಕಾಗಿ 12 ಕೊಡ ಪಂಚಾಮ್ರೃತದ ವಸ್ತುಗಳನ್ನು ತೆಗೆದುಕೊಂಡು ಬಂದನಂತೆ ಈ ಮೊದಲೇ ತಿಳಿಸಿದಂತೆ ಅಭಿಷೇಕವಾದ ಮೇಲೆ ಎಲ್ಲಾ ವಸ್ತುಗಳೂ ಇಂಗಿ ಹೋಗಿ ಒಂದು ಚಮಚದಷ್ಟು ಮಾತ್ರ ಉಳಿಯಿತಂತೆ ಅದನ್ನೇ ತೀರ್ಥವೆಂದು ಸ್ವೀಕರಿಸಲಾಯಿತು. 

ಆ ಪಾಳೆಯಗಾರರಿಗೆ ತಾನು 12 ಕೊಡಗಳಷ್ಟು ಪಂಚಾಮೃತ ಅಭಿಷೇಕವನ್ನು ಮಾಡಿಸಿದರೂ ಸ್ವಲ್ಪವೂ ಉಳಿಯಿಲಿಲ್ಲವೆಂದು ಅಸಮಾದಾನವಾಯಿತು. ಅಲ್ಲದೆ ಈವರೆಗೂ ಯಾರು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಷೇಕ ಮಾಡಿಸಿರಲಿಲ್ಲ. ತಾನೇ ಮೊದಲಿಗನೆಂಬ ಗರ್ವವೂ ಉಂಟಾಯಿತು. ಅಂದೇ ರಾತ್ರಿ ಆತನಿಗೊಂದು ಕನಸು ಬಿತ್ತು. ಅದರಲ್ಲಿ ಆತನಿಗೆ ಪಂಚಾಮೃತ ವಸ್ತುಗಳಿದ್ದ 12 ಕೊಡಗಳು ಕಾಣಿಸಿ ಕೊಂಡವಲ್ಲದೆ ಅವುಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸ್ವಾಮಿಯ ಅಪ್ಪಣೆ ಆಯಿತಂತೆ. ಮರುದಿನ ಮುಂಜಾನೆ ಅವನು ದೇವಾಲಯಕ್ಕೆ ಹೋಗಿ ತನ್ನ ತಪ್ಪನ್ನು ಮನ್ನಿಸುವಂತೆ ತನ್ನ ಗರ್ವಕ್ಕೆ ಪ್ರಾಯಶ್ಚಿತ ಮಾಡಿಕೊಂಡನೆಂಬ ಪ್ರತೀತಿ ಇದೆ.

ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!