ಹರಿತಲೇಖನಿ ದಿನಕ್ಕೊಂದು ಕಥೆ: ಶಿಷ್ಯನ ಮಹಾನತೆಯನ್ನು ಗುರುತಿಸುವ ಗುರು

ಬಹಳ ಹಿಂದಿನ ಕಾಲದ ಕಥೆಯಾಗಿದೆ. ಒಂದು ಊರಿನಲ್ಲಿ ಧರಮದಾಸಜೀ ಹೆಸರಿನ ಒಬ್ಬ ಮಹಂತರಿದ್ದರು. ಅವರಿಗೆ ಗರೀಬದಾಸ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನು ಪ್ರತಿದಿನ ಕಾಡಿಗೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದನು. 

ಗರೀಬದಾಸ ಭಗವಾನ ಶ್ರೀ ಕೃಷ್ಣನ ಪರಮಭಕ್ತನಾಗಿದ್ದನು, ಹಾಗಾಗಿ ಯಾವುದೇ ಕೆಲಸ ಮಾಡುವಾಗ ಕೂಡ ಅವನು ಭಗವಂತನ ಸ್ತುತಿಯಲ್ಲಿ ತಲ್ಲೀನನಾಗಿರುತ್ತಿದ್ದನು. 

ಭಗವಾನ ಶ್ರೀಕೃಷ್ಣನು ಅವನ ಭಕ್ತಿಯಿಂದ ಬಹಳ ಪ್ರಸನ್ನನಾಗಿದ್ದನು. ಆದುದರಿಂದ ಕಾಡಿನಲ್ಲಿ ಹಸುಗಳನ್ನು ಮೇಯಿಸುವಾಗ ಅವನಿಗೆ ಭಗವಾನ ಶ್ರೀಕೃಷ್ಣನು ಭೇಟಿಯಾಗುತ್ತಿದ್ದನು. ಮತ್ತು ಅವನು ಪ್ರತಿದಿನ ತನ್ನ ಊಟದ ಬುತ್ತಿಯ ಅರ್ಧ ಭಾಗವನ್ನು ಶ್ರೀಕೃಷ್ಣನಿಗೆ ತಿನ್ನಿಸುತ್ತಿದ್ದನು.

ಒಂದು ಮಧ್ಯಾಹ್ನ ಗರೀಬದಾಸನೊಂದಿಗೆ ಊಟ ಮಾಡುವಾಗ ಭಗವಾನ ಶ್ರೀಕೃಷ್ಣನು ‘ಗರೀಬದಾಸ, ನಾಳೆ ಗುರುಗಳಿಂದ ಹೆಚ್ಚಿನ ಊಟವನ್ನು ತೆಗೆದುಕೊಂಡು ಬಾ. ನಾಳೆ ರಾಧೆಯು ನನ್ನೊಂದಿಗೆ ಬರುವವಳಿದ್ದಾಳೆ ಹಾಗೂ ನಾಡಿದ್ದು ಮತ್ತಷ್ಟು ಊಟವನ್ನು ತೆಗೆದುಕೊಂಡು ಬಾ ಏಕೆಂದರೆ ನಾಡಿದ್ದು ಸತ್ಯಭಾಮೆ ಮತ್ತು ರುಕ್ಮಣಿ ಬರುವವರಿದ್ದಾರೆ’ ಎಂದು ಹೇಳಿದನು. 

ರಾಧೆ ಭಗವಾನ ಶ್ರೀ ಕೃಷ್ಣನ ಪರಮಭಕ್ತಳಾಗಿದ್ದಳು, ಸತ್ಯಭಾಮಾ ಮತ್ತು ರುಕ್ಮಿಣಿ ಭಗವಾನ ಶ್ರೀಕೃಷ್ಣನ ಪತ್ನಿಯರಾಗಿದ್ದಾರೆ.

ಗರೀಬದಾಸ ಆಶ್ರಮಕ್ಕೆ ಮರಳಿ ಬಂದು ತನ್ನ ಗುರುದೇವರಿಗೆ ಎಲ್ಲ ಮಾತುಗಳನ್ನು ಹೇಳುತ್ತಿದ್ದನು. ಭಗವಾನ ಶ್ರೀಕೃಷ್ಣನು ಹೇಳಿದಂತೆ ಅವನು ಎರಡು ದಿನಗಳೂ ತನ್ನ ಗುರುದೇವರಿಗೆ ಹೇಳಿ ಹೆಚ್ಚು ಊಟವನ್ನು ತೆಗೆದುಕೊಂಡು ಹೋದನು. 

ಒಂದು ದಿನ ಹೆಚ್ಚಿನ ಊಟವನ್ನು ತೆಗೆದುಕೊಂಡು ಹೋದ ಬಳಿಕ ಅವನು ಮರುದಿನವೂ ಭಗವಾನ ಶ್ರೀಕೃಷ್ಣನಿಗಾಗಿ ಭೋಜನವನ್ನು ತೆಗೆದುಕೊಂಡು ಹೋದನು. ಆಗ ಭಗವಾನ ಶ್ರೀ ಕೃಷ್ಣನು ‘ಗರೀಬದಾಸ ನಾಳೆ ಸುದಾಮ ಮತ್ತು ನನ್ನ ಇತರೆ ಭಕ್ತರೂ ಬರುವವರಿದ್ದಾರೆ. ಆದ್ದರಿಂದ ನಾಳೆ ಗುರುಗಳಿಂದ ಮತ್ತಷ್ಟು ಹೆಚ್ಚು ಊಟವನ್ನು ತೆಗೆದುಕೊಂಡು ಬರುವಂತೆ’ ಎಂದು ಹೇಳಿದನು.

ಹೀಗೆ ಪ್ರತಿ ದಿನ ಗರೀಬದಾಸನು ಹೆಚ್ಚು ಊಟವನ್ನು ತೆಗೆದುಕೊಂಡು ಹೋಗತೊಡಗಿದನು. ಆಗ ಮಹಂತ ಧರಮದಾಸಜೀಯ ಮನಸ್ಸಿನಲ್ಲಿ ಗರೀಬದಾಸನು ಸುಳ್ಳು ಹೇಳುತ್ತಿರಬಹುದೆಂದು ಸಂಶಯ ಬಂತು ಮತ್ತು ಅವರ ಮನಸ್ಸಿನಲ್ಲಿ ಸತ್ಯವನ್ನು ತಿಳಿದುಕೊಳ್ಳಲು ಅವರು ಅವನನ್ನು ಹಿಂಬಾಲಿಸಿದರು.

ಅವರು ಅಲ್ಲಿ ಏನು ನೋಡಿರಬಹುದು? ಊಟದ ಸಮಯದಲ್ಲಿ ಗರೀಬದಾಸನು ಹೇಳಿದಂತೆ ಭಗವಾನ ಶ್ರೀಕೃಷ್ಣ, ಸುದಾಮ ಹಾಗೂ ಇತರ ಅನೇಕ ಭಕ್ತರು ಒಟ್ಟಿಗೆ ಬಂದಿದ್ದರು ಮತ್ತು ಎಲ್ಲ ಭಕ್ತರು ಅವನೊಂದಿಗೆ ಸೇರಿಕೊಂಡು ಊಟವನ್ನು ಮಾಡುತ್ತಿದ್ದರು. 

ಇದನ್ನು ನೋಡಿ ಮಹಂತರಿಗೆ ಗರೀಬದಾಸನ ಮಹಾನತೆಯ ಅರಿವಾಯಿತು. ಏಕೆಂದರೆ ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಅವನನ್ನು ಭೇಟಿಯಾಗಲು ಬರುತ್ತಾನೆ ಮತ್ತು ಅವನೊಂದಿಗೆ ಪ್ರತಿದಿನ ಊಟವನ್ನು ಸಹ ಮಾಡುತ್ತಾನೆ. ಆದಾಗ್ಯೂ ಈ ವಿಷಯದ ಬಗ್ಗೆ ಗರೀಬದಾಸನಿಗೆ ಸ್ವಲ್ಪವೂ ಗರ್ವವಿಲ್ಲ. ಅವನ ಸರಳತೆಯನ್ನು ಅವರು ಅರಿತರು.

ಭಗವಂತನಿಗೆ ಗರೀಬದಾಸನು ಅತ್ಯಂತ ಪ್ರಿಯವನಾಗಿದ್ದಾನೆ. ಏಕೆಂದರೆ ಅವನು ನಿಜವಾದ ಭಕ್ತನಾಗಿದ್ದಾನೆ. ಈ ಎಲ್ಲ ಗುಣಗಳ ಕಾರಣದಿಂದ ಗರೀಬದಾಸನು ಆದರ್ಶ ಮತ್ತು ಶ್ರೇಷ್ಠನಾಗಿದ್ದಾನೆ ಎಂದು ತಿಳಿದುಕೊಂಡ ಮಹಂತ ಧರಮದಾಸಜೀ ಅದೇ ದಿನದಿಂದ ಗರೀಬದಾಸನನ್ನು ತನ್ನ ಗುರುವೆಂದು ಘೋಶಿಸಿದರು.

ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!