ಚಿಕ್ಕಬಳ್ಳಾಪುರ, (ಜುಲೈ.26): ಚಿಕ್ಕಬಳ್ಳಾಪುರ ನಗರ ಹೊರವಲಯದ ಶಿಡ್ಲಘಟ್ಟ ಮಾರ್ಗದ ಮೇಲ್ಸೆತುವೆ ಬಳಿಯ ಅಮಾನಿ ಭೈರಸಾಗರ ಕೆರೆಯಂಗಳದಲ್ಲಿ ಯುವಕನ ಶವ ಪತ್ತೆಯಾಗಿದೆ.
ಕೆರೆಯಂಗಳದ ಬೃಹತ್ ಗಾತ್ರದ ಜಾಲಿಮರದಲ್ಲಿ ಯುವಕನೊರ್ವ ನೇತಾಡುತ್ತಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಇದು ಕೊಲೆಯೋ ಆತ್ಮಹತ್ಯೆ ಯೋ ಎಂಬ ಅನುಮಾನ ಮೂಡಿದೆ.
ಯುವಕನ ಬಳಿ ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಎಂಬ ಐಡಿ ಕಾರ್ಡ್ ಸಿಕ್ಕಿದ್ದು ಅದರಲ್ಲಿ ಆಂಧ್ರ ಮೂಲದ ಸಂದುಲ ಮಲ್ಲೇಶ್ ಅಂತ ಹೆಸರಿದೆ.
ಆದರೆ ಯುವಕ ಇಲ್ಲಿಗೆ ಯಾಕೆ ಬಂದ..? ಹೇಗೆ ಬಂದ..? ಇದು ಆತ್ಮಹತ್ಯೆ ಯೋ ..ಇಲ್ಲ ಯಾರಾದ್ರೂ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೋ ತಿಳಿಯದಾಗಿದೆ.
ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆದಿದ್ದು ಪೊಲೀಸರ ತನಿಖೆಯಿಂದ ಸತ್ಯಾಂಶ ಗೊತ್ತಾಗಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….