ಚಿಕ್ಕಬಳ್ಳಾಪುರ, (ಜುಲೈ.29): ಧೈರ್ಯ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾ ಸ್ವತಂತ್ರವಾಗಿ ಇಬ್ಬರು ಸ್ಪರ್ಧೆ ಮಾಡೋಣ ಅಂತ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಮಾಜಿ ಸಚಿವ ಡಾ.ಸುಧಾಕರ್ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಮಾಜಿ ಸಚಿವ ಸುಧಾಕರ್, ಕಾಂಗ್ರೆಸ್ ಬಿಟ್ಟು ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಪ್ರದೀಪ್ ಈಶ್ವರ್ ಗೆ ಸವಾಲು ಹಾಕಿದ್ದಾರೆ.
ನಾನು ಸಹ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ತೇನೆ, ನಿನ್ನ ಹೆಸರಲಿ ಎಷ್ಟು ಓಟು ಬರುತ್ತೆ..? ನನ್ನ ಹೆಸರಲ್ಲಿ ಎಷ್ಟು ಓಟು ಬರುತ್ತೆ ನೋಡೋಣ..? ಒಂದು ವರ್ಷದಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಇಲ್ಲದ ಕಡೆ ಗೆದ್ದು ನನ್ನ ಶಕ್ತಿ ತೋರಿಸಿದ್ದೀನಿ…ನೀನು ತೋರಿಸು ನೋಡೋಣ..? ನಿನ್ನ ಮುಖ ನೋಡಿ 5000 ವೋಟು ಬರಲ್ಲ ಎಂದು ಸುಧಾಕರ್ ವ್ಯಂಗ್ಯವಾಡಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಗೂಂಡಾ ರಾಜ್ಯದ ಕೆಟ್ಟದೃಷ್ಟಿ ಈಗ ಚಿಕ್ಕಬಳ್ಳಾಪುರಕ್ಕೂ ತಟ್ಟಿದೆ.
ಚಿಕ್ಕಬಳ್ಳಾಪುರದ ಶಾಸಕರು ತಮ್ಮ ಖಾಸಗಿ ಕಂಪನಿಯ ಕಚೇರಿಯಲ್ಲಿ ಕಾನೂನು ಬಾಹಿರವಾಗಿ ಅಧಿಕಾರಿಗಳ ಅಧಿಕೃತ ಸಭೆ ನಡೆಸಿದ್ದಾರೆಂದು ಆರೋಪಿಸಿ, ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಿದ್ದ ಹಿಂದುಳಿದ ವರ್ಗದ ಯುವ ಮುಖಂಡ ಸಂತೋಷ್ ರಾಜು ಅವರ ಮೇಲೆ ಇಂದು ಮಧ್ಯಾಹ್ನ ಶಾಸಕರ ಹಿಂಬಾಲಕರು ಹಾಗೂ ಕೆಲ ಪುಡಾರಿಗಳು ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ.
ಹಿಂದುಳಿದ ಸಮಾಜಕ್ಕೆ ಸೇರಿದ ಒಬ್ಬ ಯುವ ಮುಖಂಡನ ದನಿ ಅಡಗಿಸಲು ಅವರ ಅಂಗಡಿಗೆ ಬಂದು ದೌರ್ಜನ್ಯ ಎಸಗಿದ ಶಾಸಕರ ಹಿಂಬಾಲಕರು ಹಾಗೂ ಪುಡಾರಿಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರನ್ನ ಶಿಕ್ಷೆಗೆ ಒಳಪಡಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.
ಕಳೆದ 15 ವರ್ಷಗಳಿಂದ ನಾನು ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಜೀವನದಲ್ಲಿದ್ದೇನೆ. ಹತ್ತು ವರ್ಷ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ನನ್ನ ಅವಧಿಯಲ್ಲಿ ಒಂದೇ ಒಂದು ಅಹಿತಕರ ಘಟನೆ ಅಥವಾ ಹಿಂಸಾಚಾರ ನಡೆಯಲು ನಾನು ಅವಕಾಶ ನೀಡಿರಲಿಲ್ಲ.
ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಶಾಂತಿ, ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸಮಾಜ ಘಾತುಕ ಶಕ್ತಿಗಳಿಗೆ, ಕಿಡಿಗೇಡಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ.
ರಾಜ್ಯದ ಜನತೆ ಶಾಂತಿ, ನೆಮ್ಮದಿಯ ಬದುಕಿನ ಗ್ಯಾರೆಂಟಿಗಾಗಿ ಎದುರು ನೋಡುವಂತಾಗಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….