ದೊಡ್ಡಬಳ್ಳಾಪುರ, (ಜುಲೈ.29): ಜಲ ಜೀವನ್ ಮಿಷನ್ ಯೋಜನೆಯ ಬೌತಿಕವಾಗಿ ಪೂರ್ಣಗೊಂಡಿರುವ ಕಾಮಗಾರಿ ಅನುಷ್ಠಾನದ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡ ತಾಲೂಕಿನ ಮಜರಾ ಹೊಸಹಳ್ಳಿ ಮತ್ತು ಕನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರಹೊಸಹಳ್ಳಿ, ಊದಿ ಚಿಕ್ಕನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಲ ಜೀವನ್ ಮಿಷನ್ ಯೋಜನೆಯ ಡಬ್ಲ್ಯೂ,ಸ್,ಸಿ ಸಮಿತಿ ಸದಸ್ಯ ಕೌಶಲೇಂದ್ರ ಎನ್ ಮತ್ತು RDW&S ಮುಖ್ಯ ಲೆಕ್ಕಾಧಿಕಾರಿ ಪಾರ್ವತಮ್ಮ, ರಾಜ್ಯಸಮಲೋಚಕರಾದ ಚಂದನ್, ವೆಂಕಟೇಶ್, ಕಾರ್ಯ ಪಾಲಕರ ಅಭಿಯಂತರ ಎಸ್.ಎಂ ಸುಭಾನ್ ಸಾಹೇಬ್ ನೇತೃತ್ವದಲ್ಲಿ ಕಾಮಗಾರಿಗಳ ಕುರಿತು ಮಾಹಿತಿ ಮತ್ತು ವರದಿ ಪಡೆಯಿತು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸದಸ್ಯರುಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಮತ್ತು ಸಿಬ್ಬಂದಿ ವರ್ಗದವರು, ಐಎಸ್ಐ ಸಿಬ್ಬಂದಿ ವರ್ಗದವರು, ಗುತ್ತಿಗೆದಾರರು ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿ ಯಶಸ್ವಿ ಅನುಷ್ಠಾನದ ಕುರಿತಂತೆ ಕುರಿತು ಸಭೆ ನಡೆಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….