ದೊಡ್ಡಬಳ್ಳಾಪುರ, (ಜುಲೈ.29): ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಆಚರಣೆಯನ್ನು ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ಸಡಗರದಿಂದ ಆಚರಿಸಿದರು.
ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳು ನಡೆದವು. ಹಿಂದು ಮತ್ತು ಮುಸಲ್ಮಾನ ಬಾಂಧವರು ಸಕ್ಕರೆ ಕಡಲೇಪಪ್ಪು ನೇವೇದ್ಯ ಅರ್ಪಿಸಿ ಬಾಬಯ್ಯನಿಗೆ ಪ್ರಾರ್ಥನೆ ಸಲ್ಲಿಸಿದರು.
ಶುಕ್ರವಾರ ರಾತ್ರಿ ಕೆಂಡ ಹಾಯುವ ಆಚರಣೆ ನಡೆಯಿತು.
ನಗರದ ಇಸ್ಲಾಂಪುರದ ಈದ್ಗಾ ಮೊಹಲ್ಲಾದ ಆಂಶುಖಾನಾದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಮೊಹರಂ ಬಾಬಯ್ಯನ ಪೂಜೆಯ ಸಮಾರೋಪದ ಅಂಗವಾಗಿ ವಿಶೇಷ ಅಲಂಕಾರ ಪ್ರಾರ್ಥನೆಗಳು ನಡೆಯಿತು.
ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ, ಕಾಡನೂರು ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು.
ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆಯುವ ಮೊಹರಂ ಐತಿಹಾಸಿಕ ಮತ್ತು ಭಾವೈಕ್ಯತೆ ಕೂಡಿದೆ. ಶುಕ್ರವಾರ ರಾತ್ರಿ ಗ್ರಾಮದ ಆಶುಖಾನ ಕೆಂಡ ಹಾಯುವ ಮೂಲಕ ಹರಕೆ ತೀರಿಸಲಾಯಿತು. ಈ ವೇಳೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
ಮುಸ್ಲಿಂ ಧಾರ್ಮಿಕ ಆಚರಣೆಯಂತೆ ಚಂದ್ರ ದರ್ಶನದೊಂದಿಗೆ ಮೊಹರಂ ಹಬ್ಬ ಪ್ರಾರಂಭವಾಗುತ್ತದೆ ನಂತರ ಗುದ್ದಲಿ ಪೂಜೆ ಮಾಡಲಾಗುತ್ತದೆ ಹಬ್ಬದಲ್ಲಿ ತಮಟೆ ಮುಂತಾದ ಗ್ರಾಮೀಣ ಮಧ್ಯೆಗಳೇ ಪ್ರಧಾನ ಹಬ್ಬಕ್ಕೆ ರಂಗು ಬರುವುದು ಕಡೆಯ ಎರಡು ದಿನಗಳಲ್ಲಿ ಕೊನೆಯದನ್ನು ಜಲ್ದಿ ಎಂದು ಕರೆದರೆ ಅದರ ಹಿಂದಿನ ದಿನವನ್ನು ಕೊಂಡ ಎಂದು ಕರೆಯಲಾಗುತ್ತದೆ.
ಬಾಬಯ್ಯನ ಗುಡಿ ಮುಂದೆ ತೆಗೆಯಲಾಗಿರುವ ದೊಡ್ಡ ಗುಂಡಿಯಲ್ಲಿ ಸೌದೆ, ಮರದ ತುಂಡುಗಳನ್ನು ಭಕ್ತರು ತಂದು ಹಾಕುತ್ತಾರೆ. ಕಷ್ಟದ ಪರಿಹಾರಕ್ಕೆ ಹರಕೆ ಹೊತ್ತವರು ಈ ಕೊಂಡದಲ್ಲಿ ಸೌದೆ ತಂದು ಹಾಕಿ ಹರಕೆ ಪೂರೈಸುವುದು ಸಂಪ್ರದಾಯ. ಸಂಜೆ ಪ್ರತಿ ಮನೆಯಿಂದಲೂ ಮಹಿಳೆಯರು ಪಾನಕ ತಂದು ಪೂಜೆ ಸಲ್ಲಿಸುತ್ತಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….