ಚಿಕ್ಕಬಳ್ಳಾಪುರ, (ಜುಲೈ.29): ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎಂಬ ಮಾಜಿ ಸಚಿವ ಡಾ.ಸುಧಾಕರ್ ಅವರ ಸವಾಲ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಯಾಕೆ ಸುಧಾಕರ್ ಅವ್ರೇ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ? ಎರಡು ತಿಂಗಳ ಹಿಂದೆಯೇ ನಾನು ನಿಮ್ಮನ್ನ ಸೋಲಿಸಿದ್ದೇನೆ. ಎರಡು ತಿಂಗಳ ಹಿಂದೆಯಷ್ಟೇ ನಿಮ್ಮನ್ನ ಸೋಲಿಸಿದ್ದೇನೆ. ಮತ್ತೆ ಯಾಕೆ ಬರಬೇಕು. ನೀವು ಬೇಕಾದ್ರೆ 5 ವರ್ಷ ಆದಮೇಲೆ ಪಕ್ಷೇತರರಾಗಿ ಬಂದು ಸ್ಪರ್ಧೆ ಮಾಡಿ ಎಂದು ಕುಟುಕಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು, ಸುಧಾಕರ್ ನಮ್ಮೂರ ಹುಡುಗ, ಅವರ ಬಗ್ಗೆ ನನಗೆ ಗೌರವವಿದೆ. ನೀವು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಮುಂದಿನ ಬಾರಿ ವಿಧಾನಸೌಧಕ್ಕೆ ಬರ್ತೀರಾ. ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಮಾಡಿದ್ರೆ ಮತ್ತೆ 5 ವರ್ಷ ಕಷ್ಟಪಡಬೇಕಾಗುತ್ತೆ ಎಂದು ಮಾಜಿ ಸಚಿವರಿಗೆ ಟಾಂಗ್ ನೀಡಿದರು.
ನಮ್ಮ ಹುಡುಗರು ಹಲ್ಲೆ ಮಾಡಿದ್ದಾರೆ, ದಾಳಿ ಮಾಡಿದ್ದಾರೆ ಅನ್ನೋದಾದ್ರೆ ತಾಕತ್ತಿದ್ದರೆ ಪ್ರೂಫ್ ತೋರಿಸಿ. ನಿಮ್ಮದೇ ಕಾರ್ಯಕರ್ತನನ್ನ ಜೈಲಿಗೆ ಕಳುಹಿಸಿದವರು ನೀವು. ಈಗ ಅವನನ್ನೇ ಜೊತೆಗೆ ಕೂರಿಸಿಕೊಂಡು ಆರೋಪ ಮಾಡ್ತಿದ್ದೀರಾ ಎಂದು ಹೇಳಿದರು.
ಪ್ರದೀಪ್ ಈಶ್ವರ್ ಮುಖ ನೋಡಿ 5,000 ವೋಟು ಬರಲ್ಲ ಮಾಜಿ ಸಚಿವರ ಹೇಳಿಕೆ ಕುರಿತು ಮಾತನಾಡಿ, ಸ್ವಗ್ರಾಮ ಪೇರೇಸಂದ್ರದಲ್ಲಿ ಯಾಕೆ ನಿಮಗೆ ಕಡಿಮೆ ವೋಟು ಬಂತು? ನನಗೆ 1,700 ವೋಟು ಬಂದ್ರೆ ನಿಮಗೆ ಕೇವಲ 600 ವೋಟ್ ಮಾತ್ರ ಬಂದಿದೆ. ಹುಟ್ಟೂರಲ್ಲೇ ನಿಮಗೆ ಗೌರ ಇಲ್ಲ, ನಿಮ್ಮ ಮರ್ಯಾದೆ ಏನು ಅನ್ನೋದು ಗೊತ್ತಾಯ್ತು ಅಂತ ಲೇವಡಿ ಮಾಡಿದರು.
ಸುಧಾಕರ್ ಅವರ ಪಾಡಿಗೆ ಬೆಂಗಳೂರಲ್ಲಿ ಚೆನ್ನಾಗಿ ಇರ್ತಾರೆ, ನಾನು ನನ್ನ ಪಾಡಿಗೆ ಚೆನ್ನಾಗಿರ್ತೆನೆ. ಸುಧಾಕರ್-ಪ್ರದೀಪ್ ಈಶ್ವರ್ ಮಧ್ಯೆ ಬೆಂಬಲಿಗರು ಗಲಾಟೆ ಮಾಡಿಕೊಳ್ಳಬೇಡಿ. ನಿಮ್ಮ ಹೆಂಡ್ತಿ ಮಕ್ಕಳ ಕಣ್ಣಲ್ಲಿ ನೀರು ಹಾಕಿಸಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಅಲ್ಲದೆ ಸುಧಾಕರ್ ನಂಬಿಕೊಂಡ್ರೆ ಕಾರ್ಯಕರ್ತರೇ ನಿಮಗೆ ಚಿಪ್ಪೆ ಗತಿ. ನೀವು ನೋಡದೇ ಇರೋ ಸುಧಾಕರ್‌ನ ನಾನು ನೋಡಿದ್ದೀನಿ. ಸುಧಾಕರ್ ಬೆಂಬಲಿಗರು ಕಾನೂನು ಕೈಗೆ ಎತ್ತಿಕೊಂಡರೆ ಪಾಠ ಕಲಿಸೋದು ಗೊತ್ತು. ಬಾಲ ಬಿಚ್ಚಿದ್ರೇ ಕಟ್ ಮಾಡೋದು ಗೊತ್ತು ಎಂದು ಎಚ್ಚರಿಕೆಯನ್ನೂ ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….