ಬೆಂ.ಗ್ರಾ.ಜಿಲ್ಲೆ, (ಆ.09): ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ದೀರ್ಘಾವಧಿ ಮತ್ತು ಅಲ್ಪಾವಧಿ ಕೋರ್ಸ್‌ಗಳ ದಾಖಲಾತಿ ಪ್ರಾರಂಭವಾಗಿದ್ದು, ಈಗಾಗಲೇ ಕೆ.ಇ.ಎ ಮುಖಾಂತರ ದೀರ್ಘಾವಧಿ ಕೋರ್ಸ್‌ಗಳಿಗೆ (ಡಿಪ್ಲೋಮೊ ಕೋರ್ಸ್‌ಸ್ ) ಆನ್‌ಲೈನ್ ನಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದಿರುವ ಕೆಲವೇ ಕೆಲವು ಸೀಟುಗಳಿಗೆ 10 ನೇ ತರಗತಿ ಉತ್ತೀಣ೯ರಾದ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಉಳಿದ ಸೀಟುಗಳಿಗೆ ಆಫ್ ಲೈನ್‌ನಲ್ಲಿ ದಾಖಲಾತಿಯು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಹಂಚಿಕೆ ಆಗಲಿವೆ.
ಕೋರ್ಸ್‌ಗಳು
1) ಡಿಪ್ಲೋಮೊ ಇನ್ ಟೂಲ್ & ಡೈ ಮೇಕಿಂಗ್, 2) ಡಿಪ್ಲೋಮ ಇನ್ ಮೆಕಾಟ್ರಾನಿಕ್ಸ್,
3) ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
4) ಡಿಪ್ಲೋಮೊ ಆಫ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ & ಮಿಷಿನ್ ಲರ್ನಿಂಗ್, ದೇವನಹಳ್ಳಿ ಜಿ.ಟಿ.ಟಿ.ಸಿ ಕೇಂದ್ರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….