ಹೊಸದಿಲ್ಲಿ, (ಆ.09): ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಡೆ ‘ಅಸಭ್ಯ’ ಹಾಗೂ ‘ಅನುಚಿತ’ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿಯ ಇತರೆ ಸಂಸದೆಯರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ದೂರು ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿಯ 21 ಮಹಿಳಾ ಸಂಸದರ ಸಹಿ ಇರುವ ಪತ್ರವನ್ನು ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಪೀಕರ್‌ಗೆ ಸಲ್ಲಿಸಿದ್ದಾರೆ.
ಸದಸ್ಯರೊಬ್ಬರ ಅಂತಹ ನಡವಳಿಕೆ ವಿರುದ್ಧ ಕಠಿಣ ಕ್ರಮಕ್ಕೆ ನಾವು ಕೋರುತ್ತೇವೆ. ಇದು ಸದನದಲ್ಲಿನ ಮಹಿಳಾ ಸಂಸದರ ಘನತೆಗೆ ಅವಮಾನ ಮಾಡಿರುವುದು ಮಾತ್ರವಲ್ಲ, ಈ ಸದನಕ್ಕೆ ಕೂಡ ಕೆಟ್ಟ ಹೆಸರು ತಂದಿದೆ ಮತ್ತು ಘನತೆಯನ್ನು ಕುಂದಿಸಿದೆ” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಸಂಸದರಾಗಿ ಮರು ನೇಮಕಗೊಂಡ ಬಳಿಕ ಮೊದಲ ಭಾರಿ ಬುಧವಾರ ಸಂಸತ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸ್ಮೃತಿ ಇರಾನಿ ಅವರು ಮಾತನಾಡುವಾಗ ಲೋಕಸಭೆಯಿಂದ ಹೊರಗೆ ನಡೆಯುತ್ತಾ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿಲ್ಲ.
ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತಾನಾಡಿರುವ ಸಂಸದೆ ಶೋಭಕರಂದ್ಲಾಜೆ, ಸದನದಲ್ಲಿ ಸಂಸದರೊಬ್ಬರ ಇಂತಹ ವರ್ತನೆಯನ್ನು ನಾವು ನೋಡಿದ್ದು ಇದೇ ಮೊದಲು. ಸದನದಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡುವ ಸನ್ನೆ ಮಾಡಿದರು… ಇದನ್ನು ಒಪ್ಪಲಾಗದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….