ಚಿಕ್ಕಬಳ್ಳಾಪುರ, (ಆ.09): ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಹಲವು ಕಡೆ ಟೊಮೆಟೊ ಕಳ್ಳತನವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಈಗ ಟೆಮೆಟೊದಂತೆ ದಾಳಿಂಬೆ ಈಗ ಚಿನ್ನದ ಬೆಲೆ ಬರುತ್ತಿರುವುದರಿಂದ ಖದೀಮರು ರಾತ್ರೋ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟು ದಾಳಿಂಬೆ ಕಿತ್ತುಕೊಂಡು ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಕಳ್ಳರು ಹಣ, ಚಿನ್ನಾಭರಣ, ವಾಹನ ಹಾಗು ಬೆಲೆ ಬಾಳುವ ವಸ್ತುಗಳನ್ನು ಕದಿಯುವುದನ್ನು ನೋಡಿದ್ದೇವೆ. ಆದರೆ ಟೊಮೆಟೊ ಕಳ್ಳತನ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಇದೀಗ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ ಶುರುವಾಗಿದೆ.
ಟೊಮೆಟೊದಂತೆ ದಾಳಿಂಬೆ ಈಗ ಚಿನ್ನದ ಬೆಲೆ ಬರುತ್ತಿರುವುದರಿಂದ ಖದೀಮರು ರಾತ್ರೋ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟು ದಾಳಿಂಬೆ ಕಿತ್ತುಕೊಂಡು ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಕಟಾವಿಗೆ ಬಂದಿದ್ದ ದಾಳಿಂಬೆ ಇದೀಗ ಕಳ್ಳರ ಪಾಲಾಗಿರುವ ಘಟನೆ ವರದಿಯಾಗಿದೆ.
ನಂದಿ ಗ್ರಾಮದ ರೈತ ಜಗದೀಶ ಎನ್ನುವವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ದಾಳಿಂಬೆ ಹಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಕದ್ದು ಪರಾರಿ ಆಗಿದ್ದು ಇದರಿಂದ ಕಟಾವಿಗೆ ಬಂದಿದ್ದ ಲಕ್ಷಾಂತರ ರೂಪಾಯಿ ದಾಳಿಂಬೆ ಕಳ್ಳತವಾಗಿದ್ದರಿಂದ ರೈತ ಜಗದೀಶ್ ಕಂಗಾಲಾಗಿದ್ದಾರೆ.
ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ನಾಲ್ಕು ಜನ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….