ದೊಡ್ಡಬಳ್ಳಾಪುರ, (ಆ.11): ಪ್ರಾಕೃತಿಕ ಆಸಮತೋಲನದಿಂದಾಗಿ ಬರಗಾಲದ ಆತಂಕ ಎದುರಾಗಿದ್ದು, ಮಳೆಯ ಪ್ರಮಾಣದಲ್ಲಿನ ಕೊರತೆಯಿಂದಾಗಿ ರೈತರಿಗೆ, ಪ್ರಾಣಿ ಪಕ್ಷಿ ಜೀವ ಸಂಕುಲಕ್ಕೆ ತೊಂದರೆ ಎದುರಾಗುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಹಲವೆಡೆ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಆರೂಢಿಯಲ್ಲಿ ನಡೆದಿದ್ದ ಹೊಲಮಾರಿ ಪೂಜೆ ಬೆನ್ನಲ್ಲೇ, ಇಂದು ತಾಲೂಕಿನ ಉಜ್ಜನಿ ಗ್ರಾಮದಲ್ಲಿನ ಪುಲುಮರಾಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಗ್ರಾಮದ ನಡು ಭಾಗದಲ್ಲಿರುವ ಬಸವಣ್ಣ ದೇವರಿಗೆ 101 ಬಿಂದಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆಯಿಟ್ಟರು.
ಈ ವೇಳೆ ಹಿರಿಯ ಮುಖಂಡರಾದ ಗುರುವೇಗೌಡ, ಉದಯೋನ್ಮುಖ ನಟ ಲಕ್ಷ್ಮಿಕಾಂತ್ ಸೂರ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ನಾಗರಾಜ್, ಗಂಗಾಧರಪ್ಪ, ಚಂದ್ರಶೇಖರ್, ಗಂಗಾಧರ್ ಸೇರಿದಂತೆ ನೂರಾರಿ ಮಂದಿ ಗ್ರಾಮಸ್ಥರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….