ದೊಡ್ಡಬಳ್ಳಾಪುರ, (ಆ.11): ಸಮನ್ವಯ ಶಿಕ್ಷಣ ಕಾರ್ಯಕ್ರಮದಡಿ ದಿವ್ಯಾಂಗ ಮಕ್ಕಳಿಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಇಲಾಖೆ ಅಯೋಜಿಸಿದ್ದ ವೈದ್ಯಕೀಯ ಮೌಲ್ಯಂಕನ ಶಿಬಿರದಲ್ಲಿ ಆಯ್ಕೆಯಾದ ವಿವಿಧ ನ್ಯೂನತೆಯುಳ್ಳ ಸಾಧನ ಸಲಕರಣೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ವಿತರಿಸಿದರು.
ನಗರದ ಬಿ.ಆರ್.ಸಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಲಿಂಮ್ಕೋ ಸಂಸ್ಥೆಯಿಂದ ಸರಬರಾಜಾಗಿರುವ ಸುಮಾರು 2ಲಕ್ಷ 52 ಸಾವಿರ ಮೌಲ್ಯದ 13 ವೀಲ್ ಚೇರ್, 12 ಶ್ರವಣೋಪಕರಣ, 03 ರೋಲೇಟರ್, 04 ಟ್ರೈಸೈಕಲ್, 18 ಕ್ಲಚಸ್, 01 ಸಿಪಿ ಚೇರ್ ನೀಡಲಾಯಿತು.
ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಆರ್.ಹನುಮಂತರಾಯಪ್ಪ, ಬಿಆರ್‌ಪಿಗಳಾದ ಎಂ.ಶ್ರೀಕಾಂತ್, ಗಂಗಾಧರ್, ಉಮಾಶಂಕರ್, ಸಂವಹನಾಕಾರರಾದ ಹನುಮಂತರಾಯಪ್ಪ, ನಾಗೇಶ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….