ದೊಡ್ಡಬಳ್ಳಾಪುರ; ಶಿಕ್ಷಕಿ ಜ್ಯೋತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..!: ಗಂಡನಿಂದಲೇ ಕೊಲೆಯೆಂದು ಪೋಷಕರಿಂದ ದೂರು..!!

ದೊಡ್ಡಬಳ್ಳಾಪುರ, (ಆ.11): ಪ್ರೌಢಶಾಲೆಗೆ ವರ್ಗಾವಣೆಯಾಗದ ಕಾರಣ ಬೇಸತ್ತ ಜುಲೈ 15 ರಂದು ಶಿಕ್ಷಕಿಯೋರ್ವರು ಸೋಮೇಶ್ವರ ಬಡಾವಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ಘಟನೆಗೆ ತಿರುವು ಪಡೆದಿದ್ದು, ಇದು ಆತ್ಮಹತ್ಯೆಯಲ್ಲ, ಗಂಡನಿಂದಲೇ ಕೊಲೆಯಾಗಿದೆ ಎಂದು ಆರೋಪಿಸಿ ಮೃತ ಶಿಕ್ಷಕಿಯ ಪೋಷಕರು, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮಹೋನ್ ಅವರಿಗೆ ದೂರು ನೀಡಿದ್ದಾರೆ.

ಮೃತ ಶಿಕ್ಷಕಿಯ ತಾಯಿ ನಾಗರತ್ನಮ್ಮ, ಸಹೊದರರಾದ ಆನಂದಮೂರ್ತಿ ಎನ್.ಟಿ. ಶ್ರೀನಿವಾಸ ಎನ್.ಟಿ. ಸಹೋದರಿಯರಾದ ಮಂಜುಳಾ ಎನ್.ಟಿ. ಶಾಂತಕುಮಾರಿ ಎನ್‌.ಟಿ. ಹೇಮಾವತಿ ಎನ್‌.ಟಿ. ಮತ್ತು ಶ್ರೀದೇವಿ ಎನ್.ಟಿ. ಅವರುಗಳು ನೀಡಿರುವ ದೂರಿನ ಅನ್ವಯ, ಎನ್.ಟಿ. ಜ್ಯೋತಿ, ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬನವತಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನನ್ನ ಮಗಳನ್ನು ಚಿತ್ರದುರ್ಗ ತಾಲ್ಲೂಕು, ದೊಡ್ಡಸಿದ್ದವ್ವನಹಳ್ಳಿ ವಾಸಿಯಾದ ಶ್ರೀ ವಿರೂಪಾಕ್ಷ ಕೆ.ಯು. ವಿವಾಹ ಮಾಡಿಕೊಡಲಾಗಿತ್ತು. 

ಈ ವಿರೂಪಾಕ್ಷಯ್ಯ ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಿರುವುದಾಗಿ ತಿಳಿದು ಬಂದಿದೆ, ಮೊದಲನೇ ಮದುವೆಯಾಗಿರುವ ವಿಷಯವನ್ನು ಮರೆಮಾಚಿ ನನ್ನ ಮಗಳನ್ನು ಮಧುವೆಯಾಗಿದ್ದರು, ಸದರಿಯವರು ಮದುವೆಯಾದಾಗಿನಿಂದ ಕುಡಿದು ಬಂದು ನನ್ನ ಮಗಳಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರೆಂದು ನಮಗೆ ತಿಳಿಸಿರುತ್ತಾಳೆ. ಆದ್ದರಿಂದ ನನ್ನ ಮಗಳ ಜೊತೆ ವಾಸವಾಗಿದ್ದ ಕೊಲೆಗಾರ ವಿರೂಪಾಕ್ಷ ಆರೂಢಿ ಗ್ರಾಮದಲ್ಲಿ ವಾಸವಾಗಿದ್ದಾಗ, ಅವರ ಕಿರುಕುಳ ತಾಳಲಾಗದೆ ನನ್ನ ಮಗಳು, ಗೌರಿಬಿದನೂರು ತಾಲ್ಲೂಕು ತೊಂಡೇಭಾವಿಯಲ್ಲಿ ಬೇರೆ ಮನೆ ಮಾಡಿಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದರು.

ಅಲ್ಲದೆ 11-01-2022 ರಂದು ಸೀನಿಯರ್ ಜೆ.ಎಂ.ಎಫ್.ಸಿ. ಗೌರೀಬಿದನೂರು ನ್ಯಾಯಾಲಯದಲ್ಲಿ, ತನ್ನ ಗಂಡನಿಂದ ವಿವಾಹ ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಪ್ರಕರಣ ಸಂಖ್ಯೆ ಎಂ.ಸಿ.: 6/2022, ಸಲ್ಲಿಸಿದ್ದಳು. ಸದರಿ ಪ್ರಕರಣದಲ್ಲಿ ವಿರೂಪಾಕ್ಷ ಕೆ.ಯು. ನನ್ನ ಮಗಳಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿವರವಾಗಿ ತಿಳಿಸಿರುತ್ತಾಳೆ. ಸದರಿ ದಾವ ಪ್ರತಿಯನ್ನು ಈ ದೂರಿನೊಂದಿಗೆ ಸಲ್ಲಿಸಿರುತ್ತೇನೆ.

ತೊಂಡೇಭಾವಿಯಲ್ಲಿ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದ ಸಮಯದಲ್ಲಿ, ವಿರೂಪಾಕ್ಷ ಕೆ.ಯು. ಎಂಬ ಇವನು ನನ್ನ ಮಗಳು ವಾಸವಾಗಿದ್ದ ಮನೆಯ ಹತ್ತಿರ ಬಂದು ವಿವಾಹ ವಿಚ್ಛೇದನ ಪ್ರಕರಣ ಹಿಂಪಡೆಯಬೇಕು. ಇಲ್ಲಾ ಎಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತಿದ್ದರು ಎಂದು ನನಗೆ ತಿಳಿಸಿದರು.

ವಿರೂಪಾಕ್ಷ ಕೆ.ಯು. ನನ್ನ ಮಗಳಿಗೆ ನೀಡುತ್ತಿದ್ದ ಕಿರುಕುಳ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ವಾಸದ ಮನೆಯನ್ನು ದೊಡ್ಡಬಳ್ಳಾಪುರ ನಗರದಲ್ಲಿ ಮಾಡಿಕೊಂಡು ಶಾಲಾ ಕತವ್ಯ ಮಾಡಿಕೊಂಡು ಇದ್ದಳು, ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನನ್ನ ಸಮಸ್ಯೆಯನ್ನು ತಿಳಿಸಿದ್ದಾಗಿ ನಮಗೆ ತಿಳಿಸಿದ್ದಳು. 

ಕ್ಷೇತ್ರ ಶಿಕ್ಷಣಾಧಿಕಾರಿಗಳು ನನ್ನ ಮಗಳ ಮನವಿಯಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬನವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ತುರುವನಹಳ್ಳಿ ಸರ್ಕಾರಿ ಶಾಲೆಗೆ ನಿಯೋಜನೆ ಮಾಡಿದ್ದರು, ವಿರೂಪಾಕ್ಷ ಕೆ.ಯು ರವರು ನನ್ನ ಮಗಳ ನಿವಾಸದ ವಿಳಾಸವನ್ನು ಪತ್ತೆ ಹಚ್ಚಿಕೊಂಡು ದೊಡ್ಡಬಳ್ಳಾಪುರದ ನನ್ನ ಮಗಳ ನಿವಾಸಕ್ಕೆ ಬಂದು ವಿವಾಹ ವಿಚ್ಛೇದನ ಪ್ರಕರಣವನ್ನು ಹಿಂಪಡೆಯಬೇಕು ಇಲ್ಲ. ಅಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಮಗೆ ತಿಳಿಸಿದ್ದರು.

ಈಗಿರುವಾಗ ವಿರೂಪಾಕ್ಷ ಕೆ.ಯು ತಮಗೆ ಪರಿಚಯವಿರುವ ವಕೀಲರನ್ನು ತನ್ನ ದೂರವಾಣಿಯ ಮೂಲಕ ಮಾತನಾಡಿ, ಕೊಲೆಯನ್ನು ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಮಾರ್ಗದರ್ಶನ ಪಡೆದುಕೊಂಡು ದಿನಾಂಕಃ 14/07/2023 ರಂದು ವ್ಯವಸ್ಥಿತ ಸಂಚನ್ನು ರೂಪಿಸಿ, ನನ್ನ ಮಗಳು ಒಳಗಡೆಯಿಂದ ಬಾಗಿಲಿಗೆ ಬೋಲ್ಟ್ ಹಾಕಿಕೊಂಡು ಮನೆಯಲ್ಲಿರುವಾಗ ಕಿಟಕಿಯ ಹತ್ತಿರ ಕರೆದು ಅವಳನ್ನು ಕೊಲೆ ಮಾಡಿರುತ್ತಾರೆ, ನಂತರ ತಾನು ಉಟ್ಟಿದ್ದ ವಸ್ತ್ರವನ್ನು ಉಪಯೋಗಿಸಿಕೊಂಡು ಸತ್ತ ಶವವದ ಕುತ್ತಿಗೆ ಕಟ್ಟಿ ಕಿಟಕಿಯ ಕಂಬಿಗೆ ನೇಣು ಹಾಕಿರುತ್ತಾನೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಸದರಿ ಕೊಲೆ ವಿಷಯವನ್ನು ಮರೆಮಾಚಿ, ದಿನಾಂಕಃ 15/07/2023 ರಂದು ನನ್ನ ಮಗನಾದ ಆನಂದಮೂರ್ತಿರವರಿಗೆ ದೂರವಾಣಿ ಕರೆಮಾಡಿ ಸದರಿ ಕೊಲೆಯನ್ನು ಆತ್ಮ ಹತ್ಯೆ ಎಂದು ಬಿಂಬಿಸಿರುತ್ತಾನೆ. ಹಾಗೂ ಇಲಾಖಾಧಿಕಾರಿಗಳು ವರ್ಗಾವಣೆ ಮಾಡದ ಕಾರಣ ಖಿನ್ನತೆಗೆ ಒಳಗಾಗಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿರುತ್ತಾನೆ.

ಈ ಕುರಿತಂತೆ 15/07/2023 ರಂದು ನನ್ನ ಮಗನಾದ ಆನಂದಮೂರ್ತಿ ರವರು ದೊಡ್ಡಬಳ್ಳಾಪುರಕ್ಕೆ ಬರುವುದಕ್ಕೆ ಮುಂಚೆ ಶವವನ್ನು ಅವಸರ ಅವಸರವಾಗಿ ಶವ ಪರೀಕ್ಷೆಯ ಮಾಡುವ ಸ್ಥಳಕ್ಕೆ ಶವವನ್ನು ತಂದಿರುತ್ತಾರೆ. ಅವರ ವಕೀಲರ ಸಲಹೆಯಂತೆ, ಇವರೇ ಪೊಲೀಸ್‌ ಠಾಣೆಗೆ ದೂರು ನೀಡಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. 

ಈ ಕೊಲೆಗಾರ ವಿರೂಪಾಕ್ಷ ಎಷ್ಟು ಕರೆದರೂ ಬಾಗಿಲು ತೆಗೆದಿಲ್ಲ, ಆದ್ದರಿಂದ ರಾತ್ರಿಯಲ್ಲಾ ಮನೆ ಮೇಲೆ ಮಲಗಿದ್ದು, ಬೆಳಿಗ್ಗೆ ಎದ್ದು ಕಿಟಕಿ ತೆಗೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿರುತ್ತದೆ ಎಂದು ದೂರು ನೀಡಿದ್ದು, ಆತ್ಮ ಹತ್ಯೆ ಮಾಡಿಕೊಂಡಿರುವ ಸ್ಥಳವನ್ನು ನಮಗೆ ತೋರಿಸದೇ, ಸಂಬಂದಪಟ್ಟ ಫೋಟೊಗಳನ್ನು ಸಹ ತೋರಿಸದೇ ಅವಸರ ಅವಸರವಾಗಿ ಶವ ಪರೀಕ್ಷೆಯ ಮಾಡುವ ಸ್ಥಳಕ್ಕೆ ಶವವನ್ನು ತಂದಿರುತ್ತಾರೆ.

ಮುಂದುವರಿದು ದಿನಾಂಕಃ 3/8/2023 ರಂದು ನಾಗರತ್ನಮ್ಮ ಬಿನ್ ಲೇಟ್ ಎನ್.ಕೆ, ತಿಮ್ಮಪ್ಪ, ಮೃತಳ ತಾಯಿ ಹಾಗೂ ಸಹೊದರರಾದ ಆನಂದಮೂರ್ತಿ ಎನ್.ಟಿ. ಶ್ರೀನಿವಾಸ ಎನ್.ಟಿ, ಸಹೋದರಿಯರಾದ ಮಂಜುಳಾ ಎನ್‌.ಟಿ, ಶಾಂತಕುಮಾರಿ ಎನ್‌.ಟಿ. ಹೇಮಾವತಿ ಎನ್.ಟಿ, ಮತ್ತು ಶ್ರೀದೇವಿ ಎನ್.ಟಿ. ಆದ ನಾವುಗಳು ಈ ದಿನ ನನ್ನ ಮೃತ ಮಗಳಾದ ಜ್ಯೋತಿ ಎನ್.ಟಿ, ರವರು ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದ ಮನೆಯಲ್ಲಿ ನೇಣು ಬಿಗಿದಿದ್ದ ಜಾಗವನ್ನು ಪರಿಶೀಲಿಸಲು ಬಂದಾಗ, ಈ ಕೊಲೆಗಾರ ಆರೋಪಿ ವಿರೂಪಾಕ್ಷ ಕೆ.ಯು ಸುಮಾರು 10 ಜನ ರೌಡಿಗಳನ್ನು ಕರೆದುಕೊಂಡು ಬಂದು ನಮಗೆ ಬೆದರಿಕೆ ಹಾಕಿರುತ್ತಾರೆ ಎಂದು ಸಂಬಂದಪಟ್ಟ ಪೋಟೋಗಳನ್ನು ಈ ದೂರಿನ ಜೊತೆ ಲಗತ್ತಿಸಿದ್ದಾರೆ.

ಒಟ್ಟಾರೆ ಶಿಕ್ಷಕಿ ಜ್ಯೋತಿ ಪ್ರೌಢಶಾಲೆಗೆ ವರ್ಗಾವಣೆಯಾಗದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪೊಲೀಸ್ ತನಿಖೆಯ ನಂತರ ಯಾವ ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!