ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ.
ಆರ್ಯಭಟರು ಪೃಥ್ವಿ, ಚಂದ್ರ, ಸೂರ್ಯರ ಭ್ರಮಣಗತಿ ಹಾಗೂ ಪರಿಭ್ರಮಣಗತಿಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಆ ಕಾಲದಲ್ಲಿಯೇ ಮಂಡಿಸಿದ್ದರು. ಅವರ ಈ ಸಂಶೋಧನೆಯಿಂದ ಭಾರತದ ಮೊದಲ ಉಪಗ್ರಹಕ್ಕೆ ಅವರ ಹೆಸರನ್ನು ನೀಡಲಾಯಿತು. ಅವರು ಆರ್ಯಭಟಿಕಾ ಈ ಗ್ರಂಥವನ್ನು ಬರೆದು ಸಂಪೂರ್ಣ ಜಗತ್ತಿನಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿದರು.
ಆರ್ಯಭಟರು ತಮ್ಮ ‘ಆರ್ಯಭಟ್ಟೀಯಮ್‘ ಎಂಬ ಹೆಸರಿನ ಗ್ರಂಥದಲ್ಲಿ ಪ್ರಥಮವಾಗಿ ಪೃಥ್ವಿಯು ಗೋಲವಿರುವುದನ್ನು ಉಲ್ಲೇಖಿಸಿ ಪೃಥ್ವಿಯ ವ್ಯಾಸವನ್ನೂ ನಿಖರವಾಗಿ ಹೇಳಿದರು.
ಆರ್ಯಭಟ: ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ. ಕಾಲ ಇ. ಸ. 476. ಆರ್ಯಭಟರು ಪೃಥ್ವಿ, ಚಂದ್ರ, ಸೂರ್ಯರ ಭ್ರಮಣಗತಿ ಹಾಗೂ ಪರಿಭ್ರಮಣಗತಿಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಆ ಕಾಲದಲ್ಲಿಯೇ ಮಂಡಿಸಿದ್ದರು. ಅವರ ಈ ಸಂಶೋಧನೆಯಿಂದ ಭಾರತದ ಮೊದಲ ಉಪಗ್ರಹಕ್ಕೆ ಅವರ ಹೆಸರನ್ನು ನೀಡಲಾಯಿತು. ಅವರು ಆರ್ಯಭಟಿಕಾ ಈ ಗ್ರಂಥವನ್ನು ಬರೆದು ಸಂಪೂರ್ಣ ಜಗತ್ತಿನಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿದರು.
ಗೆಲಿಲಿಯೋಗಿಂತ ಒಂದು ವರ್ಷ ಮೊದಲು ಆರ್ಯಭಟರು ಪೃಥ್ವಿಯು ಗೋಲವಿರುವುದರ ಬಗ್ಗೆ ಹೇಳುವುದು ಹಾಗೂ ಅದರ ವ್ಯಾಸವನ್ನೂ ಹೇಳುವುದು
ಆರ್ಯಭಟರು (ಇ.ಸ 5 ನೇ ಶತಮಾನ) ತಮ್ಮ ‘ಆರ್ಯಭಟ್ಟೀಯಮ್‘ ಎಂಬ ಹೆಸರಿನ ಗ್ರಂಥದಲ್ಲಿ ಪ್ರಥಮವಾಗಿ ಪೃಥ್ವಿಯು ಗೋಲವಿರುವುದನ್ನು ಉಲ್ಲೇಖಿಸಿ ಪೃಥ್ವಿಯ ವ್ಯಾಸವನ್ನೂ ನಿಖರವಾಗಿ ಹೇಳಿದರು.
ಮೃಜ್ಜಾಲಶಿಖಿವಾಯುಮಯೊ ಭೂಗೋಲ: ಸರ್ವತೋ ವೃತ್ತ: ಆರ್ಯಭಟ್ಟೀಯಮ್, 4 6
ಅರ್ಥ: ಮಣ್ಣು, ನೀರು, ಅಗ್ನಿ ಹಾಗೂ ವಾಯುವಿನಿಂದ ಕೂಡಿರುವ ಈ ಪೃಥ್ವಿಯು ಗೋಲವಿದೆ.
ಇದೇ ಗ್ರಂಥದಲ್ಲಿ ‘ನೃಷಿಯೋಜನಂ, ಜ್ಞಿಲಾ ಭೂವ್ಯಾಸೋ……‘ ಎಂಬ ಸೂತ್ರ ಬಂದಿದೆ. ಇದರ ಅರ್ಥ ಪೃಥ್ವಿಯ ವ್ಯಾಸವು ‘ನರ ಣ ಷಿ ಯೋಜನ ಅಥವಾ ‘ಜ್ಞಿಲಾ‘ ಯೋಜನದಷ್ಟು ಇದೆ ಎಂದಾಗುತ್ತದೆ. ಇದರಿಂದ ಪೃಥ್ವಿಯ ವ್ಯಾಸದ ಗಣಿತವನ್ನು ಬಿಡಿಸಲು ನಮಗೆ ಆರ್ಯಭಟ್ಟೀಯ ಅಂಕ ಪದ್ಧತಿಯ ಅವಶ್ಯಕತೆಯಿದೆ. ಅದನ್ನು ಇದೇ ಗ್ರಂಥದಲ್ಲಿ ನೀಡಲಾಗಿದೆ.
‘ಆರ್ಯಭಟ್ಟೀಯ ಅಂಕ ಪದ್ಧತಿ‘ ಎಂದರೆ ಸಂಕ್ಷಿಪ್ತವಾಗಿ ಹಾಗೂ ಸೂತ್ರದ ರೂಪದಲ್ಲಿ ಗ್ರಂಥವನ್ನು ಬರೆಯಲು ಮಾಡಲಾದ ಒಂದು ಸಾಂಕೇತಿಕ ಭಾಷೆ. ಇದರಲ್ಲಿ ‘ಕ‘ ದಿಂದ ‘ಮ‘ ಮೂಲಾಕ್ಷರಗಳಿಗೆ 1 ರಿಂದ 25 ಅಂಕಗಳನ್ನು ನೀಡಲಾಗಿದೆ. ಅಂದರೆ ಕ. 1, ಖ. 2, ಗ. 3… ಭ. 24, ಮ. 25, ಯ. 30, ರ. 40, ಲ. 50… ಹ. 100. ಸ್ವರದಲ್ಲಿ ‘ಹ‘ಕಾರವೆಂದರೆ ‘ಗುಣಿಲೆ 100‘, ‘ಊ‘ಕಾರವೆಂದರೆ ‘ಗುಣಿಲೆ 10,000‘ ಹಾಗೂ ‘ಋ‘ ಕಾರವೆಂದರೆ ‘ಗುಣಿಲೆ 10,00,000‘ (ಹತ್ತು ಲಕ್ಷ). ಈ ರೀತಿಯಲ್ಲಿ ಅತ್ಯಂತ ಸುಲಭವಾಗಿರುವ ಈ ಆರ್ಯಭಟ್ಟೀಯ ಅಂಕ ಪದ್ಧತಿಯು ನಮಗೆ ತಿಳಿದರೆ ‘ಜ್ಞಿಲಾ ಭೂವ್ಯಾಸೋ‘ ಈ ಸೂತ್ರದ ಅರ್ಥ ತಿಳಿಯುತ್ತದೆ.
ಜ್ಞ = 10, ಇ = 100, ಜ್ಞಿ (ಜ್ಞ ಇ) = 10 ಣ 100 = 1000 ಲ = 50 ಆದುದರಿಂದಲೇ ಜ್ಞಿಲಾ = 1,00050 = 1,050 ಅಂದರೆ ಪೃಥ್ವಿಯ ವ್ಯಾಸವು 1,050 ಯೋಜನದಷ್ಟು ಇದೆ.
ಒಂದು ಯೋಜನವು ಎಷ್ಟು ಕಿಲೋಮೀಟರ ಇದೆ ಎಂಬುದನ್ನು ‘ನೃಷಿ ಯೋಜನಾ‘ ಎಂಬ ಸೂಚನೆಯಿಂದ ತಿಳಿಯಬಹುದು. ನೃ ಎಂದರೆ ಮನುಷ್ಯನ ಸರಾಸರಿ ಎತ್ತರ ಪ್ರಸ್ತುತ ಗ್ರಂಥದಲ್ಲಿ ಇದರ ಪ್ರಮಾಣವನ್ನೂ ನೀಡಲಾಗಿದ್ದು ಇಲ್ಲಿ ಟೊಳ್ಳು ಮಾಹಿತಿಯನ್ನು ಮಂಡಿಸಲಿಲ್ಲ.) ಷಿ = ಷ ಇ = 80 ಣ 1,000 = 80,000 ಅಂದರೆ 1 ಯೋಜನ. ಮನುಷ್ಯನ ಸರಾಸರಿ ಎತ್ತರ ಹಾಗೂ 80.000 ನ್ನು ಗುಣಿಸಿದಾಗ 1 ಯೋಜನವೆಂದರೆ 12.11 ಕಿ.ಮಿ. ಆಗುತ್ತದೆ ಹಾಗೂ ಈ ಸಂಖ್ಯೆಯನ್ನು ‘ಜ್ಞಿಲಾ ಭೂವ್ಯಾಸಃ‘ ಈ ಸೂತ್ರದಲ್ಲಿ ಹಾಕಿದಾಗ ಪೃಥ್ವಿಯ ವ್ಯಾಸವು 12,716 ಕಿ.ಮಿ ಯಷ್ಟು ಸಿಗುತ್ತದೆ. ಈಗ ಉಪಗ್ರಹಗಳ ಸಹಾಯದಿಂದ ಅಳೆಯಲಾದ ಪೃಥ್ವಿಯ ವ್ಯಾಸವು 12,756 ಕಿ.ಮಿ ಇದೆ.
‘ಇದೇ ಆರ್ಯಭಟ್ಟರು ‘ಭ‘ ಅಪಕ್ರಮೋ ಗ್ರಹಾಂಶಃ ಈ ಸೂತ್ರದಿಂದ ಪೃಥ್ವಿಯು ಎಷ್ಟು ಅಂಶದಷ್ಟು ಹೊರಳಿದೆ ಎಂಬುದನ್ನು ಹೇಳಿದ್ದಾರೆ. ಭ = 24 ಅಂದರೆ ಪೃಥ್ವಿಯು 24 ಅಂಶದಷ್ಟು ಬಾಗಿದೆ. ಇಂದಿನ ವಿಜ್ಞಾನವು ಅದೇ ಸಂಖ್ಯೆ 23.5 ಅಂಶ ಎಂದು ಹೇಳಿದೆ.‘
ಕೃಪೆ: ಹಿಂದೂ ಜಾಗೃತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….