ಬೆಂಗಳೂರು, (ಆ.22): ಈಡೀ ಜಗತ್ತು ಕಾತುರದಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ಚಂದ್ರಯಾನ 3 ಯೋಜನೆ ಯಶಸ್ವಿಯಾಗಿದ್ದು ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಚಂದ್ರನ ಮೇಲೆ ಕಾಲಿಟ್ಟಿದ್ದಿದೆ.
ಆ ಮೂಲಕ ಅಮ್ಮಾ, ಚಂದ್ರನ ಮೇಲೆ ಏನಿದೆ?’ ಎಂಬ ಪ್ರಶ್ನೆಗೆ ಇನ್ನೂ ಅಮ್ಮಂದಿರು ಉತ್ತರ ಕೊಡುವ ದಿನ ಬಂದಿದೆ.
ಇಸ್ರೋ ನಿರ್ಮಿತ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಮಾಡಲು ಸಫಲವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆಗೆ ಇಂದು ನಮ್ಮ ದೇಶ ಪಾತ್ರವಾಗಿದೆ.
2148 ಕೆಜಿ ಭಾರದ ಪ್ರೊಪಲ್ಟನ್ ಮಾಡ್ಯೂಲ್, 26 ಕೆಜಿಯ ರೋವರ್ ಸೇರಿದಂತೆ 1752 ಕೆಜಿ ತೂಕದ ಲ್ಯಾಂಡರ್ ಮಾಡ್ಯೂಲ್ ಸೇರಿ ಒಟ್ಟೂ 3900 ಕೆ.ಜಿ ಭಾರ ಹೊತ್ತು ಚಂದ್ರಯಾನ 3 ನಭಕ್ಕೆ ಹಾರಿತ್ತು.
ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಡಾವಣೆಗೊಂಡಿತ್ತು. 615 ಕೋಟಿ ವೆಚ್ಚದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ(ISRO) ಈ ಯೋಜನೆಯನ್ನು ರೂಪಿಸಿದ್ದು ಇಂದು ಮನುಷ್ಯನ ನೋಟದಿಂದ ಮರೆಯಾಗಿರುವ ಹಾಗೂ ವಿಜ್ಞಾನಿಗಳ ಕುತೂಹಲ ಕೇಂದ್ರವಾಗಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಲ್ಯಾಂಡರ್ ವಿಕ್ರಮ ಇಳಿದಿದೆ.
ಇಸ್ರೋ ಈ ಸಾಧನೆಗೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಯೋಜನೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದು ಚಂದ್ರ ಈಗ ಇನ್ನಷ್ಟು ಹತ್ತಿರವಾಗಿದ್ದಾನೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….