01. ಕರ್ನಾಟಕದಲ್ಲಿ ಮೊದಲು ಸೂರ್ಯೋದಯ ವಾಗುವ ಸ್ಥಳ ಯಾವುದು.?
- ಎ. ಕೋಲಾರದ ಮುಳಬಾಗಿಲು
- ಬಿ. ಬೆಂಗಳೂರಿನ ಹೆಸರಘಟ್ಟ
- ಸಿ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ
- ಡಿ. ದೊಡ್ಡಬಳ್ಳಾಪುರದ ಮುತ್ತೂರು
ಉತ್ತರ: ಎ) ಕೋಲಾರದ ಮುಳಬಾಗಿಲು
02. ಈ ಕೆಳಗಿನವುಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಮೈಲುಗಲ್ಲುಗಳ ಬಣ್ಣ ಯಾವುದು.?
- ಎ. ಕೆಂಪು
- ಬಿ. ಹಳದಿ
- ಸಿ. ಕಪ್ಪು
- ಡಿ. ಹಸಿರು
ಉತ್ತರ: ಬಿ) ಹಳದಿ
03. ಭಾರತದಲ್ಲಿ ಎರಡನೇ ಜೈವಿಕ ಬಿಸಿತಾಣ ಎಂದು ಈ ಕೆಳಗಿನವುಗಳಲ್ಲಿ ಯಾವುದನ್ನು ಕರೆಯುತ್ತಾರೆ.?
- ಎ. ಹಿಮಾಲಯ ಪರ್ವತಗಳು
- ಬಿ. ವಿಂಧ್ಯ ಪರ್ವತಗಳು
- ಸಿ. ಕರಾವಳಿ ತೀರಗಳು
- ಡಿ. ಪಶ್ಚಿಮ ಘಟ್ಟಗಳು
ಉತ್ತರ: ಡಿ) ಪಶ್ಚಿಮ ಘಟ್ಟಗಳು
04. ಈ ಕೆಳಗಿನವುಗಳಲ್ಲಿ ಯಾವುದು ಮೃದುಮರದ ಜಾತಿಗೆ ಸೇರುವುದಿಲ್ಲ.?
- ಎ. ಪೈನ್
- ಬಿ. ಮಹಾಗನಿ
- ಸಿ. ಸ್ಟ್ರೂಸ್
- ಡಿ. ಫರ್
ಉತ್ತರ: ಬಿ) ಮಹಾಗನಿ
05. ಕರ್ನಾಟಕದಲ್ಲಿ ಭಾರತ ದೇಶದ ಮೊದಲ “ಜಲವಿದ್ಯುತ್ ಯೋಜನೆಯನ್ನು” ಸ್ಥಾಪಿಸಿದ ವರ್ಷ ಯಾವುದು.?
- ಎ. 1903
- ಬಿ. 1901
- ಸಿ. 1902
- ಡಿ. 1905
ಉತ್ತರ: ಸಿ) 1902
06. ಕೆ ಜಿ ಎಫ್ ನ “ಚಾಂಪಿಯನ್ ರೀಪ್” ಗಣಿಯ ಆಳ ಎಷ್ಟು.?
- ಎ. 3217 ಮೀ
- ಬಿ. 1217 ಮೀ
- ಸಿ. 1417 ಮೀ
- ಡಿ. 1317 ಮೀ
ಉತ್ತರ: ಎ) 3217 ಮೀ
07. ಶ್ವೇತ ಕ್ರಾಂತಿ ಈ ಕೆಳಗಿನವುಗಳಲ್ಲಿ ಯಾವುದರ ಹೋರಾಟದ ಹೆಸರಾಗಿದೆ.?
- ಎ. ಹಾಲು ಮತ್ತು ಹಾಲು ಉತ್ಪನ್ನ
- ಬಿ. ಮೀನು ಮತ್ತು ಸಮುದ್ರದ ಉತ್ಪನ್ನಗಳು
- ಸಿ. ವಾಣಿಜ್ಯ ಎಣ್ಣೆ ಕಾಳುಗಳು
- ಡಿ. ಸೊಪ್ಪು ತರಕಾರಿಗಳು
ಉತ್ತರ: ಎ) ಹಾಲು ಮತ್ತು ಹಾಲು ಉತ್ಪನ್ನ
08. ಭಾರತದ ಅತ್ಯಂತ ದೊಡ್ಡ ವಿಸ್ತೀರ್ಣ ಹೊಂದಿರುವ ರಾಜ್ಯ ಯಾವುದು.?
- ಎ. ಉತ್ತರ ಪ್ರದೇಶ
- ಬಿ. ಜೈಪುರ
- ಸಿ. ಕರ್ನಾಟಕ
- ಡಿ. ರಾಜಸ್ಥಾನ
ಉತ್ತರ: ಡಿ) ರಾಜಸ್ಥಾನ
09. ಭಾರತದ ಮೊದಲ ಉಪಗ್ರಹ ಉಡಾವಣಾ ಕೇಂದ್ರ ಎಲ್ಲಿದೆ.?
- ಎ. ಶ್ರೀ ಹರಿ ಕೋಟ
- ಬಿ. ತುಂಬ
- ಸಿ. ದರ್ಮವರಂ
- ಡಿ. ಹೈದ್ರಾಬಾದ್
ಉತ್ತರ: ಬಿ) ತುಂಬ
10. ಈ ಕೆಳಗಿನವರುಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಯಾರು.?
- ಎ. ಸಿ ಎನ್ ಆರ್ ರಾವ್
- ಬಿ. ಸಿ ವಿ ರಾಮನ್
- ಸಿ. ರವೀಂದ್ರನಾಥ ಠಾಗೋರ್
- ಡಿ. ಮದರ್ ತೆರೇಸಾ
ಉತ್ತರ: ಸಿ) ರವೀಂದ್ರನಾಥ ಠಾಗೋರ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….