ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಹೇರಂಬ ಸಂಕಷ್ಟ ಚತುರ್ಥಿಯೆಂದು ಕರೆಯಲಾಗುತ್ತದೆ.ಇದು ಶ್ರಾವಣ ಮಾಸದ ಕೃಷ್ಣ ಪಕ್ಷದ ಸಂಕಷ್ಟ ಚತುರ್ಥಿ ವ್ರತವಾಗಿದ್ದು, ಈ ದಿನದಂದು ಗಣಪತಿ ಮತ್ತು ಬಹುಳ ಚೌತಿ ಉಪವಾಸ ಮಾಡುವವರು ಶ್ರೀ ಕೃಷ್ಣ ಮತ್ತು ಗೋವುಗಳನ್ನು ಪೂಜಿಸುತ್ತಾರೆ. ಈ ಎರಡು ವ್ರತಗಳ ಪರಿಣಾಮದಿಂದ ಸಂತಾನ ಮತ್ತು ಆರ್ಥಿಕ ಸುಖ ಸಿಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಓರ್ವ ವ್ಯಕ್ತಿಯ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.ಈ ಕಾರಣಕ್ಕಾಗಿ ಸಂಕಷ್ಟ ಚತುರ್ಥಿ ದಿನದಂದು ಹೆಚ್ಚಿನ ಜನರು ಗಣಪತಿ ಆರಾಧನೆಯನ್ನು ಮಾಡುತ್ತಾರೆ.ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಹೇರಂಬ ಸಂಕಷ್ಟ ಚತುರ್ಥಿಯೆಂದು ಕರೆಯಲಾಗುತ್ತದೆ.ಈ ವ್ರತಗಳ ಪರಿಣಾಮದಿಂದ ಸಂತಾನ ಮತ್ತು ಆರ್ಥಿಕ ಸುಖ ಸಿಗುತ್ತದೆ ಎಂಬ ನಂಬಿಕೆ ಇದೆ.ಈ ದಿನ ಭಕ್ತರು ಮಹಾ ಗಣಪತಿಯನ್ನು ಪೂರ್ಣ ಭಕ್ತಿಯಿಂದ ಪೂಜಿಸುತ್ತಾರೆ.ಹೇರಂಬ ಸಂಕಷ್ಟಿ ಚತುರ್ಥಿ ವ್ರತವನ್ನು ಆಚರಿಸುವ ಮೂಲಕ ಜೀವನದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.
ಹೇರಂಬ ಸಂಕಷ್ಟ ಚತುರ್ಥಿಯ ದಿನದಂದು ಭಕ್ತರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ.ವ್ರತವು ಸೂರ್ಯೋದಯದ ಸಮಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಮತ್ತು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಅಂತ್ಯಗೊಳಿಸಲಾಗುತ್ತದೆ. ಕೆಲವರು ಹಣ್ಣುಗಳು ಅಥವಾ ಖಿಚಡಿಯನ್ನು ತಿನ್ನುವ ಮೂಲಕ ಭಾಗಶಃ ಉಪವಾಸವನ್ನು ಸಹ ಆಚರಿಸುತ್ತಾರೆ.
ಹೇರಂಬ ಸಂಕಷ್ಟ ಚತುರ್ಥಿಯ ದಿನದಂದು ಭಕ್ತರು ಸೂರ್ಯೋದಯಕ್ಕೆ ಎದ್ದು ಬೇಗನೆ ಸ್ನಾನ ಮಾಡಿ,ನಂತರ ಗಣೇಶನಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಸಂಜೆ ಚಂದ್ರನನ್ನು ನೋಡಿದ ನಂತರ ಪೂಜೆಯನ್ನು ಮಾಡಲಾಗುತ್ತದೆ.ಭಕ್ತರು ಚಂದ್ರ ಅಥವಾ ಚಂದ್ರ ದೇವರನ್ನು ಸಹ ಪೂಜಿಸುತ್ತಾರೆ.ಸಂಜೆ ಗಣೇಶನ ವಿಗ್ರಹಗಳನ್ನು ದುರ್ವೆ ಹುಲ್ಲು ಮತ್ತು ತುಂಬೆ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮೋದಕ ಮಾಡಿ ನೈವೇದ್ಯ ಮಾಡಲಾಗುತ್ತದೆ.
ಇನ್ನು ಹೇರಂಬ ಸಂಕಷ್ಟ ಚತುರ್ಥಿಯ ಸಂದರ್ಭದಲ್ಲಿ ‘ಗಣೇಶ ಅಷ್ಟೋತ್ತರ’ ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.ಗಣೇಶನಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ಸಹ ಈ ದಿನದಂದು ಬಹಳ ಶುಭದಾಯಕವಾಗಿದೆ.
‘ಸಂಕಟ ಹರ ಚತುರ್ಥಿ’ ಎಂದೂ ಕರೆಯಲ್ಪಡುವ ಸಂಕಷ್ಟ ಚತುರ್ಥಿ ಗಣೇಶನ ಅನುಯಾಯಿಗಳಿಗೆ ಮಹತ್ವದ ದಿನವಾಗಿದೆ.ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ಥಿಯಂದು ಈ ದಿನವನ್ನು ಆಚರಿಸಲಾಗುತ್ತದೆ.ಹೇರಂಬ ಸಂಕಷ್ಟ ಚತುರ್ಥಿಯಂದು ‘ಹೇರಂಬ ಮಹಾ ಗಣಪತಿ’ಗೆ ಪೂಜೆ ಸಲ್ಲಿಸಲಾಗುತ್ತದೆ.
ಇದು ಗಣೇಶನ ಅತ್ಯಂತ ಅಸಾಮಾನ್ಯ ರೂಪವಾಗಿದೆ ಮತ್ತು ಇದನ್ನು ಐದು ಮುಖಗಳು ಮತ್ತು ಹತ್ತು ಕೈಗಳೊಂದಿಗೆ ಕಾಣಬಹುದು. ಒಂದು ಕೈ ವರವನ್ನು ನೀಡುವ ಭಂಗಿಯನ್ನು ಚಿತ್ರಿಸುತ್ತದೆ, ಇನ್ನೊಂದನ್ನು ಆಶೀರ್ವಾದದ ಭಂಗಿಯಲ್ಲಿ ತೋರಿಸಿದರೆ, ಉಳಿದ ಎಂಟು ಕೈಗಳು ಕ್ರಮವಾಗಿ ರುದ್ರಾಕ್ಷಿ,ಚಾಟಿ, ತಿವಿಗೋಲು,ಮೋದಕ,ಸೇಬು, ಮಾಲೆ,ಕೊಡಲಿ ಮತ್ತು ಸುತ್ತಿಗೆ ಅನ್ನು ಹಿಡಿದಿರುತ್ತವೆ.ಹಿಂದೂ ಪುರಾಣಗಳಲ್ಲಿ ಹೇಳಿರುವಂತೆ ಹೇರಂಬ ಗಣಪತಿ ಗಣೇಶನ 32 ರೂಪಗಳಲ್ಲಿ ಒಂದಾಗಿದೆ.
ಹೇರಂಬ ಮಹಾ ಗಣಪತಿಯನ್ನು ಪೂಜಿಸಲು ಸಂಪೂರ್ಣವಾಗಿ ಸಮರ್ಪಿತವಾದ ಯಾವುದೇ ದೇವಾಲಯವಿಲ್ಲ ಆದರೆ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅವನನ್ನು ಉಪ ದೇವತೆಯಾಗಿ ಪೂಜಿಸಲಾಗುತ್ತದೆ.ಉಪವಾಸ ಆಚರಿಸುವವರು ಯಾವುದೇ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು.
ಇನ್ನು ಗಣಪನ ಭಕ್ತರು ಮನೆಯಲ್ಲಿ ಅಥವಾ ಹತ್ತಿರದ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಬಹುದು.ಜೀವನದಲ್ಲಿ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಲು ಆತ್ಮವಿಶ್ವಾಸದ ಅಗತ್ಯವಿರುವವರಿಗೆ ಹೇರಂಬ ಮಹಾ ಗಣಪತಿಯನ್ನು ಪೂಜಿಸುವುದು ಸೂಕ್ತವಾಗಿ ಎಂದು ನಂಬಲಾಗಿದೆ.
ವಿಶೇಷ ವರದಿ: ಗಣೇಶ್ ., ಎಸ್. ದೊಡ್ಡಬಳ್ಳಾಪುರ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….