ಚಿಕ್ಕಬಳ್ಳಾಪುರ, (ಸೆ.03):ನೂರಾರು ವರ್ಷದ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿದ್ದ ಟ್ರ್ಯಾಕ್ಟರ್, ಮನೆ, ದನದ ಕೊಟ್ಟಿಗೆಗೆ ಹಾನಿಯಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ತೆರವುಗೊಳಿಸಿ ಅಂತಾ ಅಲ್ಲಿಯ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಅಽಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಮರ ತಾನಾಗಿಯೇ ಉರುಳಿದೆ.
ಶ್ರೀರಾಂಪುರ ಗ್ರಾಮದ ಜನವಸತಿ ಪ್ರದೇಶದಲ್ಲಿದ್ದ ಹಳೆ ಕಾಲದ ಮರವೊಂದು ಟೊಳ್ಳಾಗಿ ನಿಂತಿತ್ತು. ಯಾವುದೇ ಕ್ಷಣದಲ್ಲಿ ಬೀಳಬಹುದು, ದಯವಿಟ್ಟು ಮರ ತೆರವುಗೊಳಿಸಿ ಅಂತಾ ಅಲ್ಲಿಯ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಅಽಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಯಾರೂ ಮರವನ್ನು ತೆರವುಗೊಳಿಸಲಿಲ್ಲ. ಇದರಿಂದ ಮರವೇ ಭಾನುವಾರ ಗ್ರಾಮದ ಟ್ರ್ಯಾಕ್ಟರ್, ಮನೆಯ ಮೇಲೆ ಉರುಳಿ ಬಿದ್ದಿದೆ.
ಗ್ರಾಮದ ಚಂದ್ರಮ್ಮ ವೆಂಕಟೇಶಪ್ಪ ಎಂಬುವರ ಮನೆಯ ಮುಂದೆ ಬೃಹತ್ ಅರಳಿ ಮರವೊಂದಿತ್ತು. ಮರಕ್ಕೆ ನೂರಾರು ವರ್ಷಗಳ ವಯಸ್ಸಾಗಿತ್ತು. ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮರ ತೆರವುಗೊಳಿಸುವಂತೆ ಸ್ಥಳೀಯರು ಅಗಲಗುರ್ಕಿ ಗ್ರಾಪಂ ಅಧಿಕಾರಿಗಳು ಹಾಗೂ ಸ್ಥಳಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಆದರೆ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂದಿಸಿರಲಿಲ್ಲ. ಆದರೆ ಇಂದು ರಸ್ತೆಯಲ್ಲಿದ್ದ ಟ್ರ್ಯಾಕ್ಟರ್, ಮನೆ, ದನದ ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಮರದ ಕೆಳಗೆ ಯಾರೂ ಇರಲಿಲ್ಲ.
ಗ್ರಾಮದಲ್ಲಿರುವ ವಿದ್ಯುತ್ ಲೈನಿನ ಮೇಲೆಯೂ ಮರ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ಜೋತು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಜನರ ಮೇಲೆ ಮರ ಬಿದ್ದು ಯಾರಿಗಾದರೂ ಪ್ರಾಣ ಹೋಗಿದ್ದರೆ ಆಗ ಅಧಿಕಾರಿಗಳು ಏನು ಮಾಡುತ್ತಿದ್ದರು ಅಂತಾ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಮುಂದಾದರೂ ಅಽಕಾರಿಗಳು ಬದ್ದತೆಯಿಂದ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….