ದೊಡ್ಡಬಳ್ಳಾಪುರ, (ಸೆ.03): ತಾಲೂಕಿನ ಕುರುವಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಸಮಾಜದಲ್ಲಿನ ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದ್ದು. ಇಂತಹ ವೃತ್ತಿಯಲ್ಲಿ ಹೂಣೆಗಾರಿಕೆ ಮರೆತರೆ ವ್ಯವಸ್ಥೆ ಹಾಳುಗುತ್ತದೆ, ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಎಂದಿಗೂ ಮರೆಯದಂತಹ ವ್ಯಕ್ತಿಗಳು ಎಂದರೆ ತಂದೆ, ತಾಯಿ, ಗುರು ಮಾತ್ರ ಎಂದರು.
ಮನುಷ್ಯರಲ್ಲಿ ನಾನು ನನ್ನದು ಎನ್ನುವ ಅಹಂಕಾರ ಭಾವನೆ ಇರುತ್ತದೆ, ಅದನ್ನು ಗುರುತಿಸಿ ಹೋಗಲಾಡಿಸುವ ಏಕೈಕ ಜೀವಿ ಶಿಕ್ಷಕ, ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸಿ, ಪ್ರಯೋಜಕರಗುವುದನ್ನು ಕಂಡಾಗ ಶಿಕ್ಷಕಗಾಗುವ ಆನಂದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಏನು ಅರಿಯದ ಮಕ್ಕಳಿಗೆ ವಿದ್ಯಾದಾನ ಮಾಡಿ ಜ್ಞಾನವಂತರನ್ನಾಗಿಸುವ ಶಿಕ್ಷಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು,
ಶಿಕ್ಷಕ ತಿಮ್ಮರಾಜು ಮಾತನಾಡಿ, ಸಾಮಾಜಿಕ ಜಾಲ ತಾಣಗಳು ಅಭಿವ್ಯಕ್ತಿ ಸ್ವತಂತ್ರ್ಯಕ್ಕೆ ಬಲ ತಂದುಕೊಂಡಿದ್ದೆ, ಅದರಲ್ಲೂ ಮುಖ್ಯವಾಗಿ ಮಾತನಾಡಲೇ ಬಾರದೆಂಬ ಸ್ಥಿತಿಯಲ್ಲಿದ್ದ ಮಹಿಳೆಯರಿಗೂ ಜಾಲತಾಣಗಳು ದೊಡ್ಡ ದ್ವನಿಯಾಗಿದೆ.
ಆದರೆ ಜಾಲತಾಣಗಳ ದಾಸರಾಗದೆ ಸ್ವಂತ ಬುದ್ದಿಯಿಂದ ಬಳಸಬೇಕು, ಫೇಸ್ ಬುಕ್ ವಾಟ್ಸ್ ಆಪ್ ಗಳಲ್ಲಿ ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಮಾಜಕ್ಕೆ ಉಪಯುಕ್ತವಾಗಿದ್ದರೆ ಮಾತ್ರ ಇನ್ನೂಬ್ಬರಿಗೆ ಕಲುಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನರಸಿಂಹಯ್ಯ, ಹಿರಿಯ ಹಾಸ್ಯ ನಟ ಉಮೇಶ್, ಜೆಡಿಎಸ್ ಯುವ ಮುಖಂಡ ಮುರಳಿ, ಶಿಕ್ಷಕರಾದ ರವಿಕುಮಾರ್, ಗ್ರಾಮದ ಮುಖಂಡರಾದ ಚಂದ್ರಪ್ಪ, ಮಂಜುನಾಥ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….