ನೆಲಮಂಗಲ, (ಸೆ.03): ಆಕೆಗೆ ಕೇವಲ ಒಂದುವರೆ ವರ್ಷದ ಹಿಂದಷ್ಟೆ ಮದುವೆಯಾಗಿತ್ತು, ಹೆತ್ತವರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಧಾರೆ ಎರೆದು ಕೊಟ್ಟಿದ್ರು, ಆದರೆ ಕೇವಲ ಒಂದುವರೆ ವರ್ಷಕ್ಕೆ ಮಕ್ಕಳಾಗಿಲ್ಲ ಎಂಬ ಕಾರಣ, ವರದಕ್ಷಿಣೆ ಪಿಡುಗು ಅನ್ನೋ ಇನ್ನೊಂದು ಕಾರಣಕ್ಕೆ, ದಾರೆ ಎರದು ಕೊಟ್ಟ ಎತ್ತವರೆ ಮಗಳ ಚಿತೆಗೆ ಕೊಳ್ಳಿ ಇಡುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಕಾರಣ ಎಂಎಸ್‌ಸಿ ವ್ಯಾಸಂಗ ಮಾಡಿರೋ ಭವ್ಯ(27 ವರ್ಷ) ಕಳೆದ ಒಂದುವರೆ ವರ್ಷದ ಹಿಂದಷ್ಟೆ ಹಸಮಣೆ ಹೇರಿದ್ದರು, ಆದ್ರೆ ಶನಿವಾರ ಅಕಾಲಿಕ ಸಾವಿಗೀಡಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ತಿರುಮಲೆಗೌಡನಪಾಳ್ಯ ನಿವಾಸಿ ಕಿರಣ್ ಜೊತೆ ಮದುವೆಯಾಗಿದ್ದ ಭವ್ಯ, ವಾದಕುಂಟೆ ಬಳಿ ರೈಲಿಗೆ ತಲೆ ಕೊಟ್ಟು ಪ್ರಾಣ ತ್ಯಾಗ ಮಾಡಿದ್ದಾಳೆ.
ಮೃತ ಭವ್ಯ ಹೆತ್ತವರು ಸುಮಾರು 30 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರಂತೆ, ಕೈತುಂಬಾ ವರದಕ್ಷಣೆ ಸಹ ಕೊಟ್ಟಿದ್ದರಂತೆ. ಇತ್ತೀಚೆಗೆ ಗಂಡನ ಮನೆಯವರಿಂದ ಕಿರುಕುಳ ಸಹ ಶುರುವಾಗಿತ್ತಂತೆ, ಅಲ್ಲದೆ ಕಳೆದ ಒಂದು ವರ್ಷದಿಂದ ಮಕ್ಕಳಾಗಿಲ್ಲ, ಬಂಜೆ ಎಂದು ಕಿರುಕುಳ ನೀಡುತ್ತಿದ್ದರಂತೆ.
ಈ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಜಗಳವಾಗಿ ಠಾಣೆ ಮೆಟ್ಟಿಲು ಸಹ ಏರಿದ್ದರು. ಮಕ್ಕಳಾಗದಿದ್ದರೆ ಪರೀಕ್ಷೆ ಮಾಡಿಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲವಂತೆ ದಂಪತಿಗಳು. ಆದರೆ ಇತ್ತಿಚೆಗೆ ಗಲಾಟೆ ಹೆಚ್ಚಾದ್ದರಿಂದ ಭವ್ಯ ತವರು ಮನೆ ಲಕ್ಕಪ್ಪನಹಳ್ಳಿ ಸೇರಿದ್ದಳಂತೆ, ಒಂಟಿತನ ಹಾಗೂ ಬೇಜಾರಿನಲ್ಲಿ ಮನನೊಂದ ಭವ್ಯ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….