ದೊಡ್ಡಬಳ್ಳಾಪುರ, (ಸೆ.03): ತಾಲೂಕಿನಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗುತ್ತಿದ್ದಂತೆಯೇ ರಾಗಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾಕುವ ಯೂರಿಯಾ ರಸಗೊಬ್ಬರಕ್ಕೆ ದಿಢೀರ್ ಬೇಡಿಕೆ ಉಂಟಾಗಿದೆ.
ಇದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಯೂರಿಯಾ ಹೊತ್ತು ತಂದ ಲಾರಿಯನ್ನು ನಡು ರಸ್ತೆಯಲ್ಲಿಯೇ ತಡೆದಿರುವ ರೈತರು, ಮುಗಿಬಿದ್ದು ಖರೀದಿ ನಡೆಸಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲದಲ್ಲಿ ನಡೆದಿದ್ದು, 45 ಕೆಜಿ ತೂಕದ ಯೂರಿಯಾ ಚೀಲಕ್ಕೆ 310 ರೂ ನೀಡಿ ಖರೀದಿ ನಡೆಸಿದ್ದಾರೆ.
45 kg ತೂಕದ ಯೂರಿಯಾ ಪ್ಯಾಕೆಟ್ ನಿಗದಿ ಬೆಲೆ 267 ರೂಗಳಾಗಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ಬೆಲೆ ನೀಡಿ ಖರೀದಿ ಮಾಡಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ.
ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಶನಿವಾರ ಬೆಳಗಿನಿಂದ ಯೂರಿಯಾ ಖರೀದಿಸುವ ರೈತರ ಸಂಖ್ಯೆ ಹೆಚ್ಚಾಗಿದೆ. ನಗರದ ಎಲ್ಲಾ ರಸಗೊಬ್ಬರ ಅಂಗಡಿಗಳಲ್ಲೂ ದಾಸ್ತಾನು ಖಾಲಿಯಾಗುತ್ತಿದೆ.
ತಾಲ್ಲೂಕಿನ ರೈತರಷ್ಟೇ ಅಲ್ಲದೆ ನೆಲಮಂಗಲ,ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ ಸುತ್ತಮು ತಲಿನ ರೈತರಿಗೆ ಅಲ್ಲಿನ ಅಂಗಡಿಗಳಲ್ಲಿ ದಾಸಾನು ಇಲ್ಲದೆ ಇರುವುದರಿಂದ ನಗರದ ರಸಗೊಬ್ಬರ ಅಂಗಡಿಗಳಿಗೆ ಬರುತ್ತಿದ್ದಾರೆ.
ಯೂರಿಯಾಗಷ್ಟೇ ಬೇಡಿಕೆ: ‘ಇಷ್ಟು ದಿನಗಳ ಕಾಲ ಮಳೆ ಇಲ್ಲದೆ ಎಲ್ಲಾ ರೀತಿಯ ಸರಗೊಬ್ಬರಗಳ ಮಾರಾಟವು ಕುಸಿತವಾಗಿತ್ತು. ಈಗ ಮಳೆಯಾಗಿದೆ ಯೂರಿಯಾ ರಸಗೊಬ್ಬರಕ್ಕೆ ದಿಢೀರನೆ ಬೇಡಿಕೆ ಹೆಚ್ಚಾಗಿದೆ. ಆದರೆ ನಮ್ಮ ಬೇಡಿಕೆಗೆ ತಕ್ಕಷ್ಟು ಗೊಬ್ಬರ ನೀಡಬೇಕಿದ್ದರೆ ಇತರೆ ರಸಗೊಬ್ಬರವನ್ನು ಖರೀದಿ ಮಾಡಿದರೆ ಮಾತ್ರ ಯೂರಿಯಾ ಕೊಡುತ್ತೇವೆ ಎನ್ನುತ್ತಿದ್ದಾರೆ ರಸಗೊಬ್ಬರ ಕಂಪನಿಗಳವರು. ನಮಗೆ ಈಗ ಬೇಡಿಕೆ ಇರುವುದು ಯೂರಿಯಾ ಮಾತ್ರ, ಬೇಡಿಕೆ ಇಲ್ಲದ ಸರಗೊಬ್ಬರ ಖರೀದಿಸಿ ತಂದು ಮಳೆಗಾಲದಲ್ಲಿ ಹೇಗೆ ದಾಸ್ತಾನು ಮಾಡಲು ಸಾಧ್ಯ’ ಎಂದು ರಸಗೊಬ್ಬರ ಮಾರಾಟಗಾರರು ಪ್ರಶ್ನಿಸುತ್ತಾರೆ.
ಆಕ್ರೋಶ: ಉಳಿದಂತೆ ಕಳೆದ ನಾಲ್ಕು ದಿನಗಳ ಹಿಂದೆಯೇ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಗೋಬ್ಬರದ ಬೇಡಿಕೆ ಉಂಟಾಗಬಹುದೆಂದು ಅಂದಾಜಿಸಿ, ಮುಂಜಾಗ್ರತೆ ಕೈಗೊಳ್ಳಬೇಕಿದ್ದ ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚೆತ್ತುಕೊಳ್ಳದ ಕಾರಣ ರೈತರು ಪರದಾಡುವಂತಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….