ದೊಡ್ಡಬಳ್ಳಾಪುರ, (ಸೆ.03): ತಾಲೂಕಿನ ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ 13 ಮಂದಿ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿ ರಾಮಾಂಜಿನಪ್ಪ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, 25 ಮಂದಿ ಸ್ಪರ್ಧಿಸಿದ್ದರು.
ಇವರಲ್ಲಿ ಹೆಚ್ಚು ಮತಗಳನ್ನು ಪಡೆದ ಮುನೇಗೌಡ ಎಂ., ಸಂಜೀವ ಮೂರ್ತಿ ಎಸ್., ನಂಜಾಮರಿಯಪ್ಪ ಎಲ್.ಕೆ., ಪುಟ್ಟಮೂರ್ತಿ ಆರ್., ಮೂರ್ತಿ ಕೆ.ಎನ್., ಶ್ರೀನಿವಾಸ್ ಮೂರ್ತಿ ಎಲ್.ಎನ್., ಆಂಜಿನಪ್ಪ ಹೆಚ್., ಅಂಬಿಕಾ, ಶಶಿಕಲಾ, ಶಾಮಸುಂದರ್ ಎನ್., ರಾಜಣ್ಣ ಎಲ್.ಆರ್., ಮುನಿರಾಜು, ರಾಜಣ್ಣ ಟಿ ಸೇರಿದಂತೆ 13 ಮಂದಿಯನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ನೂತನ ನಿರ್ದೇಶಕರನ್ನು ಮುಖಂಡರಾದ ಲಕ್ಷ್ಮಿ ನಾಗೇಶ್, ಗೋವಿಂದಸ್ವಾಮಿ, ಆನಂದ್, ಬಚ್ಚೇಗೌಡ ಅಭಿನಂದನೆ ಸಲ್ಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….