ಪೊಲೀಸ್ DAR ವಾಹನ ಪಲ್ಟಿ..!; ತಪ್ಪಿದ ದುರಂತ

ಚಿಕ್ಕಬಳ್ಳಾಪುರ, (ಸೆ.04): ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿಎಆರ್ ವಾಹನ ಬೈರಗಾನಹಳ್ಳಿಯಿಂದ ವಾಪಸ್ ಬರುವ ವೇಳೆ ದ್ಯಾವಪ್ಪನ ಗುಡಿ ಸಮೀಪ ಮಾರ್ಗಮಧ್ಯದಲ್ಲಿ  ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿರುವ ಘಟನೆ ನಡೆದಿದೆ. 

ಬೈರಗಾನಹಳ್ಳಿ ಗ್ರಾಮದಲ್ಲಿ ಮುಖಂಡ ನಾರಾಯಣಸ್ವಾಮಿಯ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್  ಕಲ್ಪಿಸಿತ್ತು.

ಭಾನುವಾರ ರಾತ್ರಿ ಪಾಳಿ ಕೆಲಸ ಮಾಡಿದ್ದ  ಪೊಲೀಸ್ ಅಧಿಕಾರಿ ಮತ್ತು ಐವರು ಸಿಬ್ಬಂದಿ ಬಂದೋಬಸ್ತ್ ಮುಗಿಸಿಕೊಂಡು ಸೋಮವಾರ ವಾಪಸ್ ಶಿಡ್ಲಘಟ್ಟಕ್ಕೆ ಬರಬೇಕಿತ್ತು. ಆದರೆ ಸಿಬ್ಬಂದಿಗೆ ಎನು ತೋಚಿತೋ ದ್ವಿ ಚಕ್ರವಾಹನಗಳಲ್ಲಿ ಹೊರಟಿದ್ದಾರೆ.

ಚಾಲಕ  ವಾಹನವನ್ನು ಚಾಲನೆ ಮಾಡಿಕೊಂಡು ಬರುವಾಗ ದ್ಯಾವಪ್ಪನ ಗುಡಿ ಸಮೀಪ ಮಾರ್ಗ ಮದ್ಯ  ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹಳ್ಳದ ಜಮೀನಿನಲ್ಲಿ ಪಲ್ಟಿಯಾಗಿದೆ.

ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೇ ಇದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಚಾಲಕ ಸಹ ಪ್ರಾಣಾಪಾಯದಿಂದ ಪಾರಾಗಿದ್ದು, ಜೆಸಿಬಿ ಯಂತ್ರದಿಂದ ಪೊಲೀಸ್ ವಾಹನ ತೆರವು ಕಾರ್ಯ ನಡೆಯಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!