ಹರಿತಲೇಖನಿ ದಿನಕ್ಕೊಂದು ಕಥೆ: ಸ್ನೇಹಕ್ಕೆ ಸಾಕ್ಷಿ ಕೃಷ್ಣಕುಚೇಲರ ಸ್ನೇಹ

ಮಹಾ ಪುರಾಣ ಕಥೆಗಳಲ್ಲೂ ದೇವಾನು ದೇವತೆಗಳು ಉತ್ತಮ ಸ್ನೇಹಿತರನ್ನು ಹೊಂದಿದ್ದರು ಎಂದು ನಂಬಲಾಗುತ್ತದೆ. ಅವರ ಸ್ನೇಹ ಸಂಬಂಧಗಳೇ ಇಂದಿಗೂ ಮನುಜ ಕುಲಕ್ಕೊಂದು ದಾರಿದೀಪ ಎನ್ನಬಹುದು. ಇಂತಹ ಒಂದು ಅದ್ಭುತವಾದ ನಿಷ್ಕಲ್ಮಷವಾದ ಸ್ನೇಹ ಎಂದರೆ ಶ್ರೀಕೃಷ್ಣ ಮತ್ತು ಸುದಾಮನದ್ದು.

ಇವರ ಸ್ನೇಹ ಸಂಬಂಧವು ಒಂದು ಉತ್ತಮ ಸಂದೇಶವನ್ನು ನೀಡುವುದಂತೂ ನಿಜ. ಸ್ನೇಹ ಎನ್ನುವುದಕ್ಕೆ ಯಾವುದೇ ಬೇಧವಿಲ್ಲ. ಆ ಸಂಬಂಧದಲ್ಲಿ ಬರುವುದು ಕೇವಲ ಪ್ರೀತಿ ಹಾಗೂ ಸಹಾಯ. ಜೀವನದ ಕೆಲವು ಕಷ್ಟದ ಸಂದರ್ಭದಲ್ಲಿ ಬಂಧುಗಳು ಸಹಾಯ ಮಾಡದಿದ್ದರೂ ಸ್ನೇಹಿತರು ಸಹಾಯ ಮಾಡುತ್ತಾರೆ. ಉತ್ತಮ ಸ್ನೇಹದಿಂದಲೇ ಎಷ್ಟೋ ಜನರು ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಸ್ನೇಹ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ.

ಭಗವಾನ್ ಶ್ರೀಕೃಷ್ಣ ಮತ್ತು ಸುದಾಮ(ಕುಚೇಲ) ಇಬ್ಬರು ಆಚಾರ್ಯ ಸಂದೀಪನ್ ಅವರ ಆಶ್ರಮದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಒಂದು ದಿನ ಶ್ರೀಕೃಷ್ಣ ಮತ್ತು ಸುದಾಮ ಇಬ್ಬರು ದಟ್ಟ ಅರಣ್ಯವೊಂದರ ಒಳಕ್ಕೆ ಹೋಗಿದ್ದರು.

ಅಲ್ಲಿ ಸಾಕಷ್ಟು ಸಮಯಗಳನ್ನು ಕಳೆದರು. ಇಬ್ಬರು ಮಾತನಾಡಿಕೊಳ್ಳುತ್ತಾ, ಅಲ್ಲಿಯ ವಾತಾವರಣವನ್ನು ಸವಿಯುತ್ತಾ ಸಾಗುತ್ತಿದ್ದರು. ಹೀಗೆ ಹೋಗುತ್ತಿರುವಾಗ ಶ್ರೀಕೃಷ್ಣನಿಗೆ ಹಸಿವಾಗಲು ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಸುದಾಮನ ಹತ್ತಿರ ಅವಲಕ್ಕಿ ಇತ್ತು ಆದರೆ ಸುದಾಮನು ತನ್ನ ಕೈಲಿದ್ದ ತಿಂಡಿಯನ್ನು ಶ್ರೀಕೃಷ್ಣನ ಬಳಿ ಹಂಚಿಕೊಂಡಿರಲಿಲ್ಲ.

ಅವರು ಆಶ್ರಮದಿಂದ ಕಾಡಿಗೆ ತೆರಳುವಾಗ ಗುರು ಸಂದೀಪನ್ ಅವರ ಪತ್ನಿ ನೀಡಿದ್ದರು. ಜೊತೆಗೆ ಇಬ್ಬರೂ ಹಂಚಿಕೊಂಡು ತಿನ್ನಬೇಕು ಎಂದು ಹೇಳಿದ್ದರು. ಆದರೆ ಸುದಾಮನು ತನ್ನ ಕೈಲಿದ್ದ ತಿಂಡಿಯನ್ನು ಶ್ರೀಕೃಷ್ಣನ ಬಳಿ ಹಂಚಿಕೊಂಡಿರಲಿಲ್ಲ. ಶ್ರೀಕೃಷ್ಣನು ಬಹಳ ಹಸಿವಾಗುತ್ತಿದೆ. ನಿನ್ನ ಬಳಿ ತಿನ್ನಲು ಏನಾದರೂ ಇದೆಯಾ? ಎಂದು ಕೇಳಿದನು. ಆಗ ಸುದಾಮ ತನ್ನ ಬಳಿ ಅವಲಕ್ಕಿ ಇದೆ ಎನ್ನುವುದನ್ನು ಹೇಳದೆ ಸುಮ್ಮನಾದನು.

ಸ್ವಲ್ಪ ಸಮಯದ ನಂತರ ಕೃಷ್ಣನು ಸುದಾಮನ ತೊಡೆಯ ಮೇಲೆ ಮಲಗಿದನು. ಕೃಷ್ಣ ಮಲಗಿದ ನಂತರ ಸುದಾಮನು ಅವಲಕ್ಕಿಯನ್ನು ತಿನ್ನಲು ಪ್ರಾರಂಭಿಸಿದನು. ಕೃಷ್ಣನು ಕಣ್ಣು ಮುಚ್ಚಿಕೊಂಡೇ ಸುದಾಮನಲ್ಲಿ ಏನನ್ನು ತಿನ್ನುತ್ತಿರುವೆ? ಎಂದು ಕೇಳಿದನು. ಆಗ ಸುದಾಮ ಏನು ಇಲ್ಲ, ಈ ಚಳಿಗೆ ತನ್ನ ಹಲ್ಲುಗಳು ನಡುಗುತ್ತಿವೆ. ಅದರ ಶಬ್ದ ನಿನಗೆ ಏನೋ ತಿನ್ನುತ್ತಿರುವಂತೆ ಕೇಳಿಸುತ್ತಿದೆ ಎಂದು ಹೇಳಿದನು.

ಆಗ ಕೃಷ್ಣನು ಸುದಾಮನಿಗೆ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಿದನು. ಇಬ್ಬರು ಸ್ನೇಹಿತು ಹೀಗೆ ಹೊರಗಡೆ ಬಂದಾಗ ಒಬ್ಬನು ತುಂಬಾ ಹಸಿದಿದ್ದನು. ಇನ್ನೊಬ್ಬನು ತಿನ್ನಲು ಆಹಾರವನ್ನು ಹೊಂದಿದ್ದನು. ಅವನು ಕದ್ದು ಮುಚ್ಚಿ ತಿನ್ನುವಾಗ ಹಸಿದ ಸ್ನೇಹಿತ ತಿನ್ನಲು ಏನಿದೆ? ಎಂದು ಕೆಳಿದಾಗ ಅವನ ಸ್ನೇಹಿತ “ಇಲ್ಲಿ ತಿನ್ನಲು ಏನಿರುತ್ತದೆ ಬರೀ ಮಣ್ಣು” ಎಂದನು. ಆಗ ದೇವರು ತಥಾಸ್ತು ಎಂದು ಹರಸಿದನು ಎಂದು ಹೇಳಿದನು.

ಹೀಗೆಯೇ ಸುದಾಮನು ಶ್ರೀಕೃಷ್ಣನಿಗೆ ತಿಂಡಿಯನ್ನು ಹಂಚಿಕೊಳ್ಳದೆ ಇರುವುದಕ್ಕಾಗಿ ತನ್ನ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಯಿತು. ಬಡತನವು ಅವನನ್ನು ಕಿತ್ತು ತಿನ್ನುವಂತಾಗಿತ್ತು. ಈ ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ “ಹಸಿದ ಮನುಷ್ಯ ಹಾಗೂ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ನಮ್ಮ ಸುತ್ತಲೂ ದೇವರು ಇರುತ್ತಾನೆ. ನಾವು ಏನನ್ನಾದರೂ ತಿನ್ನುವಾಗ ನಮ್ಮ ಸುತ್ತಲಿರುವವರಿಗೆ ಕೊಟ್ಟು ತಿನ್ನಬೇಕು.”

ಸುದಾಮನು ಬಹಳ ಬಡ ಕುಟುಂಬದಿಂದ ಬಂದವನಾಗಿದ್ದನು. ಕೃಷ್ಣ ಶ್ರೀಮಂತ ಮನೆಯಿಂದ ಬಂದವನು. ಇವರಿಬ್ಬರ ನಡುವೆ ಸಾಮಾಜಿಕವಾದ ವ್ಯತ್ಯಾಸ ಇದ್ದರೂ ಇವರ ಸ್ನೇಹ ಮಾತ್ರ ಉತ್ತಮವಾಗಿತ್ತು. ಇಬ್ಬರೂ ವಿದ್ಯಾಭ್ಯಾಸ ಮುಗಿಸಿ, ಮರಳಿದ ಮೇಲೆ ಸಂಪರ್ಕಗಳನ್ನು ಕಳೆದುಕೊಂಡಿದ್ದರು.

ಇತ್ತ ಬಡತನದಿಂದಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು ಇವನು ಸಾಕಷ್ಟು ಕಷ್ಟದ ಸಮಯವನ್ನು ಎದುರಿಸುತ್ತಿದ್ದನು. ಬಡತನದಿಂದಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು. ಊಟಕ್ಕೂ ಹಣವಿಲ್ಲದೆ ಕಷ್ಟಪಡುತ್ತಿದ್ದನು. ಆಗ ಅವನ ಹೆಂಡತಿ ಸುಶೀಲ ಸುದಾಮನಿಗೆ ಗೆಳೆಯ ಶ್ರೀಕೃಷ್ಣನ ಸಹಾಯ ಪಡೆಯಲು ನೆನಪಿಸಿದಳು.

ಹೆಂಡತಿಯ ಮಾತಿಗೆ ಒಪ್ಪಿಕೊಂಡ ಸುದಾಮ ಕೃಷ್ಣನನ್ನು ಭೇಟಿಯಾಗಲು ಸಿದ್ಧನನಾದನು. ಗೆಳೆಯನ್ನು ಭೇಟಿಯಾಗಿ ಕೊಡಲು ಸುದಾಮನ ಬಳಿ ಏನೂ ಇರಲಿಲ್ಲ. ಕೃಷ್ಣನಿಗೆ ಇಷ್ಟವಾದ ಅವಲಕ್ಕಿ ಮನೆಯಲ್ಲಿ ಸ್ವಲ್ಪ ಇರುವುದು ನೆನಪಾಯಿತು. ಅದನ್ನೇ ಕೊಡಲು ನಿರ್ಧರಿಸಿ, ಕೊಂಡೊಯ್ದನು. ಕೃಷ್ಣನ್ನು ಭೇಟಿಯಾದನು. ಹಳೆಯ ಸ್ನೇಹಿತನನ್ನು ಕಂಡು ಕೃಷ್ಣನಿಗೆ ಬಹಳ ಸಂತೋಷ ಪಟ್ಟನು. 

ಕೃಷ್ಣನು ಸುದಾಮನಿಗೆ ಪ್ರೀತಿಯಿಂದ ಶ್ರೀಮಂತ ಸತ್ಕಾರವನ್ನು ನೀಡಿದನು. ಮೃಷ್ಟಾನ್ನ ಭೋಜನವನ್ನು ಸ್ವೀಕರಿಸದ ಸುದಾಮನು ಸ್ನೇಹಿತನಲ್ಲಿ ತನ್ನ ಕಷ್ಟವನ್ನು ಹೇಳದೆ ಸುಮ್ಮನಾದನು. ಜೊತೆಗೆ ತಾನು ತಂದ ಅವಲಕ್ಕಿಯನ್ನು ಕೊಡಲು ಹಿಂಜರಿದನು. ಆದರೆ ಸುದಾಮನ ಸ್ಥಿತಿ ಹಾಗೂ ಮನದಿಂಗಿತವನ್ನು ಅರಿತ ಕೃಷ್ಣನು, ಸುದಾಮನಲ್ಲಿ ಅವಲಕ್ಕಿಯನ್ನು ಕೇಳಿ ಪಡೆದನು. ಜೊತೆಗೆ ರುಕ್ಮಿಣಿಯ ಬಳಿ ಲಕ್ಷ್ಮಿಯ ಅವತಾರ ತಾಳಿ, ಸುದಾಮನ ಕಷ್ಟಗಳನ್ನು ಪರಿಹರಿಸಲು ಹೇಳಿದನು.

ಬಂದಿರುವ ವಿಚಾರವನ್ನು ಕೃಷ್ಣನಿಗೆ ಹೇಳದೆಯೇ ಮನೆಗೆ ಹಿಂತಿರುಗಿದನು. ಆದರೆ ಸುದಾಮನು ಮನೆಗೆ ಬರುವಷ್ಟರಲ್ಲಿ ಮನೆಯ ಪರಿಸ್ಥಿತಿಗಳು ಬದಲಾಗಿದ್ದವು. ಹೆಂಡತಿ ಮಕ್ಕಳು ಉತ್ತಮ ಬಟ್ಟೆಯನ್ನು ತೊಟ್ಟಿದ್ದರು. ಜೊತೆಗೆ ಮನೆಯ ಸುಧಾರಣೆ ಹಾಗೂ ಬಡತನವು ನಿವಾರಣೆಯಾಗಿತ್ತು. ಉತ್ತಮ ಸ್ಥಿತಿಯಿಂದ ಕುಟುಂಬವು ಸುದಾಮನ ಆಗಮನಕ್ಕೆ ಕಾಯುತ್ತಿದ್ದರು. ಇದೆಲ್ಲವೂ ಕೃಷ್ಣನ ಲೀಲೆ ಎನ್ನುವುದನ್ನು ತಿಳಿದ ಸುದಾಮ ಮತ್ತು ಅವನ ಕುಟುಂಬದವರು ಕೃಷ್ಣನಿಗೆ ಧನ್ಯವಾದ ಸಲ್ಲಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!