ದೊಡ್ಡಬಳ್ಳಾಪುರ, (ಸೆ.04): ಭಾರತೀಯ ಜೀವ ವಿಮಾ ನಿಗಮದ 67ನೇ ವಾರ್ಷಿಕೋತ್ಸವ ವಿಮಾ ಸಪ್ತಾಹ ಕಾರ್ಯಕ್ರಮ ಸತತ 7 ದಿನಗಳ ಕಾಲ ವಿವಿಧ ಸಾಂಸ್ಕೃತಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಪ್ತಾಹದ ಅಂಗವಾಗಿ ಇಂದು ನಗರದ ಎಲ್ಐಸಿ ಕಚೇರಿ ಬಳಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಜಾಥಾವನ್ನು ಶಾಖಾಧಿಕಾರಿ ಜಿ.ಮೂರ್ತಿ ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿದ ಅವರು, ದೇಶದ ಬೃಹತ್ ಉದ್ಯಮ ಗಳಲ್ಲಿ ಒಂದಾದ ಬಾರತೀಯ ಜೀವ ವಿಮಾ ನಿಗಮ, ಭಾರತದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನುಸೆಳೆಯುವಲ್ಲಿ ಯಶಸ್ಸು ಸಾಧಿಸಿದ ಸಂಸ್ಥೆಯಾಗಿದೆ.
ಭಾರತದಲ್ಲಿ 2048 ಮುಖ್ಯ ಶಾಖೆಗಳು ,8 ವಲಯ, 1580( ಸೆಟ್ ಲೈಟ್ ಬ್ರಾಂಚ್) ಉಪ ಸಂಪರ್ಕ ಶಾಖೆ, 98463 ಸಿಬ್ಬಂದಿಗಳು, 1347325 ಪ್ರತಿನಿಧಿಗಳು, ಲೈಫ್ ಫೌಂಡ್ ಒಟ್ಟು ಸಂಪತ್ತು 4550571.73 ಕೋಟಿ ಒಳಗೊಂಡ ಬೃಹತ್ ಸಂಸ್ಥೆ ಎಂಬ ಎಗ್ಗಳಿಕೆಗೆ ನಮ್ಮ ಸಂಸ್ಥೆ ಪಾತ್ರವಾಗಿದೆ.
ದೇಶದ ಆರ್ಥಿಕ ಸ್ಥಿತಿ ಗತಿಗಳನ್ನು ಸಮತೋಲನ ಗೊಳಿಸುವಲ್ಲಿ ಪಂಚ ವಾರ್ಷಿಕ ಯೋಜನೆ ಗಳಿಗೆ ಹಣ ನೀಡುವಲ್ಲಿ, ವಿಮಾ ಪರಿಹಾರ 98.60% ನೀಡುವಲ್ಲಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿನಿಧಿ ಸಂಘದ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್ ಮಾತನಾಡಿ, ಜನರ ಹಣವನ್ನು ಜನರಿಗಾಗಿ ಮೂಡುಪಾಗಿಟ್ಟ ಸಂಸ್ಥೆ ಇದಾಗಿದ್ದು, ಗ್ರಾಹಕರ ಕುಂದು ಕೊರತೆ ನೀಗಿಸುಲ್ಲಿ, ಮೆಚ್ಚುರುಟಿ ಹಾಗು death ಕ್ಲೇಮ್ ನೀಡುವಲ್ಲಿ ಬೇರೆ ಸಂಸ್ಥೆ ಗಳಿಗೆ ಹೋಲಿಕೆಗೆ ಸಿಗದ ರೀತಿಯಲ್ಲಿ ಕಾರ್ಯ ನಿಷ್ಠೆ ಮೆರೆದಿದಿದೆ. ಕಳಂಕ ರಹಿತ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸಹಾಯ ಧನ, ಮನೆ ಸಾಲ ವಯಕ್ತಿಕ ಸಾಲ ದಂತಹ ಸಾಮಾಜಿಕ, ಶೈಕ್ಷಣಿಕ,ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿ ಯಾಗಿದೆ ಎಂದರು.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ವಿಮಾ ಸಪ್ತಾಹ ಕಾರ್ಯಕ್ರಮ 7 ದಿನಗಳ ಕಾಲ ನೆಡೆಯಲಿದ್ದು, ಭಾರತೀಯ ಜೀವ ವಿಮಾ ನಿಗಮದ ನೌಕರರಿಗೆ, ಪ್ರತಿನಿದಿಗಳಿಗೆ ಹಾಗು ಅವರ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಜಯಗಳಿಸಿದ ಎಲ್ಲರಿಗೂ ಬಹುಮಾನ ನೀಡಿ ಪ್ರೊತ್ಸಾಹ ನೀಡುತ್ತಿದೆ. ತಾಲೂಕಿನ ಐದು ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮ ರೂಪಿಸಿ ಅವರನ್ನು ಭಾಗಿಯಾಗುವಂತೆ ಪ್ರೇರಣೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಐಸಿ ಅಧಿಕಾರಿಗಳಾದ ನಾಗಮುರಳೀಧರ್, ವೆಂಕಟರಮಣಪ್ಪ, ಶ್ರೀಹರಿ, ಮೇಘನಾ, ಜಮುನಾ, ನರೇಂದ್ರ ಕುಮಾರ್, ಸುಧೀರ್, ಹಿರಿಯ ಪ್ರತಿನಿಧಿಗಳಾದ ಆರ್.ಎಸ್.ನಾಯಕ, ಸೋಮಶೇಖರ್, ಜಿ.ಏನ್.ವೆಂಕಟೇಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….