ದೊಡ್ಡಬಳ್ಳಾಪುರ, (ಸೆ.05): ತಾಲೂಕಿನ ಚಿಕ್ಕಮಧುರೆ ವ್ಯಾಪ್ತಿಯಲ್ಲಿ ಚಿರತೆ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮಧುರೆ ಸಮೀಪದ ಮಾರಸಂದ್ರ ಹೊರವಲಯದಲ್ಲಿರುವ ಕೆರೆ ಬಳಿಯಿರುವ ಜಮೀನಿನ ಬಳಿ ತಾಯಿ ಮತ್ತು ಮರಿ ಚಿರತೆ ಕಂಡು ಬಂದಿದೆ.
ಮಾರಸಂದ್ರ ಗ್ರಾಮದ ಮಹಿಳೆಯೋರ್ವರು ಪೈರು ನೆಡಲು ಇಂದು ಬೆಳಗ್ಗೆ ಜಮೀನಿಗೆ ತೆರಳುವಾಗ ಚಿರತೆಗಳು ಕಂಡು ಬಂದಿದ್ದು, ಹೆದ್ದರಿದ ಮಹಿಳೆ ಸ್ಥಳದಿಂದ ಓಡಿ ಬದಿದ್ದಾರೆ.
ನಂತರ ಗ್ರಾಮಕ್ಕೆ ಬಂದು ಸಂಬಂಧಿಕರೊಂದಿಗೆ ತೆರಳಿದಾಗ ಚಿರತೆಗಳ ಹೆಜ್ಜೆ ಗುರುತುಗಳು ಕಂಡುಬಂದಿವೆ.
ಈ ಕುರಿತಂತೆ ಹರಿತಲೇಖನಿ ಅರಣ್ಯ ಇಲಾಖೆ ಅಧಿಕಾರಿ ಮುನಿರಾಜು ಅವರನ್ನು ಸಂಪರ್ಕಿಸಿದಾಗ, ಚಿರತೆ ಕಂಡುಬಂದಿರುವ ಮಾಹಿತಿ ಬಂದಿಲ್ಲ. ಕೂಡಲೇ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….