ಬೆಂಗಳೂರು, (ಸೆ.05): ಸೂರ್ಯನತ್ತ ಪ್ರಯಾಣ ಬೆಳೆಸಿರುವ ಆದಿತ್ಯ L1 ಯೋಜನೆಯ ಎರಡನೇ ಹಂತದ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಒಟ್ಟೂ 5 ಕಕ್ಷೆಗಳನ್ನು ಹಾದು ಲಾಗ್ರೇಂಜ್ ಪಾಯಿಂಟ್ ತಲುಪಲಿರುವ ಆದಿತ್ಯ L1 ಎಲ್ಲಾ ಕಾರ್ಯಗಳು ನಿರೀಕ್ಷೆಯಂತೆ ನಡೆಯುತ್ತಿದ್ದು, ಮೂರನೇ ಕಕ್ಷೆ ಎತ್ತರಿಸುವ ಕಾರ್ಯ ಸೆಪ್ಟೆಂಬರ್ 10 ರಂದು ಮಧ್ಯರಾತ್ರಿ 2.30ರ ಸುಮಾರಿಗೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಸೆಪ್ಟೆಂಬರ್ 2 ಬೆಳಿಗ್ಗೆ 11.50ರ ಸಮಯಕ್ಕೆ 244 ಕೆ.ಜಿ ಪೇಲೋಡ್‌ಗಳನ್ನು ಹೊತ್ತು ಒಟ್ಟೂ 1475 ಕೆಜಿ ಉಡಾವಣಾ ಸಮೂಹದ ರಾಕೆಟ್ ನಭಕ್ಕೆ ಹಾರಿದೆ.
ಇದು ಸೂರ್ಯನನ್ನ ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಯೋಜನೆಯಾಗಿದ್ದು 15 ಲಕ್ಷ ಕಿಲೋ ಮೀಟರ್ ದೂರ ಸಾಗಿ ನಿಗದಿತ ಕಕ್ಷೆಯ ಲಾಂಗ್ರೇಜ್ ಪಾಯಿಂಟ್‌ನಲ್ಲಿ ನೆಲೆನಿಂತು ಅಧ್ಯಯನ ನಡೆಸಲಿದೆ.
ನಿಗದಿತ ಲಾಂಗ್ರೇಜ್ ಪಾಯಿಂಟ್ ತಲುಪಲು ನೌಕೆ 125 ದಿನಗಳ (125 Days) ಪ್ರಯಾಣ ಕೈಗೊಳ್ಳಲಿದೆ.
ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದ್ರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ.
ಆದಿತ್ಯ-L1 ಅನ್ನು ಸೂರ್ಯ-ಭೂಮಿಯ ನಡುವಿನ ವ್ಯವಸ್ಥೆಯ L1 (ಲಾಗ್ರೇಂಜಿಯನ್) ಕಕ್ಷೆಯಲ್ಲಿ ಇರಿಸಲಾಗುತ್ತದೆ. ಅಲ್ಲಿ ಎರಡೂ ಆಕಾಶಕಾಯಗಳ ಗುರುತ್ವಾಕರ್ಷಣೆಯ ಪರಿಣಾಮಗಳು ಪರಸ್ಪರ ರದ್ದುಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿನ ಆ ʼನಿಲುಗಡೆ ಸ್ಥಳʼವು ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನಗೊಳಿಸುವುದರಿಂದ, ಬಾಹ್ಯಾಕಾಶ ನೌಕೆಯನ್ನು ಯಾವುದೇ ಇಂಧನ ಬಳಕೆ ಮಾಡದೆಯೇ ಅಲ್ಲಿಡಬಹುದು. ಈ ಕಕ್ಷೆಯನ್ನು ತಲುಪಲು ಅದು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….