ದೊಡ್ಡಬಳ್ಳಾಪುರ, (ಸೆ.05): ಕಾಡು ಹಂದಿಯೊಂದು ಗ್ರಾಮಕ್ಕೆ ನುಗ್ಗಿ ಯಾವುದೇ ಅಂಜಿಕೆಯಿಲ್ಲದೆ ವಿಹಾರ ನಡೆಸಿರುವ ಘಟನೆ ತಾಲೂಕಿನ ಆರೂಢಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಗುರುವಾರ ಬೆಳಗ್ಗಿನ ಜಾವ 3.30ರ ಸಮಯಲ್ಲಿ ಗ್ರಾಮಕ್ಕೆ ಬಂದಿರುವ ಕಾಡು ಹಂದಿ, ಊರಿನಲ್ಲಿ ಓಡಾಟ ನಡೆಸಿ ಪರಾರಿಯಾಗಿದೆ.
ನಾಯಿಗಳ ಬೋಗಳುವಿಕೆಯಿಂದ ಮನೆಯ ಮುಂಭಾಗದಲ್ಲಿ ಮಲಗಿದ್ದ ಕೆಲವರು ಎದ್ದು ನೋಡಿದಾಗ ಹಂದಿಯನ್ನು ಕಂಡು ಬಂದಿದ್ದು, ಮನೆಯೊಳಕ್ಕೆ ಓಡಿಹೋಗಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಅಂಗಡಿಯೊಂದರಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕಾಡು ಹಂದಿ ಓಡಾಡಿರುವ ದೃಶ್ಯ ಸೆರೆಯಾಗಿದೆ.
ಉತ್ತಮ ಮಳೆಯಿಲ್ಲದ ಕಾರಣ ಜಮೀನುಗಳಲ್ಲಿ ಬಿತ್ತನೆಯಿಲ್ಲದೆ ವನ್ಯ ಜೀವಿಗಳಿಗೆ ಆಹಾರ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ರವಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….