ಚಿಕ್ಕಬಳ್ಳಾಪುರ, (ಸೆ.06): ಗ್ರಾಮ ಪಂಚಾಯ್ತಿ ಅಟೆಂಡರ್ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ತಾಲ್ಲೂಕು ಚೇಳೂರಿನ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಪಂ ಕಚೇರಿಯಲ್ಲಿ ನಡೆಯುವ ರಹಸ್ಯಗಳನ್ನೆಲ್ಲಾ ಹೊರಗೆ ಹೋಗಿ ಸಾರ್ವಜನಿಕರಿಗೆ ಹೇಳಿಕೊಡ್ತೀಯಾ ಎಂದು ಚೇಳೂರು ಗ್ರಾಪಂ ಸದಸ್ಯ ಕಡ್ಡಿಲು ವೆಂಕಟರವಣಪ್ಪ ಗ್ರಾಪಂ ಅಟೆಂಡರ್ ಮುರುಳಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ದೃಶ್ಯ ಗ್ರಾಮ ಪಂಚಾಯಿತಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಟೆಂಡರ್‌ಮುರುಳಿಗೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದು ಸದಸ್ಯ ವೆಂಕಟರವಣಪ್ಪ ವಿರುದ್ಧ ಚೇಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….