ಜಕಾರ್ತಾ, (ಸೆ.07): ದೇಶದ ಹೆಸರು ಬದಲಾವಣೆ ಕುರಿತಂತೆ ರಾಷ್ಟ್ರ ರಾಜಕಾರಣದಲ್ಲಿ ಉಂಟಾಗಿರುವ ವಿವಾದಗಳ ನಡುವೆ, ಇಂಡೋನೇಷಿಯಾದಲ್ಲಿ ನಡೆಯುತ್ತಿರುವ 20ನೇ ಏಷಿಯನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ್’ ಎಂದು ಉಲ್ಲೇಖಿಸಿದ್ದಾರೆ.
ನಮ್ಮ ಇತಿಹಾಸ ಮತ್ತು ಭೌಗೋಳಿಕತೆ ಭಾರತ್ ಮತ್ತು ಏಷಿಯಾವನ್ನು ಸಂಪರ್ಕಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ವಸುದೈವ ಕುಟುಂಬಕಂ ಮುಖ್ಯ ವಿಷಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ದೇಶವನ್ನು ‘ಭಾರತ್’ ಎಂದು ಪ್ರಧಾನಿ ಅವರು ಕರೆದಿರುವುದು ದೇಶದ ಮರುನಾಮಕರಣ ಚರ್ಚೆಯ ನಡುವೆ ಗಮನ ಸೆಳೆದಿದೆ.
ಇದೇ ವೇಳೆ, ಡಿಜಿಟಲ್ ಪರಿವರ್ತನೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆಯಂತಹ ಕ್ಷೇತ್ರಗಳಲ್ಲಿ ಭಾರತ್-ಆಸಿಯಾನ್ ಸಹಕಾರವನ್ನು ಬಲಪಡಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ್ದಾರೆ.
ಜಿ20 ಶೃಂಗಸಭೆಯ ಭೋಜನಕೂಟಕ್ಕೆ ಭಾರತದ ಅಧ್ಯಕ್ಷತೆಯಲ್ಲಿ ಎಂದು ಆಹ್ವಾನ ಪತ್ರಿಕೆ ವೈರಲ್ ಆದ ಬಳಿಕ ಈ ಚರ್ಚೆ ತೀವ್ರವಾಗಿದೆ.
ವಿಪಕ್ಷಗಳ ಒಕ್ಕೂಟವು ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟಿರುವುದರಿಂದ ಕೇಂದ್ರ ಸರ್ಕಾರ ದೇಶದ ಹೆಸರನ್ನು ಅಧಿಕೃತವಾಗಿ ಇಂಡಿಯಾ ಎಂದು ಮರುನಾಮಕರಣ ಮಾಡಲು ಮುಂದಾಗಿದೆ ಎಂದು ಆರೋಪಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….