ಬೆಂಗಳೂರು, (ಸೆ.13): ಕಳೆದ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಸಿಸಿಬಿ ವಶದಲ್ಲಿರುವ ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಿಚಾರದಲ್ಲಿ ಬಿಜೆಪಿಯನ್ನು ವಿರುದ್ದ ಸರಣಿ ಎಕ್ಸ್ ಮೂಲಕ ಕಾಂಗ್ರೆಸ್ ಕುಟುಕಿದೆ.
“ಬಿಜೆಪಿ ತನ್ನ ಆಡಳಿತ ಅವಧಿಯಲ್ಲಿ ಸರ್ಕಾರಿ ಅತಿಥಿಗೃಹ ಕುಮಾರ ಕೃಪವನ್ನು ಭ್ರಷ್ಟರು, ದಗಾಕೋರರ ಅಡ್ಡೆಯಾಗಿ ಮಾಡಿತ್ತೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಸ್ಯಾಂಟ್ರೋ ರವಿ, ಚೈನ್ ಚೈತ್ರಾ ತಮ್ಮ ವಂಚನೆಯ ಕೆಲಸಗಳಿಗೆ ಕುಮಾರ ಕೃಪವನ್ನೇ ಆಶ್ರಯಿಸಿದ್ದರು. ಕುಮಾರ ಕೃಪವನ್ನು ಥರ್ಡ್‌ಗ್ರೇಡ್ ಲಾಡ್ಜ್ ನಂತೆ ವ್ಯವಸ್ಥೆ ಮಾಡಿಕೊಡುವುದರ ಹಿಂದೆ ಯಾರ ಕೃಪೆ ಇತ್ತು” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಟಿಕೆಟ್ ಕೊಡಿಸುವುದಾಗಿ ಉಗ್ರ ಭಾಷಣಕಾರ್ತಿ 7 ಕೋಟಿ ಪಡೆದು ವಂಚಿಸಿದ್ದಾರೆ ಇದರಲ್ಲಿ ಬಿಜೆಪಿಗೆ ಪಾಲೆಷ್ಟು ಮತ್ತು ಆರ್‌ಎಸ್‌ಎಸ್ ಪಾಲೆಷ್ಟು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ಸಿಎಂ ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ ಕೂಡ ಮಾರಾಟವಾಗಿದೆಯೇ ? ಈ ವಂಚನೆ ಬಗ್ಗೆ ಬಿಜೆಪಿ ಯಾಕೆ ಮೌನವಹಿಸಿದೆ ಎಂದು ಕಿಚಾಯಿಸಿದೆ.
ಇನ್ನೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕುರಿತು ಕಿಡಿಕಾರಿರುವ ಕಾಂಗ್ರೆಸ್, ಹಿಂದೆ ಗೃಹಮಂತ್ರಿಯಾಗಿದ್ದಾಗ PSI ಹಗರಣದ ಪ್ರಮುಖ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮಾಜಿ ಗೃಹ ಸಚಿವರು ಈಗ ವಂಚನೆ ಆರೋಪಿಯ ರಕ್ಷಣೆಗೆ ಬ್ಯಾಟ್ ಬೀಸುತ್ತಿದ್ದಾರೆ.
@JnanendraAraga ಅವರೇ, ಆಕೆ ವಂಚಿಸಿದ್ದು ನಿಮ್ಮದೇ ಪಕ್ಷದಲ್ಲಿರುವ ಹಿಂದೂಪರ ಉದ್ಯಮಿಗೆ, ಆಕೆಯ ವಿರುದ್ದ ದೂರು ನೀಡಿದ್ದು ಅದೇ ನಿಮ್ಮದೇ ಪಕ್ಷದ ಮುಖಂಡ, ಆದರೂ ಆಕೆಯ ಪರ ನಿಂತಿದ್ದೀರಿ ಅಂದರೆ 7 ಕೋಟಿಯಲ್ಲಿ ನಿಮಗೂ ಪಾಲಿದೆಯೇ? ಬಿಜೆಪಿ ಅಂದರೆ ಭ್ರಷ್ಟರು, ವಂಚಕರಿಗೆ ಬಲು ಪ್ರೀತಿ ಏಕೆ? ಎಂದು ಪ್ರಶ್ನಿಸಿದೆ.
ಅಲ್ಲದೆ, ಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ @JnanendraAraga ಅವರೇ?
ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ ಎಂದು ಪ್ರಶ್ನಿಸಿದೆ.
ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂದಿದ್ದಲ್ಲದೆ, ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ ಎನ್ನುವ ಮೂಲಕ ಚೈತ್ರ ಕುಂದಾಪುರ ಅವರು ಆರಗ ಜ್ಞಾನೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಯಿರುವ ಪೊಟೋ ಶೇರ್ ಮಾಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….