ಚಿಕ್ಕಬಳ್ಳಾಪುರ, (ಸೆ.13): ಸಾಲು ಸಾಲು ಹಬ್ಬಗಳಿದ್ರೂ ಹೂ ಬೆಲೆ ಹೂ ಬೆಲೆಪಾತಾಳಕ್ಕೆ ಕುಸಿದಿದ್ದು ಇದರಿಂದ ವಿಚಲಿತನಾದ ರೈತ ತುಂಬಿದ ಹೂ ತೋಟವನ್ನು ಉಳುಮೆ ಮಾಡಿ ನಾಶಪಡಸಿರುವ ಘಟನೆ ಚಿಕ್ಕಬಳ್ಳಾಪುರದ ಜಾತವಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಜಾತವಾರ ಹೊಸಹಳ್ಳಿ ಗ್ರಾಮದ ವೆಂಕಟೇಶ್ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಸೇವಂತಿಗೆ ಹೂ ಬೆಳೆದಿದ್ದಾನೆ. ಶ್ರಾವಣ ಮಾಸ ಗೌರಿಗಣೇಶ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಸೀಸನ್ ನಲ್ಲಿ ಹೂ ಬೆಳೆದರೆ ನಾಲ್ಕು ಕಾಸು ಸಿಗುತ್ತೆ ಎಂಬ ಆಸೆಯಿಂದ ಎರಡು ಎಕರೆ ಜಮೀನಿನಲ್ಲಿ ಸೇವಂತಿ ಹೂ ಬೆಳೆದಿದ್ದಾನೆ. ಆದರೆ ದಿಢೀರ್ ಹೂ ಬೆಲೆ ಕುಸಿದಿದ್ದು ಇಪ್ಪತೈದರಿಂದ ಮುವ್ವತ್ತು ಕೆಜಿಯ ಸೇವಂತಿಗೆ ಬ್ಯಾಗ್ ಕೇವಲ ನೂರು ರೂಪಾಯಿಗೆ ಮಾರಾಟವಾಗುತಿದ್ದು, ಹೂ ಬಿಡಿಸಲು ಬಂದ ಕೂಲಿಯವರಿಗೆ ಹಣ ನೀಡಲು ಆಗದೆ ತುಂಬಿದ ಹೂ ತೋಟವನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದ್ದಾನೆ.
ಶ್ರಾವಣ ಮಾಸ ಶುರುವಾದರೆ ಸಾಲು ಸಾಲು ಹಬ್ಬಗಳು ಬರುತ್ತವೆ. ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಉತ್ತಮ ಬೆಲೆ ಸಿಗುತ್ತದೆ ಎಂಬ ರೈತರ ನಿರೀಕ್ಷೆ ದಿಢೀರ್ ಬೆಲೆ ಕುಸಿದಿಂದ ಹುಸಿಯಾಗಿದೆ.
ಹೂವುಗೆ ಬೇಡಿಕೆ ಇರುತ್ತೆ ಎನ್ನುವ ಕಾರಣಕ್ಕೆ ಜಿಲ್ಲಾದ್ಯಂತ ಸೇವಂತಿ, ಗುಲಾಬಿಯನ್ನು ಮಿತಿ ಮೀರಿ ನಾಟಿ ಮಾಡಲಾಗಿತ್ತು. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಆದರೆ ವರಲಕ್ಷ್ಮೀ ಹಬ್ಬದವರೆಗೂ ಇದ್ದ ಬೆಲೆ. ಈಗ ದಿಢೀರ್ ಕುಸಿದಿದೆ.
ಕಳೆದ 2-3 ದಿನಗಳ ಮಳೆ, ಆಂಧ್ರಪ್ರದೇಶ, ತೆಲಾಂಗಾಣ, ತಮಿಳು ನಾಡು, ಕೇರಳ ಸೇರಿದಂತೆ ನಾನಾ ಕಡೆಗಳಿಂದ ಬರ ಬೇಕಿದ್ದ ಹೂ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದು ಸೇರಿದಂತೆ ಕಾರಣಗಳಿಂದ ಹೂವುಗಳನ್ನು ಕೇಳುವವರಿಲ್ಲದೆ ಮಾರುಕಟ್ಟೆಯಲ್ಲೇ ಸುರಿದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವರಲಕ್ಷ್ಮೀ ಹಬ್ಬ, ಶ್ರಾವಣ ಶನಿವಾರ, ಗಣೇಶನ ಹಬ್ಬಕ್ಕೆಂದು ಜಿಲ್ಲೆಯಾದ್ಯಂತ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಂತಿ, ಚೆಂಡು ಹೂವನ್ನು ಅತಿ ಹೆಚ್ಚಾಗಿ ಬೆಳೆಯುವುದು ವಾಡಿಕೆ. ಪ್ರತಿ ಬಾರಿಯೂ ಉತ್ತಮ ಬೆಲೆ ಲಭ್ಯವಾಗುತ್ತಿತ್ತು. ಆದರೆ ಈ ಬಾರಿ ಮಳೆ ಇಲ್ಲದ ಕಾರಣ ಎಲ್ಲೆಡೆ ಸೇವಂತಿ, ಚೆಂಡು ಮತ್ತು ಗುಲಾಬಿ ಹೆಚ್ಚಿನ ಫಸಲು ಬಂದಿದೆ. ಹೀಗಾಗಿ ಬೇಡಿಕೆಗಿಂತ ಹೆಚ್ಚಾಗಿ ಮಾರುಕಟ್ಟೆಗೆ ಹೂವು ಆವಕವಾಗುತ್ತಿದೆ. ಇದರಿಂದ ಯಾರೂ ಕೇಳುವವರಿಲ್ಲದಂತಾಗಿದೆ. 25ರಿಂದ 30 ಕೆ.ಜಿ. ತೂಗುವ ಬ್ಯಾಗ್‌ನ್ನು 100 ರೂ.ಗೆ ಬೆಳೆಗಾರರು ಕೊಡಲು ಅಂಗಲಾಚಿದರೂ ಕೊಳ್ಳುವವರಿಲ್ಲದಂತಾಗಿದೆ.
ಸರ್ಕಾರ ಕೂಡಲೆ ಸಂಕಷ್ಟದಲ್ಲಿರುವ ಹೂ ಬೆಳೆಗಾರರ ನೆರವಿಗೆ ದಾವಿಸ ಬೇಕಿದೆ ಎಂದು ಕರ್ನಾಟಕ ರೈತ ಜನಸೇನಾದ ಜಿಲ್ಲಾಧ್ಯಕ್ಷೆ ಸಿ.ಎನ್.ಸುಷ್ಮಾ ಶ್ರೀನಿವಾಸ್ ಒತ್ತಾಯಿಸಿದ್ದು, ಬೆಲೆ ಕುಸಿತದಿಂದ ಬೇಸತ್ತಿರುವ ಹೂ ಬೆಳೆಗಾರ ಜಾತವಾರ ಹೊಸಹಳ್ಳಿ ಗ್ರಾಮದ ವೆಂಕಟೇಶ್ ಮೊದಲು ಎರಡು ಎಕರೆಯಲ್ಲಿ ಸಂಮೃಧ್ಧವಾಗಿ ಬೆಳೆದಿರುವ ಸೇವಂತಿಗೆಯ ತೋಟವನ್ನು ಟ್ರಾಕ್ಟರ್ ನಿಂದ ಉಳುಮೆ ಮಾಡುವ ವಿಡಿಯೋ ವನ್ನು ವೈರಲ್ ಮಾಡಿದ್ದಾನೆ. ಇದನ್ನು ನೋಡಿರುವ ರೈತರು ಸಮೂಹ ಸನ್ನಿಯಂತೆ ಇನ್ನೆಷ್ಟು ತೋಟಗಳನ್ನು ನಾಶ ಪಡಿಸುತ್ತಾರೋ ಎಂದು ಆತಂಕ ವ್ಯಕ್ತಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….