ದೊಡ್ಡಬಳ್ಳಾಪುರ: ಮದ್ಯದಂಗಡಿಯ ಬಾಗಿಲು ಮೀಟಿದ ಕಳ್ಳರು..!! / ನಗದು, ಮೂರು ಬಿಯರ್ ಬಾಟಲ್ ಕದ್ದು ಪರಾರಿ

ದೊಡ್ಡಬಳ್ಳಾಪುರ, (ಸೆ.15): ಮದ್ಯದಂಗಡಿಯ ಬಾಗಿಲು ಮುರಿದಿರುವ ಕಳ್ಳರು, ನಗದು, ಬಿಯರ್ ಬಾಟಲ್, ಸಿಗರೇಟ್ ಪ್ಯಾಕೆಟ್ ದೋಚಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಆರೂಢಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಿರಣ್ ಎನ್ನುವವರಿಗೆ ಸೇರಿದ ಮದ್ಯದ ಅಂಗಡಿಗೆ ಅಳವಡಿಸಿರುವ ಕಬ್ಬಿಣದ ಶೆಟರ್ ಬಾಗಿಲು ಮೀಟಿರುವ ಕಳ್ಳರು, ಒಂದು ಲಕ್ಷಕ್ಕೂ ಹೆಚ್ಚು ನಗದು, ಮೂರು ಬಿಯರ್ ಬಾಟಲ್ ಹಾಗೂ ಸುಮಾರು 10 ಸಾವಿರಕ್ಕೂ ಹೆಚ್ಚು ಮೌಲ್ಯದ ಸಿಗರೇಟ್ ಪ್ಯಾಕ್‌ಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮದ್ಯದ ಅಂಗಡಿಗೆ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ದೃಶ್ಯ ಸೆರೆಯಾಗುವ ಡಿವಿಆರ್ ಅನ್ನು ಕೂಡ ಚಾಲಕಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೊಸಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಬ್ ಇನ್ಸ್‌ಪೆಕ್ಟರ್ ರವಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!