ದೊಡ್ಡಬಳ್ಳಾಪುರ, (ಸೆ.17): ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹಲವಾರು ನಿಯಮಗಳು ನಡುವೆ ಆಗಮಿಸಿರುವ ಗೌರಿ ಗಣೇಶ ಹಬ್ಬಕ್ಕೆ ಸಿದ್ದತೆಗಳು ಭರದದಿಂದ ನಡೆದಿವೆ.
ಸರ್ಕಾರ ಪಿಒಪಿ ಗಣೇಶಮೂರ್ತಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಲು ಆದೇಶವಿರುವುದರಿಂದ ಪಾರಂಪರಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಈ ಬಾರಿಯೂ ನಗರದ ಕೋರ್ಟ್ ರಸ್ತೆಯ ಬದಿಯಲ್ಲಿ ಸಾಲಾಗಿ ಅಂಗಡಿಗಳನ್ನು ಇಡಲಾಗುತ್ತಿದೆ. ಕನಿಷ್ಟ 150 ರೂ. ಗಳಿಂದ 10 ಸಾವಿರ ರೂಗಳವರೆಗಿನ ಗಣೇಶ ಮೂರ್ತಿಗಳು ಇಲ್ಲಿ ಮಾರಾಟ ಮಾಡುತ್ತಿದ್ದು, ಕಳೆದ ಬಾರಿಗಿಂತ ಬೆಲೆ ಹೆಚ್ಚಾಗಿವೆ.
ಗಣೇಶ ಮೂರ್ತಿ ತಯಾರಿಕೆಗೆ, ಜೇಡಿಮಣ್ಣು, ಬಣ್ಣಗಳ ಬೆಲೆ, ಕೂಲಿ, ಸಾಗಾಣಿಕೆ ಸೇರಿ ಬೆಲೆ ಏರಿಕೆಗಳಿಂದಾಗಿ ಮೂರ್ತಿಗಳ ಬೆಲೆ ಅನಿವಾರ್ಯ ಹೆಚ್ಚಳ ಮಾಡಬೇಕಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿಡಲು ಸಾಂಪ್ರದಾಯಿಕ ಗಣಪತಿ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ. ಹೀಗಾಗಿ ಸಣ್ಣಮೂರ್ತಿಗಳ ಮಾರಾಟ ಹೆಚ್ಚಾಗಲಿದೆ.
ಈ ಬಾರಿ ಗಣೇಶೋತ್ಸವದ ಸಂಭ್ರಮ ಕಾಣಬರುತ್ತಿದ್ದು, ಇನ್ನೆರಡು ದಿನಗಳು ವ್ಯಾಪಾರ ಬಿರುಸುಗೊಳ್ಳಲಿದೆ ಎನ್ನುತ್ತಾರೆ ಗಣೇಶ ಮೂರ್ತಿಗಳ ಮಾರಾಟಗಾರರು.
ಗಣೇಶನ ಉತ್ಸವ ಮೂರ್ತಿ, ಮಾವಿನಸೊಪ್ಪು ಬಾಳೆಕಂದು ಮೊದಲಾದ ಸಾಮಗ್ರಿಗಳ ಬೆಲೆಗಳು ಸಹ ಏರಿಕೆಯಾಗಿವೆ. ಬೆಲೆ ಏರಿಕೆಗಳು ಗಣೇಶ ಹಬ್ಬದ ಉತ್ಸಾಹಕ್ಕೆ ತಣ್ಣೀರೆರಚಿದ್ದರೂ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಆಚರಿಸಲು ತಾಲೂಕಿನಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….