ದೊಡ್ಡಬಳ್ಳಾಪುರ, (ಸೆ.17): ಕೋಳಿಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ಶನಿವಾರ ರಾತ್ರಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹೊಲೆಯರಹಳ್ಳಿ ಬಳಿ ಸಂಭವಿಸದೆ.
ಮೃತರನ್ನು ಪಶ್ಚಿಮಬಂಗಾಳದ ಅಲ್ಲಿಪುರ ಮೂಲದವರಾದ ಕಾಲೇ ಸರೇರಾ (60 ವರ್ಷ), ಲಕ್ಷ್ಮಿ ಸರೇರಾ (50 ವರ್ಷ), ಉಷಾ ಸರೇರಾ(40 ವರ್ಷ) ಹಾಗೂ ಪೂಲ್ ಸರೇರಾ (16 ವರ್ಷ) ಎಂದು ಗುರುತಿಸಲಾಗಿದೆ.
ಸೊಳ್ಳೆ ಕಾಟದ ಕಾರಣ ಕಲ್ಲಿದ್ದಿಲು ಮೂಲಕ ಹೊಗೆ ಹಾಕಿದ್ದ ಕುಟುಂಬಸ್ಥರು. ಶೆಡ್ ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನಲೆ, ಕೋಣೆ ತುಂಬಾ ಹೊಗೆ ತುಂಬಿಕೊಂಡು ಆಮ್ಲಜನಕದ ಕೊರತೆಯಿಂದ ಸಾವಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ..
ಹೊಲೆಯರಹಳ್ಳಿ ಗ್ರಾಮದ ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂ ನಲ್ಲಿ ಹತ್ತು ದಿನದ ಹಿಂದಷ್ಟೇ ನಾಲ್ವರು ಕೆಲಸಕ್ಕೆ ಬಂದಿದ್ದರು. ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದವರು ಬೆಳಗ್ಗೆ ಎದ್ದೇಳಲಿಲ್ಲ.
ಇಂದು ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿದೆ ಇದ್ದು, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃತ ಸಂಬಂಧಿಕರಿಗೆ ಕರೆ ಮಾಡಿದ್ದಾರೆ.
ಅವರು ಶೆಡ್ ಕಿಟಕಿ ಬಳಿ ನೋಡಿದಾಗ, ಮಲಗಿದ್ದವರು, ಮಲಗಿದ್ದಂತೆಯೇ ಸಾವನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….