ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೀ ಗಣೇಶ ಜಯಂತಿ

ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಆ ಸಮಯದಿಂದ ಶ್ರೀ ಗಣೇಶ ಮತ್ತು ಚತುರ್ಥಿಯು ಅವಿಭಾಜ್ಯವಾಗಿವೆ. 

‘ಮಾಘ ಶುಕ್ಲ ಚತುರ್ಥಿಯನ್ನು’ ಶ್ರೀ ಗಣೇಶ ಜಯಂತಿ’ ಎಂದು ಆಚರಿಸಲಾಗುತ್ತದೆ. ಇತರ ದಿನಗಳ ತುಲನೆಯಲ್ಲಿ ಈ ದಿನದಂದು ಶ್ರೀ ಗಣೇಶ ತತ್ತ್ವವು 1000 ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಅನೇಶ್ ಮಹಾನ್ ಗಣೇಶ ಭಕ್ತರು ಕೂಡ ಇದೆ ದಿನದಂದು ಪೃಥ್ವಿಯ ಮೇಲೆ ಜನಿಸಿದ ದಿನವೂ ಹೌದು.

ಗಣೇಶ ಜಯಂತಿಯಂದು ಮಾಡಬೇಕಾದ ಉಪಾಸನೆ: ಈ ದಿನದಂದು 3 ರಿಂದ 9 ಮಾಲೆ ಶ್ರೀ ಗಣಪತಿಯ ನಾಮವನ್ನು ಭಾವಪೂರ್ಣವಾಗಿ ಜಪಿಸಲು ಪ್ರಯತ್ನಿಸಬೇಕು. ಅದೇ ರೀತಿ ಗಣಪತಿಯ ಪ್ರತಿಮೆ ಅಥವಾ ಮೂರ್ತಿಯ ಪೂಜೆ ಮಾಡಿದಲ್ಲಿ, ಗಣಪತಿಯ ಶಕ್ತಿ ಮತ್ತು ಚೈತನ್ಯದ ಅಧಿಕ ಪಡೆಯಬಹುದು. ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿದರೆ ಕೂಡ ಈ ಲಾಭವನ್ನು ಪಡೆಯಬಹುದು.

ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ?: ಗಣಪತಿಯು ದಿಕ್ಕುಗಳ ಅಧಿಪತಿ. ಗಣೇಶ ಪೂಜೆಯಿಂದ, ನಾವು ಆಹ್ವಾನಿಸುವ ದೇವತೆಯು ಪೂಜೆಯ ಸ್ಥಳಕ್ಕೆ ಆಗಮಿಸಲು ಆಯಾ ದಿಕ್ಕು ಮುಕ್ತವಾಗುತ್ತದೆ. ಅಲ್ಲದೆ, ಮನುಷ್ಯರು ಮಾತನಾಡುವ (ನಾದ) ಭಾಷೆಯನ್ನು ದೇವತೆಗಳ (ಪ್ರಕಾಶ) ಭಾಷೆಗೆ ರೂಪಾಂತರಿಸಿ, ಗಣಪತಿಯು ನಮ್ಮ ಪ್ರಾರ್ಥನೆಯನ್ನು ಅವರಿಗೆ ತಲುಪಿಸುತ್ತಾನೆ. ಗಣಪತಿಯನ್ನು ವಿಘ್ನಹರ್ತಾ ಎಂದು ಕೂಡ ಕರೆಯುತ್ತಾರೆ.

ಗಣಪತಿಯ ವಾಹನ: ವೃ – ವಹ ಈ ಶಬ್ದದಿಂದ ವಾಹನ ಎಂಬ ಶದದ ಉತ್ಪತ್ತಿ ಆಯಿತು. ದೇವತೆಗಳ ವಾಹನಗಳು ಸಮಯ ಮತ್ತು ಕಾರ್ಯಕ್ಕನುಸಾರ ಬದಲಾಗುತ್ತವೆ. ‘ಮೂಷಿಕ’ ಗಣಪತಿಯ ನಿತ್ಯ ವಾಹನ. ಆದರೆ ಗಣಪತಿಗೆ ಇತರ ವಾಹನಗಳು ಕೂಡ ಇವೆ. ಉದಾಹರಣೆಗೆ, ಹೇರಂಬ ಗಣಪತಿಯ ವಾಹನ ಸಿಂಹವಾದರೆ (ಯುದ್ಧಕಾಲದಲ್ಲಿ ಕೂಡ ಇದೇ ವಾಹನವಾಗಿದೆ), ಮಯೂರೇಶ್ವರ ಗಣಪತಿಯ ವಾಹನ ಒಂದು ನವಿಲು.

ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!