ದೊಡ್ಡಬಳ್ಳಾಪುರ, (ಸೆ.20): ಸಂಬಂಧಿಕರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಲೀಕರು ಊರಿಗೆ ತೆರಳಿದ್ದನ್ನು ಗಮನಿಸಿ ಹೊಂಚುಹಾಕಿರುವ ಕಳ್ಳರು, ಮನೆಯ ಲಾಕ್ ಮುರಿದು ಬೀರುವಿನಲ್ಲಿ ಇಟ್ಟಿದ್ದ ನಗದನ್ನು ಕದ್ದು ಪರಾರಿಯಾಗಿರುವ ಘಟನೆ ಮುತ್ಸಂದ್ರದಲ್ಲಿ ನಡೆದಿದೆ.
ಪುಷ್ಪ ಎನ್ನುವವರು ವಾಸವಿದ್ದ ಮನೆ ಇದಾಗಿದ್ದು, ಸೆ.13 ರಂದು ಸಂಬಂಧಿಕರ ಅನಾರೋಗ್ಯದ ಕಾರಣ ದಾವಣಗೆರೆಗೆ ತೆರಳಿದ್ದು, ಅನಾರೋಗ್ಯಕ್ಕೆ ತುತ್ತಾದವರು ಮೃತಪಟ್ಟ ಕಾರಣ ಹಿಂತಿರುಗಿ ಬರುವುದು ವಿಳಂಬವಾಗಿದೆ. ನಂತರ ಸೆ.19 ರಂದು ಮರಳಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಬಾಗಿಲಿಗೆ ಅಳವಡಿಸಿದ್ದ ಲಾಕ್ ಮುರಿದು ಮನೆಗೆ ಪ್ರವೇಶಿಸಿರುವ ಕಳ್ಳರು, ಬೀರುವಿನಲ್ಲಿಟ್ಟಿದ್ದ ಒಂದು ಲಕ್ಷ ರೂ ನಗದನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಲಾಗಿದ್ದು, ಇನ್ಸ್‌ಪೆಕ್ಟರ್ ಪ್ರೀತಂ ಶ್ರೇಯಕರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….