ಹರಿತಲೇಖನಿ ದಿನಕ್ಕೊಂದು ಕಥೆ: ಗೋಪಾಲಕೃಷ್ಣ ಗೋಖಲೆಯವರ ಸತ್ಯವಂತಿಕೆ

ಗೋಪಾಲಕೃಷ್ಣ ಗೋಖಲೆಯವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ತಂದೆ ಕೃಷ್ಣರಾವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತುಬದ್ಧ ವ್ಯಕ್ತಿ ಎಂದು ಪ್ರಸಿದ್ದರಾಗಿದ್ದರು. ಮನೆಯ ಪರಿಸ್ಥಿತಿಯಿಂದಾಗಿ ತಮಗೆ ಒಳ್ಳೆಯ ಶಿಕ್ಷಣವನ್ನು ಪಡೆಯಲಾಗಲಿಲ್ಲ ಎಂಬ ದುಃಖವು ಸದಾಕಾಲ ಅವರನ್ನು ಕಾಡುತ್ತಿತು. ಆದುದರಿಂದ ತಮ್ಮ ಇಬ್ಬರೂ ಮಕ್ಕಳು (ಗೋವಿಂದ ಮತ್ತು ಗೋಪಾಲಕೃಷ್ಣ) ಬಹಳ ಓದಬೇಕು ಎಂದು ಬಯಸುತ್ತಿದ್ದರು. ಅವರ ಈ ಇಚ್ಛೆಗನುಸಾರ ಗೋವಿಂದ ಮತ್ತು ಗೋಪಾಲರ ಶಿಕ್ಷಣವು ಪ್ರಾರಂಭವಾಯಿತು.

ಕರವೀರ ಸಂಸ್ಥಾನದಲ್ಲಿ (ಇಂದಿನ ಕೊಲ್ಹಾಪುರ ಜಿಲ್ಲೆ) ಇರುವ ಕಾಗಲ್‌ನಲ್ಲಿ ಕಲಿಯುತ್ತಿರುವಾಗ ಗೋಪಾಲನ ಸತ್ಯ ಪ್ರಿಯತೆಯನ್ನು ತೋರಿಸುವಂತಹ ಒಂದು ಮಹತ್ವಪೂರ್ಣ ಘಟನೆಯು ನಡೆಯಿತು. ಒಮ್ಮೆ ಶಾಲೆಯಲ್ಲಿ ಗಣಿತದ ತರಗತಿಯು ನಡೆಯುತ್ತಿತ್ತು. ಹಿಂದಿನ ದಿನ ಶಿಕ್ಷಕರು ಮಕ್ಕಳಿಗೆ ಮನೆಪಾಠಕ್ಕೆಂದು ಕೆಲವು ಗಣಿತದ ಸಮಸ್ಯೆಗಳನ್ನು ನೀಡಿದ್ದರು. ಗುರುಗಳು ಎಲ್ಲರ ಪುಸ್ತಕಗಳನ್ನ್ನುಪರೀಕ್ಷಿಸಲು ಪ್ರಾರಂಭಿಸಿದರು.

ಯಾರೂ ಸರಿಯಾಗಿ ಉತ್ತರವನ್ನು ಬರೆದಿರಲಿಲ್ಲ. ಅವರು ಗೋಪಾಲನ ಬಳಿ ಬಂದರು. ಗೋಪಾಲನು ಗಣಿತದ ಎಲ್ಲ ಸಮಸ್ಯೆಗಳನ್ನು ಸರಿಯಾಗಿ ಬಿಡಿಸಿದ್ದನು. ಅದನ್ನು ನೋಡಿ ಶಿಕ್ಷಕರಿಗೆ ಬಹಳ ಸಂತೋಷ ವಾಯಿತು. ಅವರು ಗೋಪಾಲನಿಗೆ ಶಹಬಾಷ್‌ಗಿರಿಯನ್ನು ನೀಡಿದರು. ಅವನನ್ನು ಮುಂದಿನ ಸಾಲಿನಲ್ಲಿ ಬಂದು ಕುಳಿತುಕೊಳ್ಳುವಂತೆ ಹೇಳಿದರು. ಗುರುಗಳು ತನಗೆ ನೀಡುತ್ತಿರುವ ಸನ್ಮಾನವನ್ನು ನೋಡಿ ಗೋಪಾಲನು ಅಳಲು ಪ್ರಾರಂಭಿಸಿದನು.

ಶಿಕ್ಷಕರು ಗೋಪಾಲನ ಬಳಿ ಬಂದು ಏಕೆ ಅಳುತ್ತಿರುವೆ ಎಂದು ಪ್ರಶ್ನಿಸಿದಾಗ ಅವನು, “ಗುರುಗಳೇ ನನ್ನನ್ನು ಕ್ಷಮಿಸಿ, ನಾನು ನಿಮ್ಮ ಬಳಿ ಸುಳ್ಳನ್ನು ಹೇಳಿದ್ದೇನೆ. ಈ ಗಣಿತದ ಸಮಸ್ಯೆಗಳನ್ನು ನಾನು ಬಿಡಿಸಿದ್ದಲ್ಲ. ಆದುದರಿಂದ ನೀವು ನೀಡುತ್ತಿರುವ ಸನ್ಮಾನವು ನನಗೆ ಬೇಡ” ಎಂದು ತಪ್ಪೊಪ್ಪಿಕೊಂಡನು. ಶಿಕ್ಷಕರು ಗೋಪಾಲನ ಸತ್ಯಸಂಧತೆಯನ್ನು ಬಹಳ ಮೆಚ್ಚಿದರು. ಅವರು ಗೋಪಾಲನ ಬೆನ್ನನ್ನು ತಟ್ಟಿ ಸಮಾಧಾನಗೊಳಿಸಿದರು.

ತಂದೆಯ ಮರಣದ ನಂತರ ಗೋಪಾಲನ ಮನೆಯ ಆರ್ಥಿಕ ಪರಿಸ್ಥಿತಿಯು ತೀರಾ ಕೆಟ್ಟು ಹೋಯಿತು. ಆಗ ಗೋವಿಂದನು ತನ್ನ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಕೆಲಸ ಮಾಡಲಾರಂಭಿಸಿದನು ಮತ್ತು ತನ್ನ ಇಷ್ಟಾನಿಷ್ಟಗಳನ್ನೆಲ್ಲ ಬದಿಗಿರಿಸಿ ಕಷ್ಟಪಟ್ಟಾದರೂ ಗೋಪಾಲನಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದನು. ಗೋಪಾಲನಿಗೆ ಮನೆಯ ಪರಿಸ್ಥಿತಿಯ ಅರಿವಿತ್ತು. ಆದುದರಿಂದ ಅವನು ಅತ್ಯಂತ ಮಿತವ್ಯಯದಿಂದ ಕೊಲ್ಹಾಪುರದಲ್ಲಿ ಒಂದು ಹೊಟೇಲಿನಲ್ಲಿ ಊಟವನ್ನು ಮಾಡುತ್ತಾ ಓದನ್ನು ಮುಂದುವರಿಸುತ್ತಿದ್ದನು.

ಅಲ್ಲಿ ಮೊಸರು ಬೇಕಾದರೆ ಒಂದು ಬಟ್ಟಲಿಗೆ ಎಂಟಾಣೆಯನ್ನು ಹೆಚ್ಚು ನೀಡಬೇಕಾಗುತ್ತಿತ್ತು. ಅದಕ್ಕಾಗಿ ಗೋಪಾಲನು ಯಾವತ್ತೂ ಮೊಸರನ್ನು ತೆಗೆದುಕೊಳ್ಳುತ್ತಿರಲಿಲ್ಲ. ಒಂದು ಬಾರಿ ಗೋಪಾಲನಿಗೆ ಮೊಸರು ತಿನ್ನಬೇಕೆಂದು ಬಹಳ ಆಸೆಯಾಯಿತು. ಮೊಸರನ್ನು ತಿಂದನು. ಆದರೆ ಅದಕ್ಕಾಗಿ ಪ್ರತಿ ಶನಿವಾರ ಉಪವಾಸ ಮಾಡಿ ಉಳಿಸಿದ ಹಣದಿಂದ ಆತನು ಮೊಸರನ್ನು ಖರೀದಿಸಿದ್ದನು. ಚಿಮಿಣಿಗಾಗಿ ತಗಲುವ ಎಣ್ಣೆಯನ್ನು ಉಳಿತಾಯ ಮಾಡಬೇಕೆಂದು ಅವನು ನಗರಪಾಲಿಕೆಯ ದೀಪದ ಬೆಳಕಿನಲ್ಲಿ ಅಧ್ಯಯನ ಮಾಡುತ್ತಿದ್ದನು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಆತನು ತನ್ನ ಶಿಕ್ಷಣವನ್ನು ಮುಂದುವರಿಸಿದನು.

ಸ್ವಾಭಿಮಾನ, ಸತ್ಯಪ್ರಿಯತೆ, ಕಷ್ಟವನ್ನು ಸಹಿಸುವ ಸ್ವಭಾವ ಇತ್ಯಾದಿ ಗುಣಗಳು ಆತನಲ್ಲಿ ಬಾಲ್ಯದಿಂದಲೇ ಮೈಗೂಡಿದ್ದವು. ಈ ಗುಣದಿಂದಲೇ ಮಹಾತ್ಮಾ ಗಾಂಧಿಯವರು ಗೋಖಲೆಯವರನ್ನು ತಮ್ಮ ಗುರುಗಳೆಂದು ಗೌರವಿಸುತ್ತಿದ್ದರು. ಸತ್ಯಕ್ಕಾಗಿ ಸ್ವತಃ ಹೋರಾಡುವುದು, ಸತ್ಯವಂತನಾಗಿರುವುದು ಮತ್ತು ಸತ್ಯವನ್ನೇ ನುಡಿಯಬೇಕೆಂದು ಆಗ್ರಹಿಸುವುದು ಮುಂತಾದ ತತ್ತ್ವಗಳನ್ನು ಗೋಪಾಲಕೃಷ್ಣ ಗೋಖಲೆಯವರು ತಮ್ಮ ನಡೆ ನುಡಿಯಿಂದ ಜಗತ್ತಿಗೆ ಸಾರಿದರು.
ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!