ನಮ್ಮ ವಿರುದ್ಧ ಬರೆಯದಂತೆ ಪತ್ರಕರ್ತರಿಗೆ ಆಮಿಷ ನೀಡಲು ಸೂಚನೆ: ಬಿಜೆಪಿ ಮುಖ್ಯಸ್ಥರ ಆಡಿಯೋ ವೈರಲ್..!!

ಮುಂಬೈ, (ಸೆ.26): ಪತ್ರಕರ್ತರನ್ನು ಚಹಾಗೆ ಆಹ್ವಾನಿಸಿ, ಅವರು ನಮ್ಮವಿರುದ್ಧ ಬರೆಯದಂತೆ ಆಮಿಷ ನೀಡಿ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ವೈರಲ್ ಆಗಿದ್ದು ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎದ್ದಿದೆ.

ಪತ್ರಕರ್ತರನ್ನು ಕೊಂಡುಕೊಳ್ಳುವ ಮೂಲಕ ಭಿನ್ನಮತವನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬವಾನ್‌ಕುಲೆ ಅವರು ಈ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

“ಸುದ್ದಿ ಪೋರ್ಟಲ್‌ಗಳನ್ನು ನಡೆಸುತ್ತಿರುವ ಮತ್ತು ನಿಮ್ಮ ಬೂತ್ ಪ್ರದೇಶಗಳಲ್ಲಿ ವಾಸಿಸುವ ಅರೆ ಕಾಲಿಕ ಪತ್ರಕರ್ತರು ಕೆಲವೊಮ್ಮೆ ಸ್ಫೋಟಕ ಸುದ್ದಿಯನ್ನು ವರದಿ ಮಾಡುತ್ತಾರೆ. ಇಂತಹ ಪತ್ರಕರ್ತರ ಪಟ್ಟಿಯನ್ನು ತಯಾರಿಸಿ ಅವರು ನಮ್ಮ ವಿರುದ್ಧ ಏನನ್ನೂ ಬರೆಯದಂತೆ ಚಹಾ ಕುಡಿಯಲು ಅವರನ್ನು ಆಹ್ವಾನಿಸಿ ಎಂದು ನಾನು ಏಕೆ ಹೇಳುತ್ತಿದ್ದೇನೆ ಅನ್ನುವುದು ನಿಮಗೆ ಗೊತ್ತಿರಬಹುದು ಎಂದುಕೊಳ್ಳುತ್ತೇನೆ” ಎಂದು ಅವರು ಹೇಳುತ್ತಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ.

“ಅವರನ್ನು ಚೆನ್ನಾಗಿ ನೋಡಿಕೊಳ್ಳಿ ನಮ್ಮ ವಿರುದ್ಧ ಯಾವುದೇ ನಕಾರಾತ್ಮಕ ಸುದ್ದಿ ಬರದಂತೆ ನೋಡಿಕೊಳ್ಳಿ ನಮ್ಮ ಬಗ್ಗೆ ಸಕಾರಾತ್ಮಕ ಸುದ್ದಿ ಬರಬೇಕು. ಮೊದಲು ನಿಮ್ಮ ಸ್ವಂತ ಬೂತ್‌ಗಳನ್ನು ರಕ್ಷಿಸಿಕೊಳ್ಳಿ’ ಎಂದು ಅವರು ವೈರಲ್ ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದ್ದು, ತೀವ್ರ ಚರ್ಚಗೆ ಕಾರಣವಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!