ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಾಂಪಿಯನ್..!: ಕರವೇ ಸನ್ಮಾನ

ದೊಡ್ಡಬಳ್ಳಾಪುರ, (ಸೆ.26): ತಮಿಳುನಾಡಿನ ಚೆನ್ನೈ ನಗರದ ಟ್ರೇಡ್ ಸೆಂಟರ್ ನಲ್ಲಿ ನಡೆದ 42ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ವಸಂತ್ ಚಾಂಪಿಯನ್ ಆಗಿದ್ದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಸೆಪ್ಟೆಂಬರ್‌ 10 ಆಯೋಜಿಸಲಾಗಿದ್ದ 42ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಸಂತ್ ಚಾಂಪಿಯನ್ ಆಗುವ ಮೂಲಕ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಡ್ಡಿದ್ದಾನೆ.

ಈ ಕುರಿತಂತೆ ವಿಷಯ ತಿಳಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ತಾಲೂಕು ಅಧ್ಯಕ್ಷ ಅಮಾಮ್ ವೆಂಕಟೇಶ್ ನೇತೃತ್ವದಲ್ಲಿ ಇಂದು ಶಾಲೆಗೆ ಭೇಟಿ ನೀಡಿದ ಕರವೇ ಮುಖಂಡರು ವಿಧ್ಯಾರ್ಥಿಗೆ ಶುಭಕೋರಿ, ಅಭಿನಂದನೆ ಸಲ್ಲಿಸಿದರು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ನರಸೇಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಪಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಖಜಾಂಚಿ ಆನಂದ್, ಕಾರ್ಯದರ್ಶಿ ಕೆಆರ್ ಮಂಜು, ರವಿ ರಘುನಂದನ್, ಶ್ರೀನಿವಾಸ್ ಕೋಡಿಹಳ್ಳಿ, ಬಾಬು, ಅನುಗೌಡ ಮತ್ತಿತರರಿದ್ದರು.

ಚೆನ್ನ ನಲ್ಲಿ ನಡೆದ ರಾಷ್ಟ್ರೀಯ ಅಬಕಾಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ನಾಗಿ ಹೊರಹೊಮ್ಮಿದ ಪೌರಕಾರ್ಮಿಕರಾದ ಸುಬ್ಬು ಮತ್ತು ಮಂಜುಳಮ್ಮನವರ ಮಗ ವಸಂತ್ ಎಲೆಪೇಟೆಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾ‌ನೆ.

ಮನೋಗಣಿತ: ಸೆ.10 ರಂದು ಇಲ್ಲಿನ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಿದ್ದ 42ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ, ದೊಡ್ಡಬಳ್ಳಾಪುರದ ಬ್ರೈನೋಬ್ರೈನ್ ತರಬೇತಿ ಕೇಂದ್ರದ 54 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ 40 ಚಾಂಪಿಯನ್ ಮಂದಿ ಆಗಿ ಹೊರಹೊಮ್ಮಿದ್ದರೆ, 10 ಸ್ಪರ್ಧಿಗಳು ಚಿನ್ನ, ನಾಲ್ಕು ಸ್ಪರ್ಧಿಗಳು ಬೆಳ್ಳಿ ಪದಕದವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ, ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದೇ ವೇಳೆ ದೊಡ್ಡಬಳ್ಳಾಪುರದ ಅಬಾಕಸ್ ತರಬೇತಿ ಕೇಂದ್ರಕ್ಕೆ ಸತತ ಎರಡನೇ ವರ್ಷವೂ ಕೂಡ ಬೆಸ್ಟ್ ಫ್ಯಾಕಲ್ಟಿ ಅವಾರ್ಡ್, ಬೆಸ್ಟ್ ಫ್ರಾಂಚೈಸಿ ಅವಾರ್ಡ್  ಅನ್ನು ನೀಡಲಾಗಿದ್ದು, ಮುಖ್ಯಸ್ಥರು ಸ್ವೀಕರಿಸಿದ್ದಾರೆ.

ವಿಜೇತರಿಗೆ ಬ್ರೈನೋ ಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಳ್ ಸುಬ್ರಹ್ಮಣ್ಯಂ ಟ್ರೋಫಿ, ಪದಕಗಳನ್ನು ವಿತರಿಸಿದ್ದರು‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!