ಇಂದು ವಿಶ್ವ ಪ್ರವಾಸೋದ್ಯಮ ದಿನ (World Tourism Day 2023). 1980ರಲ್ಲಿ ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆ (ಯುಎನ್‌ಡಬ್ಲ್ಯುಟಿಒ) ಸೆ.27ನ್ನು ವಿಶ್ವ ಪ್ರವಾಸೋದ್ಯಮ ದಿನವಾಗಿ ಘೋಷಣೆ ಮಾಡಿತು.
ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯದ ಮೇಲೆ ಪ್ರವಾಸೋದ್ಯಮ ಹೇಗೆ ಪ್ರಭಾವಿತವಾಗಿದೆ ಎಂಬುದನ್ನು ತಿಳಿಸುವ ಉದ್ದೇಶವನ್ನೂ ಇದು ಹೊಂದಿದೆ. ಪ್ರವಾಸೋದ್ಯಮ ಕ್ಷೇತ್ರ ಹೆಚ್ಚು ಜನರಿಗೆ ಉದ್ಯೋಗ ನೀಡುವ ವಲಯವೂ ಆಗಿದೆ.
ಮಹಾಮಾರಿ ಕೊರೊನಾ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲವಾದ ಪೆಟ್ಟು ನೀಡಿತ್ತು. ಕಳೆದ ಎರಡು ವರ್ಷ ಪ್ರವಾಸೋದ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಬಹುತೇಕ ಎಲ್ಲ ವಲಯಗಳು ಸಾಕಷ್ಟು ಸೊರಗಿದ್ದವು. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯ ಜತೆಗೆ ಮೊದಲಿನ ಲಯಕ್ಕೆ ಬರುತ್ತಿವೆ. ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ, ಹೂಡಿಕೆ, ಉದ್ಯೋಗಾವಕಾಶ ಹೀಗೆ ಎಲ್ಲವೂ ಚೇತರಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಹೆಚ್ಚಿನ ಉತ್ತೇಜವನನ್ನು ನೀಡುತ್ತಿವೆ.
ಸುಸ್ಥಿರ ಪ್ರವಾಸೋದ್ಯಮವು ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತದೆ. ಪರಿಸರ ಸ್ನೇಹಿ ಬೆಳವಣಿಗೆಯೂ ದೀರ್ಘಕಾಲದ ಆರ್ಥಿಕ ಬೆಳವಣಿಯ ಅಡಿಪಾಯವಾಗಿರಲಿದೆ. ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೂ ಅಲ್ಲಿ ಇನ್ನಷ್ಟು ಹೊತ್ತು ಕಾಲಕಳೆಯಬೇಕು ಮತ್ತು ಅಲ್ಲಿನ ವಾತಾವರಣ ಹಿತಕರವಾಗಿದೆ ಎಂದೆನಿಸಬೇಕು. ಈ ನಿಟ್ಟಿನಲ್ಲಿ ಇಡೀ ಪರಿಸರವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಸ್ಥಳೀಯರಿಗೆ ಇನ್ನಷ್ಟು ಆರ್ಥಿಕ ಬಲ ನೀಡುವ ಕೇಂದ್ರವಾಗಿಯೂ ಪ್ರವಾಸಿ ಸ್ಥಳ ಪರಿವರ್ತನೆಗೊಳ್ಳಬೇಕು.
ಬಹುಮುಖ್ಯವಾಗಿ ಪ್ರತೀ ಪ್ರವಾಸಿಗನೂ ಕನೆಕ್ಟಿವಿಟಿಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾನೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಇರುವ ಸಂಪರ್ಕ ವ್ಯವಸ್ಥೆ, ಮಾರ್ಗಸೂಚಿ ಫಲಕಗಳು ಹೀಗೆ ಸಣ್ಣಸಣ್ಣ ಅಂಶವೂ ಪ್ರವಾಸೋದ್ಯಮದಲ್ಲಿ ಅತೀಮುಖ್ಯವಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಮುದಾಯ ಆಧಾರಿತ ಪ್ರವಾಸೋದ್ಯಮ ಹೆಚ್ಚು ಪ್ರಾಮುಖ್ಯ ಪಡೆಯುತ್ತಿದೆ. ಸ್ಥಳೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಒಂದೆಡೆಯಾದರೆ ಪ್ರವಾಸೋದ್ಯಮವನ್ನು ಸ್ಥಳೀಯ ಪರಿಸರ, ಜಾನಪದ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿಕೊಂಡು ಅಭಿವೃದ್ಧಿಪಡಿಸುವ ಅಂಶವೂ ಇದರಲ್ಲಿ ಸೇರಿದೆ.
ಸ್ಥಳೀಯರ ಜೀವನಶೈಲಿ ಮತ್ತು ಆರ್ಥಿಕ ಪ್ರಗತಿಗೂ ಇದು ಸಹಕಾರಿಯಾಗಲಿದೆ. ಸ್ಥಳೀಯರ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಜತೆ ಜತೆಗೆ ಸ್ವಾಲಂಬನೆಗೆ ದಾರಿ ಸೃಷ್ಟಿಸಿಕೊಡಬೇಕು. ಕೌಶಲಾಧಾರಿತ ಉದ್ಯೋಗ ಸೃಷ್ಟಿ ಮಾಡಿ ಸ್ಥಳೀಯವಾಗಿ ಜನರಿಗೆ ಉದ್ಯೋಗ ಒದಗಿಸುವುದು ಮುಖ್ಯವಾಗುತ್ತದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….