ವಾಟ್ಸಪ್ ಚಾನೆಲ್‌ಗೆ ಹರಿತಲೇಖನಿ ಲಗ್ಗೆ..!!: ಕ್ಷಣ ಕ್ಷಣದ ಮಾಹಿತಿ ಇಂದಿನಿಂದ WhatsApp Channelನಲ್ಲಿ ಲಭ್ಯ

ಬೆಂಗಳೂರು, (ಸೆ.27): ಕ್ಷಣ ಕ್ಷಣದ ವರದಿಗಳ ಮೂಲಕ ರಾಜ್ಯಮಟ್ಟದಲ್ಲಿ ಸುದ್ದಿ ಮತ್ತು ಸದ್ದು ಮಾಡುತ್ತಿರುವ ದೊಡ್ಡಬಳ್ಳಾಪುರ ಮೂಲದ ಹರಿತಲೇಖನಿ ನ್ಯೂಸ್ ಪೋರ್ಟಲ್ ಇಂದಿನಿಂದ ವಾಟ್ಸಪ್ ಚಾನೆಲ್‌ಗೆ ಲಗ್ಗೆಯಿಟ್ಟಿದೆ.

Facebook, Twitter, Koo, Telegram, Sharechat, Dailyhunt ಹಾಗೂ ವಾಟ್ಸಪ್ ಗ್ರೂಪ್‌ಗಳ ಮೂಲಕ ಸಾವಿರಾರು ಮಂದಿ ಓದುಗರ ವಿಶ್ವಾಸ ಪಾತ್ರವಾದ ಹರಿತಲೇಖನಿ ನ್ಯೂಸ್ ಪೋರ್ಟಲ್ ಇಂದಿನಿಂದ ಜನಪ್ರಿಯ ಮೆಸೇಜಿಂಗ್ ಪ್ಲಾಟ್​​ಫಾರ್ಮ್ ಆಗಿರುವ ವಾಟ್ಸಾಪ್​ ಚಾನಲ್‌ಗೆ ಸೇರ್ಪಡೆಯಾಗಿದ್ದು, ಓದುಗರಿಗೆ ಈ ಮೂಲಕವೂ ಸುದ್ದಿಗಳು ತಲುಪಿಸಲು ಮುಂದಾಗಿದೆ.

ಗೌಪ್ಯತೆ ದೃಷ್ಟಿಯಿಂದ ವಾಟ್ಸಾಪ್ ಚಾನೆಲ್ ಈ ಹಿಂದಿನ ವಾಟ್ಸಾಪ್ ಗ್ರೂಪ್ ಗಳು ಹಾಗೂ ವಾಟ್ಸಾಪ್ ಕಮ್ಯುನಿಟಿಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಬಳಕೆದಾರರ ಮಾಹಿತಿ ಇಲ್ಲಿ ಅಡ್ಮಿನ್ ಸೇರಿದಂತೆ ಯಾರಿಗೂ ಲಭ್ಯವಿರುವುದಿಲ್ಲ.

ಜನಪ್ರಿಯ ಮೆಸೇಜಿಂಗ್ ಪ್ಲಾಟ್​​ಫಾರ್ಮ್ ಆಗಿರುವ ವಾಟ್ಸಾಪ್​ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ನೀಡಿದ್ದು, ತನ್ನ ಬಳಕೆದಾರರಿಗಾಗಿ ಮೆಟಾ ಕಂಪನಿ ಮತ್ತೊಂದು ವಿಶೇಷ ಫೀಚರ್​ ಒಂದನ್ನು ಪರಿಚಯಿಸಿದೆ.

ಮೆಟಾದ ಜನಪ್ರಿಯ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಇದೀಗ ತನ್ನ ಇತ್ತೀಚಿನ ಚಾನೆಲ್‌ಗಳ ವೈಶಿಷ್ಟ್ಯವನ್ನು ಭಾರತ ಸೇರಿದಂತೆ ವಿಶ್ವಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಆರಂಭದಲ್ಲಿ ಈ ವೈಶಿಷ್ಟ್ಯವು 10 ದೇಶಗಳಲ್ಲಿ ಲಭ್ಯವಿತ್ತು. ಆದಾಗ್ಯೂ, ಈಗ ಇದನ್ನು 150 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರು ವಾಟ್ಸಪ್ ಚಾನೆಲ್ ಬಳಕೆ ಮಾಡಬಹುದು. 

Instagram ನಲ್ಲಿ ಬ್ರಾಡ್‌ಕಾಸ್ಟ್ ಚಾನೆಲ್ ವೈಶಿಷ್ಟ್ಯದಂತೆಯೇ, WhatsApp ಚಾನೆಲ್‌ಗಳು ಬಳಕೆದಾರರಿಗೆ ಏಕಮುಖ ಸಂವಹನದ ಮೂಲಕ ತಮ್ಮ ಸಂಪರ್ಕಗಳೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಚಾನೆಲ್‌ಗಳು ಏಕಮುಖ ಪ್ರಸಾರ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ, ನಿರ್ವಾಹಕರು ಮತ್ತು ಅನುಯಾಯಿಗಳ ಗೌಪ್ಯತೆಯೊಂದಿಗೇ ಪಠ್ಯ (text), ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ನಿರ್ವಾಹಕರಿಗೆ ಅವಕಾಶ ನೀಡುತ್ತದೆ. ಚಾನೆಲ್ ಫೀಚರ್ ಈ ಹಿಂದೆ ಟೆಲಿಗ್ರಾಮ್​ನಂತಹ ಅಪ್ಲಿಕೇಶನ್​ಗಳಲ್ಲಿ ಮಾತ್ರ ಲಭ್ಯವಿತ್ತು. ಮೆಟಾ ಪ್ರಕಾರ, ಪ್ರಮುಖ ಅಪ್ಡೇಟ್ ಗಳನ್ನು ಸ್ವೀಕರಿಸಲು ಇದು ನಿಮಗೆ ವೈಯಕ್ತಿಕವಾಗಿ ಸಹಾಯಕವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!