ಕುರುಡುತನ, ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 12 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
1998ರ ಅಕ್ಟೋಬರ್ 8ರಂದು ಮೊದಲ ವಿಶ್ವ ದೃಷ್ಟಿ ದಿನವನ್ನು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ (LCIF) ತನ್ನ ಸೈಟ್ ಫಸ್ಟ್ ಅಭಿಯಾನದ ಮೂಲಕ ಆರಂಭಿಸಿತು. ಈ ಸಂಸ್ಥೆಯು ಜಾಗತಿಕವಾಗಿ ದೃಷ್ಟಿ, ಕಣ್ಣಿನ ಆರೈಕೆ, ಕಣ್ಣಿನ ರೋಗಗಳಿಂದ ಬಳಲುವ ಅಪಾಯ ಮತ್ತು ದೃಷ್ಟಿ ಪುನಃಸ್ಥಾಪಿಸುವ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಂತಾರಾಷ್ಟ್ರೀಯ ಅಂಧತ್ವ ತಡೆಗಟ್ಟುವಿಕೆ ಸಂಸ್ಥೆ (IAPB) ಇದನ್ನು ಮುಂದುವರೆಸಿಕೊಂಡು ಬಂದಿದೆ.
1970ರ ದಶಕದ ಮಧ್ಯಭಾಗದಲ್ಲಿ ಸರ್ ಜಾನ್ ವಿಲ್ಸನ್ ಜಾಗತಿಕ ಕುರುಡುತನದ ಸಮಸ್ಯೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದರು. ಇದು ಜನವರಿ 1, 1975ರಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್‌ನೆಸ್ ರಚನೆಗೆ ಕಾರಣವಾಯಿತು. ಸರ್ ಜಾನ್ ವಿಲ್ಸನ್ ಸ್ಥಾಪಕ ಅಧ್ಯಕ್ಷರಾಗಿ. ವರ್ಲ್ಡ್ ಬ್ಲೈಂಡ್ ಯೂನಿಯನ್ (WBU) ಮತ್ತು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನೇತ್ರವಿಜ್ಞಾನ (ICO) ಇದರ ಸ್ಥಾಪಕ ಸದಸ್ಯರಾಗಿದ್ದರು. ವಿಶ್ವ ದೃಷ್ಟಿ ದಿನ (World Sight Day)ದಂದು ರೋಗಗಳು, ಮತ್ತು ದೃಷ್ಟಿ ಮರುಸ್ಥಾಪಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ವಿಶ್ವ ದೃಷ್ಟಿ ದಿನವನ್ನು ಜಾಗತಿಕವಾಗಿ ಸುಮಾರು 200 ಸದಸ್ಯ ಸಂಸ್ಥೆಗಳು ಬೆಂಬಲಿಸುತ್ತವೆ.
ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳು (Health facilities) ದೊರಕುತ್ತಿಲ್ಲ. ಹೀಗಾಗಿಯೇ ಹಲವು ಕಾಯಿಲೆಗಳಿಂದ ಕುರುಡುತನದ ಸಮಸ್ಯೆ ಹೆಚ್ಚಾಗ್ತಿದೆ. ಕುರುಡುತನದ ಹೆಚ್ಚಿನ ಕಾರಣಗಳು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ (Treatment)ಗಳಿಲ್ಲದ ಕಾರಣ ಇದು ದೃಷ್ಟಿಹೀನತೆಗೆ (Blindness) ಕಾರಣವಾಗುತ್ತದೆ. ನಿಮ್ಮ ಕಣ್ಣುಗಳನ್ನು ಕಾಳಜಿ ವಹಿಸುವ ಸಾಧನವಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಬಗ್ಗೆ ವಿಶ್ವ ದೃಷ್ಟಿ ದಿನದಂದು ಜಾಗೃತಿ (Awareness) ಮೂಡಿಸಬಹುದಾಗಿದೆ.
2023ರ ಥೀಮ್ ಕೆಲಸದ ಸ್ಥಳದಲ್ಲಿ ಕಣ್ಣಿನ ಆರೈಕೆ: ಈ ವರ್ಷ ಕೆಲಸದ ಸ್ಥಳದಲ್ಲಿ ಕಣ್ಣಿನ ಆರೈಕೆಯ ಪ್ರಾಮುಖ್ಯತೆಯ ಮೇಲೆ ವಿಶ್ವದ ಗಮನವನ್ನು ಕೇಂದ್ರೀಕರಿಸುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….