ಬೆಂಗಳೂರು, (ಅ.12): ರಾಜ್ಯ ಸರ್ಕಾರ ವಿರುದ್ಧ ಮುಗಿಬಿದ್ದಿರುವ ಬಿಜೆಪಿ, ಎಕ್ಸ್ (ಟ್ವಿಟ್) ಮೇಲೆ ಎಕ್ಸ್ ಮಾಡುವ ಮೂಲಕ ಪೋಸ್ಟರ್ ಸಮರ ಸಾರುತ್ತಿದೆ.
ಬುಧವಾರದಿಂದ ಅಘೋಷಿತ ಲೋಡ್ ಶೆಡ್ಡಿಂಗ್ ಕುರಿತಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಕಾಣೆಯಾಗಿದ್ದಾರೆಂದು ಪೋಸ್ಟರ್ ಮೂಲಕ ಸರಣಿ ಎಕ್ಸ್ (ಟ್ವಿಟ್) ಮಾಡಿದ್ದ ಬಿಜೆಪಿಯ ಕಣ್ಣು ಈಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೆ ಬಿದ್ದಿದೆ.
BJP ಮಾಡಿರುವ ಎಕ್ಸ್ (ಟ್ವಿಟ್) ನೋಡಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಮಾಡಿರುವ ಎಕ್ಸ್ ಸಂದೇಶದ ಅನ್ವಯ, “ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ’ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಾಪತ್ತೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ..” ಎಂದು ಡಿಕೆ ಶಿವಕುಮಾರ್ ಫೋಟೋ ಇರುವ ಪೋಸ್ಟರ್ನೊಂದಿಗೆ ಬಿಜೆಪಿ ವಾಗ್ದಾಳಿ ನಡೆಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….