ಬೆಂಗಳೂರು, (ಅ.12): ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕವನ್ನು ಕತ್ತಲೆ ದೂಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್ರನ್ನು ಹುಡುಕಿ ಕೊಡಿ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ವಾಗ್ದಾಳಿ ಮಾಡಿದೆ.
ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ ಅಂತಾ ಹೇಳಲಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರೈತರು ಲೋಡ್ ಶೆಡ್ಡಿಂಗ್ನಿಂದ ಕಂಗಲಾಗಿದ್ದಾರೆ. ಬೆಳೆಯನ್ನೇ ನಂಬಿಕೊಂಡಿದ್ದ ಬದುಕಿಗೆ ಕರೆಂಟ್ ಇಲ್ಲದೇ ಕತ್ತಲಾವರಿಸಿದಂತಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿವೆ.
ಈ ಕುರಿತಂತೆ BJP Karnataka ಎಕ್ಸ್ (ಟ್ವಿಟ್) ಮಾಡಿದ್ದು, ಡಿಯರ್ INC Karnataka ಕಾಣೆಯಾಗಿದ್ದ ಬಸ್ ಸ್ಟಾಂಡ್‌ನನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ. ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ..! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಮತ್ತೊಂದು ಎಕ್ಸ್‌ನಲ್ಲಿ ರಾಜ್ಯದಲ್ಲಿ @siddaramaiah ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್..ನ್ಯಾಯಾಲಯದಲ್ಲೂ ಪವರ್ ಕಟ್..!, ವಿಧಾನಸೌಧದಲ್ಲೂ ಪವರ್ ಕಟ್..!, ಶಾಸಕರ ಸಭೆಯಲ್ಲೂ ಪವರ್ ಕಟ್..!, ರೈತರ ಪಂಪ್‌ಸೆಟ್‌ಗಳಿಗೂ ಪವರ್ ಕಟ್..!, ಸ್ಕೂಲ್, ಕಾಲೇಜುಗಳಲ್ಲೂ ಪವರ್ ಕಟ್..!, ಕಂಪನಿ, ಕೈಗಾರಿಕೆಗಳಲ್ಲೂ ಪವರ್ ಕಟ್..!, ಗ್ರಾಮೀಣ ಪ್ರದೇಶದಲ್ಲೂ ಪವರ್ ಕಟ್..!
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ. ಜೆ. ಜಾರ್ಜ್ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ..? ಎಂದು ಕಿಚಾಯಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….