01. ಈ ಕೆಳಗಿನವುಗಳಲ್ಲಿ ಅತ್ತಿಮಬ್ಬೆ ಯವರ ಬಿರುದಾಂಕಿತ ಯಾವುದು.?
- ಎ. ದಾನ ಚಿಂತಾಮಣಿ
- ಬಿ. ಗಾನ ಕೋಗಿಲೆ
- ಸಿ. ಗಾನ ಗಂಧರ್ವ
- ಡಿ. ಕನ್ನಡ ವೀರಮಣಿ
ಉತ್ತರ: ಎ) ದಾನ ಚಿಂತಾಮಣಿ
02. ಇವರಲ್ಲಿ ಯಾರು ಪ್ರಖ್ಯಾತ ಗಣಿತ ಶಾಸ್ತ್ರಜ್ಞರು.?
- ಎ. ವಿಕ್ರಮ್ ಭಟ್
- ಬಿ. ಭಾಸ್ಕರ – 2
- ಸಿ. ಸುಶ್ರುತ
- ಡಿ. ಚರಕ
ಉತ್ತರ: ಬಿ) ಭಾಸ್ಕರ – 2
03. ಈ ಕೆಳಗಿನವುಗಳಲ್ಲಿ ಯಾವ ಭಾಷೆಯೂ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ನಮೂದಿಸಲ್ಪಟಿಲ್ಲ.?
- ಎ. ಉರ್ದು
- ಬಿ. ನೇಪಾಳಿ
- ಸಿ. ಕೊಂಕಣಿ
- ಡಿ. ಪರ್ಶಿಯನ್
ಉತ್ತರ: ಡಿ) ಪರ್ಶಿಯನ್
04. ಭಾರತದ ಮುಖ್ಯ ಚುನಾವಣಾ ಆಯುಕ್ತರು ಯಾವ ಈ ಕೆಳಕಂಡವರಿಂದ ನೇಮಿಸಲ್ಪಟ್ಟಡುತ್ತಾರೆ.?
- ಎ. ಸಂಸದರಿಂದ
- ಬಿ. ಪ್ರಧಾನ ಮಂತ್ರಿಯ ಸಲಹೆ ಮೇಲೆ ರಾಷ್ಟ್ರಾಧ್ಯಕ್ಷರಿಂದ
- ಸಿ. ಸಚಿವ ಸಂಪುಟದಿಂದ
- ಡಿ. ಪಾರ್ಲಿಮೆಂಟ್ ಸದಸ್ಯರಿಂದ
ಉತ್ತರ: ಬಿ) ಪ್ರಧಾನ ಮಂತ್ರಿ ಸಲಹೆ ಮೇರೆಗೆ ರಾಷ್ಟ್ರಾಧ್ಯಕ್ಷರಿಂದ
05. ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆ ಯಾವುದು.?
- ಎ. ಕ್ವಾಶಿಯೋರ್ಕರ್
- ಬಿ. ರಿಕೆಟ್ಸ್
- ಸಿ. ಸ್ಕರ್ವಿ
- ಡಿ. ಗಾಯ್ ಟರ್
ಉತ್ತರ: ಡಿ) ಗಾಯ್ ಟರ್
06. ಮನುಷ್ಯರಲ್ಲಿ ಸಾಮಾನ್ಯವಾಗಿ ಇರುವ ನಾಡಿಮಿಡಿತ ಎಷ್ಟು.?
- ಎ. ನಿಮಿಷಕ್ಕೆ ಸುಮಾರು 36 ಬಾರಿ
- ಬಿ. ನಿಮಿಷಕ್ಕೆ ಸುಮಾರು 144 ಬಾರಿ
- ಸಿ. ನಿಮಿಷಕ್ಕೆ ಸುಮಾರು 72 ಬಾರಿ
- ಡಿ. ನಿಮಿಷಕ್ಕೆ ಸುಮಾರು 122 ಬಾರಿ
ಉತ್ತರ: ನಿಮಿಷಕ್ಕೆ ಸುಮಾರು 72 ಬಾರಿ
07. ಚರ್ಮದ ಕಂದು ಬಣ್ಣಕ್ಕೆ ಕಾರಣವಾದ ವರ್ಣ ದ್ರವ್ಯವು ಯಾವುದು.?
- ಎ. ಹಿಮೋಗ್ಲೋಬಿನ್
- ಬಿ. ಮೆಲಾನಿನ್
- ಸಿ. ಕ್ಲೋರೊಫಿಲ್
- ಡಿ. ಸೀಬಂ
ಉತ್ತರ: ಬಿ) ಮೆಲಾನಿನ್
08. ಈ ಕೆಳಗಿನವುಗಳಲ್ಲಿ ಹೃದಯಕೆ ರಕ್ತವನ್ನು ಸಾಗಿಸುವುದು ಯಾವುದು.?
- ಎ. ಅಪಧಮನಿಗಳು
- ಬಿ. ಅಭಿದಮನಿಗಳು
- ಸಿ. ನರಗಳು
- ಡಿ. ಸಣ್ಣ ನರಗಳು
ಉತ್ತರ: ಬಿ) ಅಭಿದಮನಿಗಳು
09. ಕರ್ನಾಟಕದಲ್ಲಿ ಭೂಕಂಪ ಮಾಪನ ಕೇಂದ್ರ ಎಲ್ಲಿದೆ.?
- ಎ. ಗೌರಿಬಿದನೂರು
- ಬಿ. ಬೆಂಗಳೂರು
- ಸಿ. ಹುಬ್ಬಳ್ಳಿ
- ಡಿ. ಉಡುಪಿ
ಉತ್ತರ: ಎ) ಗೌರಿಬಿದನೂರು
10. ಮಗಧ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದು.?
- ಎ. ರಾಜಗೀರ್
- ಬಿ. ಪಾಟಲಿ ಪುತ್ರ
- ಸಿ. ವಾರಣಾಸಿ
- ಡಿ. ಭಿಲಸ
ಉತ್ತರ: ಎ) ರಾಜಗೀರ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….