ಬೇಸಿಗೆ ಆರಂಭವಾಗುತ್ತಿದೆ; ಪಿಡಿಓಗಳು ಪೋನ್‌ಗಳನ್ನು ಸ್ವಿಚ್ ಆಫ್ ಮಾಡದೆ ಜವಬ್ದಾರಿಯಿಂದ ವರ್ತಿಸಿ; ಶಾಸಕ ಎಂ ಆರ್ ಪಾಟೀಲ ವಾರ್ನಿಂಗ್

ಹುಬ್ಬಳ್ಳಿ, (ಜ.08); ಧಾರವಾಡ ಜಿಲ್ಲಾ ಕುಂದಗೋಳ ತಾಲ್ಲೂಕು ಪಂಚಾಯತನಲ್ಲಿ ಶಾಸಕ ಎಂ.ಆರ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ಸೋಮವಾರದಂದು ಜರುಗಿತು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವರದಿಯನ್ನು ಮಂಡಿಸಿದರು.

ಸಾರಿಗೆ ಇಲಾಖೆಯಿಂದ ವಿವಿಧ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಕೊರತೆ ಹಾಗೂ ಕುಂದಗೋಳ ಬಸ್ ನಿಲ್ದಾಣದಲ್ಲಿ ಅಹಿತಕರ ಘಟನೆಗಳು ನಡಿಯುತ್ತಿದ್ದು. ಸ್ವಚ್ಚತೆ ಇಲ್ಲದೆ ಸೊಳ್ಳೆ ಕ್ರೀಮಿ ಕಿಟಗಳ ಕಾಟ ಹೆಚ್ಚಾಗಿದೆ ಹಾಗೂ ಪೋಲಿಸ್ ಇಲಾಖೆಯಿಂದ ಯಾವುದೇ ಭದ್ರತೆ ಇಲ್ಲದಂತಾಗಿದೆ. ಸಿ ಸಿ ಕ್ಯಾಮರಾ ಸಹ ಅಹಳವಡಿಸದೆ ಮಹಿಳೆಯರಿಗೆ  ಸುರಕ್ಷತೆ ಇಲ್ಲದಂತಾಗಿದೆ ಎಂಬುದು ಸಭೆಯಲ್ಲಿ ಕೇಳಿಬಂದಿತು. ಇದಕ್ಕೆ ಸಾರಿಗೆ ಅಧಿಕಾರಿ ಉತ್ತರಿಸಿ ಇವೆಲ್ಲವನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.

ಆಹಾರ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ. ಪಂಡಿತರ ಚಿಟಿಗಾಗಿ. 1581ಆನಲೈನ  ಅಪ್ಲಿಕೇಶನ್ ಇದ್ದು. ಇದರಲ್ಲಿ 261 ರಿಜೆಕ್ಟ ಆಗಿದ್ದು.604 ಮಂಜೂರಾತಿಯಾಗಿವೆ.ನಮಗೆ 15 ದಿನ ಸಮಯ ಮಾತ್ರ ಕೊಟ್ಟಿದ್ದು. ಆ ಸಮಯ ಮುಗಿದಿದೆ. ಮುಂದಿನ ದಿನಗಳಲ್ಲಿ ಉಳಿದವುಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.

ಅಬಕಾರಿ ಇಲಾಖೆ ಅಧಿಕಾರಿ ಪೇಮ್ ಸಿಂಗ್ ಮಾತನಾಡಿ ಲೈಸೆನ್ಸ್ ಪರಮಿಶನ್ ಇಲ್ಲದೆ‌‌ 2 ಹಳ್ಳಿಯಲ್ಲಿ  ಸರಾಯಿ (ಮದ್ಯ) ಸರಬರಾಜು ಮಾಡುತ್ತಿದ್ದವರ ಮೇಲೆ ಕೇಸ ಮಾಡಿದ್ದೆವೆ. ಹಾಗೂ 08 ಬಾರಗಳ ಮೇಲೆ ಕೆಸ ಹಾಕಿದ್ದೇವೆ. ನಮ್ಮಲ್ಲಿ ಇಬ್ಬರು ಸಭ್ ಇನಸಪೆಕ್ಟರ ಹಾಗೂ ಪಿಲ್ಡ ಆಫಿಸರ ಇಲ್ಲದೆ ತೊಂದರೆ ಆಗುತ್ತಿದೆ ಎಂದು ತಮ್ಮ ಸಿಬ್ಬಂದಿ ಕೊರತೆ ಬಗ್ಗೆ ತಮ್ಮ ಅಳಲು ಹೇಳಿಕೊಂಡರು.

ಈ ಸಮಯದಲ್ಲಿ ಭರದ್ವಾಡ  ಸ್ಕೂಲ್ ನಲ್ಲಿ ಪಾಕಿಟಗಳ ಹಾವಳಿ ಜಾಸ್ತಿ ಆಗಿದೆ ಅದರ ಬಗ್ಗೆ ನಿಗಾ ವಹಿಸಿ ಎಂದು ಭರದ್ವಾಡ ಪಿಡಿಒ ನಧಾಪ್ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಶಾಸಕ ಎಂ ಆರ್ ಪಾಟೀಲ ತತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುತ್ತಿರುವ ಜೆ.ಜೆ.ಎಮ್ ಕಾಮಗಾರಿಯ ಕಾಂಕ್ರೀಟ್ ಹಾಕಲಾಗಿದ್ದು ಅದು ಎಲ್ಲದರಲ್ಲಿ ಒಡೆದು ಹಾಳಾಗಿದ್ದು ಅವುಗಳನ್ನು ಬೇಗನೆ ಸರಿಪಡಿಸಲು ಸೂಚಿಸಿದರು. ಆಹಾರ ಇಲಾಖೆಯಲ್ಲಿ ರೇಷನ ಕಾರ್ಡ ಮಾಡಲು ಲಂಚದ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಬಡ ಜನತೆಗೆ ಅನೂಕೂಲ ಮಾಡಿಕೊಂಡಬೇಕೆಂದು ಹೇಳಿದರು. 

ಗ್ರಾಮೀಣ ಪ್ರದೇಶಗಳಲ್ಲಿ ಸಾರಾಯಿ (ಮದ್ಯ) ಹಾವಳಿ ಹೆಚ್ಚಾಗಿದ್ದು ಇದರಲ್ಲಿ ಲೈಸೆನ್ಸ್ ಇಲ್ಲದೆ ಸಾರಾಯಿ (ಮದ್ಯ) ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿರು. ಮತ್ತು ಬೇಸಿಗೆ ಸಮೀಪಿಸುತ್ತಿದೆ ಎಲ್ಲಾ ಗ್ರಾಮ ಮಟ್ಟದ ಪಿಡಿಓಗಳು ಸರಿಯಾಗಿ ಪೋನಗಳನ್ನು ಸ್ವಿಚ್ ಆಪ್ ಮಾಡದೆ ನೀರಿನ ತೊಂದರೆ ಆಗದಂತೆ ನಿಗಾ ವಹಿಸಿ ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್.ಕುರಿ, ತಹಶಿಲ್ದಾರರಾದ ಅಶೋಕ ಶಿಗ್ಗಾಂವಿ. ಹಾಗೂ  ತಾಲ್ಲುಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!